ಧರ್ಮಸ್ಥಳ ಪ್ರಕರಣದ ಕಿಡಿ ತಣ್ಣೀರೆರೆಚುವ ಕೈವಾಡದ ಶಂಕೆಗೆ ಬಿತ್ತು ಕಡಿವಾಣ. ಅನನ್ಯ ಭಟ್ ಅನ್ನೋ ಮಗಳೇ ಇಲ್ಲ ಎಂದು ಸುಳ್ಳು ಹೇಳಿಕೆಗೆ, ಸುಜಾತ ಭಟ್ ಅವರು ಇನ್‌ಸೈಟ್‌ರಶ್ ವರದಿ ಮಾಡಿದ ತಪ್ಪೊಪ್ಪೊಗೆ ಬೆನ್ನಲ್ಲೇ, ಅನಾಮಿಕನ ಬಣ್ಣವೂ ಬಯಲು ಮಾಡಿದ ಎಸ್‌ಐಟಿ. ಇದೀಗ ವಿಟ್‌ನೆಸ್ ಪ್ರೊಟೆಕ್ಷನ್ ಆಕ್ಟ್ ಪ್ರಕಾರ ಬಚಾವಾಗಿದ್ದ ಈತ ತಾನು ಹೇಳಿರುವುದೆಲ್ಲ ಸುಳ್ಳು, ಬುರುಡೆ ಎಲ್ಲಿಂದ ತಂದರೋ ನನಗೆ ಗೊತ್ತಿಲ್ಲ, ಒಪ್ಪಿಸಲು ನನಗೆ ಹೇಳಿದ್ರು ಎಂದ ಅನಾಮಿಕನ ಬಂಧನವಾಗಲಿದೆ.
ನೆನ್ನೆ ಇಡೀ ದಿನ ಈತನ ವಿಚಾರಣೆ ನಡೆಸಿರುವ ಪ್ರಣಬ್ ಮೊಹಂತಿ ಅವರ ಸಮ್ಮುಖದಲ್ಲಿ ಮಾಸ್ಕ್ ಮ್ಯಾನ್ ಎಂಬುವವನ ಹಿನ್ನಲೆ ಬಗ್ಗೆ ಪತ್ತೆಹಚ್ಚಲಾಗಿದೆ. ಸಿ. ಎ. ಚಿನ್ನಯ್ಯ ಎಂಬ ಹೆಸರಿನ ಅನಾಮಿಕ ಬುರುಡೆ ಕಥೆಯಿದ್ದ ಹುಯಿಲೆಬ್ಬಿಸಿದ್ದ ಈತನನ್ನು ಇದೀಗ ಬೆಳ್ತಂಗಡಿ ಕೋರ್ಟ್‌ಗೆ ಎಸ್‌ಐಟಿಯಿಂದ ಹಾಜರು, ಇದರಿಂದ ವಾಸ್ತವದ ಬಟಬಯಲಾಗಿದೆ ಎನ್ನಲಾಗಿದೆ.
ನಾನು ಹೇಳಿಸಿದಂತೆ ಮಾಡಿದೆ ಎಂದು ಹೇಳಿಕೆ ನೀಡಿರುವ ಈತನಿಂದ ಈ ಹಿಂದಿರುವ, ಶವ ಹೂತಿದ್ದೆ ಎಂಬುದಕ್ಕೂ ಪ್ರಕರಣಕ್ಕೂ ಸೂತ್ರಧಾರಿಗಳಿಗೂ ಸಂಕಷ್ಟ ಎದುರಾಗಿದೆ. ಪ್ರಾಥಮಿಕ ವೈದ್ಯಕೀಯ ತಪಾಸಣೆಗೆ ಒಳಗಾಗಿರುವ ಈತ, ತಾನು ತೋಡಿದ್ದ ಗುಂಡಿಗೆ ಬಿದ್ದ ದೂರುದಾರ ಹಾಗೂ ಬುರುಡೆ ಗ್ಯಾಂಗ್ ಅಸಲಿ ಮುಖ ಕಳಚಿಹಾಕಲು ಕ್ಷಣಗಣನೆ. ಚಿನ್ನಯ್ಯ ಸಂಬಂಧಿ ಮಾಹಿತಿಯೂ ನೀಡಿದ್ದ, ಈತ ಸುಳ್ಳು ಹೇಳುವ ಚತುರ, ಕಾನೂನಿನ ಕುಣಿಕೆಯಲ್ಲಿ ಧರ್ಮಸ್ಥಳ ವಿರೋಧ ಗ್ಯಾಂಗ್ ಮಹೇಶ್ ಎಂಬುವವರು ಆತನ ಫೋಟೋವನ್ನು ರಿವೀಲ್ ಮಾಡಲಾಗಿದೆ.
ನಾನು ಕೇವಲ ಪಾತ್ರಧಾರಿ, ಅವರು ಸೂತ್ರದಾರರು ವಿಚಾರಣೆಯಿಂದ ಬಯಲಾಯ್ತು ಸತ್ಯ
ವ್ಯಾಸಂಗ ಪ್ರಮಾಣ ಪತ್ರದಿಂದ ಗೊತ್ತಾದ ಮಾಸ್ಕ್ ಮ್ಯಾನ್‌ನ ಹಿನ್ನಲೆ ನಿಜ ಷಡ್ಯಂತ್ರ ಬಯಲು ಮಾಡಿದ ಎಸ್‌ಐಟಿ ಕಚೇರಿ ವಿಚಾರಣೆ ಎಲ್ಲಾ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿದೆ ಈ ಬೆಳವಣಿಗೆ ಇನ್ನಷ್ಟು ನಿಖರ ತನಿಖೆ, ಹಲವರ ಬಂಧನ ನಿರೀಕ್ಷಿಸಲಾಗಿದೆ ಎನ್ನಲಾಗಿದೆ.
ಮಾಸ್ಕ್‌ಮ್ಯಾನ್ ಮೇಜರ್ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ -
ತನಿಖೆಗೆ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ತನಿಖೆಯಿಂದ ಸತ್ಯ ಬೆಳಕಿಗೆ ಬರಲಿದೆ. ಕ್ರಮ ಕೈಗೊಳ್ಳುವ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ, ಗೃಹ ಸಚಿವರು ಹೇಳಿದ್ದಾರೆ. ಅವರ ಇವರ ಪರ ನಾವಿಲ್ಲ. ಧರ್ಮ ರಾಜಕಾರಣ ಮಾಡಬೇಡಿ. ನ್ಯಾಯದ ಪರವಾಗಿ ನಾವಿದ್ದೇವೆ. ಈ ಬಗ್ಗೆ ಹೋಮ್ ಮಿನಿಸ್ಟರ್ ನೋಡಿಕೊಳ್ಳತ್ರಾರೆ ಎಂದವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಗಿರೀಶ್ ಮಟ್ಟಣ್ಣನವರ್ ವಿರುದ್ಧ ಆತ್ಮಹತ್ಯೆ ಒತ್ತಡ ಆರೋಪ..!