Skip to main content
ವಿಡಿಯೋ
crime

ಧರ್ಮಸ್ಥಳ ಪ್ರಕರಣ: ಮಾಸ್ಕ್‌ ಮ್ಯಾನ್‌ ಚಿನ್ನಯ್ಯ (ಭೀಮ)ನ ಗುರುತು ಬಹಿರಂಗ..!

By Vinutha U
ಧರ್ಮಸ್ಥಳ ಪ್ರಕರಣ: ಮಾಸ್ಕ್‌ ಮ್ಯಾನ್‌ ಚಿನ್ನಯ್ಯ (ಭೀಮ)ನ ಗುರುತು ಬಹಿರಂಗ..!

ಭೀಮನು 1994ರವರೆಗೆ ಚಿಕ್ಕಬಳ್ಳಿಯಲ್ಲಿ ವಾಸಿಸುತ್ತಿದ್ದ ಯಾವುದೇ ಕೆಲಸ ಇಲ್ಲದೇ ಬೀದಿ ಬೀದಿ ತಿರುಗಾಡುತಿದ್ದ. ಆದರೆ ಈತನ ತಂದೆ-ತಾಯಿಗೆ ಗ್ರಾಮದಲ್ಲಿ ಒಳ್ಳೆಯ ಹೆಸರಿದೆ.

ಧರ್ಮಸ್ಥಳ ಪ್ರಕರಣದಲ್ಲಿ “ಮಾಸ್ಕ್‌ ಮ್ಯಾನ್”‌ ಎಂದು ಕರೆಯಲ್ಪಟ್ಟಂತಹ ವ್ಯಕ್ತಿಯನ್ನು ಭೀಮ ಎದಮು ಕರೆಯಲಾಗುತ್ತಿತ್ತು, ಆದರೆ ಇದೀಗ ಆತನ  ಹೆಸರು ಚಿನ್ನಯ್ಯ ಎಂದು ತಿಳಿದುಬಂದಿದೆ.  ಈತ ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದವನು ಎಂದು ಗ್ರಾಮಸ್ಥರು ದೃಢಪಡಿಸಿದ್ದಾರೆ. ಭೀಮನು 1994ರವರೆಗೆ ಚಿಕ್ಕಬಳ್ಳಿಯಲ್ಲಿ ವಾಸಿಸುತ್ತಿದ್ದ ಯಾವುದೇ ಕೆಲಸ ಇಲ್ಲದೇ ಬೀದಿ ಬೀದಿ ತಿರುಗಾಡುತಿದ್ದ. ಆದರೆ ಈತನ ತಂದೆ-ತಾಯಿಗೆ ಗ್ರಾಮದಲ್ಲಿ ಒಳ್ಳೆಯ ಹೆಸರಿದೆ.

ಭೀಮನ ಮೊದಲ ಪತ್ನಿಯು ಆತನು ಸುಳ್ಳು ಹೇಳುತ್ತಿದ್ದಾನೆ ಎಂದು ಆರೋಪಿಸಿದ್ದು, ದುಡ್ಡಿನ ಆಮಿಷಕ್ಕೆ ರೀತಿಯ ಆರೋಪಗಳನ್ನು ಮಾಡುತ್ತಿರಬಹುದು ಎಂದು ಹೇಳಿದ್ದಾಳೆ. ಅವರ ಪ್ರಕಾರ, ಭೀಮನ ಗುಣ ಸರಿಯಿರಲಿಲ್ಲ ಮತ್ತು ಆತ ಯಾವಾಗಲು ಸುಳ್ಳು ಮಾತನಾಡುತ್ತಿದ್ದ, ಜೊತೆಗೆ ಹೊಡೆಯುವ ಮತ್ತು ಕೆಟ್ಟ ಮಾತುಗಳಿಂದ ಬೈಯುತ್ತಿದ್ದ ಎಂದು ತಿಳಿಸಿದ್ದಾಳೆ.

Toochki Top for Women | Lycra Crop Tops | Black White Beige Grey | Short | Western | Pack of 3 Combo

ಪ್ರಕರಣದಲ್ಲಿ ಎಸ್ಐಟಿ ತನಿಖೆ ತೀವ್ರಗೊಳಿಸಿದ್ದು, ಭೀಮನಿಂದ ತೋರಿಸಲ್ಪಟ್ಟ 13 ಸ್ಥಳಗಳಲ್ಲಿ ಉತ್ಖನನ ನಡೆಸಿದರೂ ಕೇವಲ ಎರಡು ಸ್ಥಳಗಳಲ್ಲಿ ಮಾತ್ರ ಮೂಳೆಗಳು ಪತ್ತೆಯಾಗಿವೆ. ಆರೋಪಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಲು ತನಿಖೆ ಇನ್ನೂ ಮುಂದುವರೆದಿದೆ.