ಬೆಂಗಳೂರು: ಓದುಗರೆ, ಇನ್ಸೈಟ್ ರಷ್ ನ್ಯೂಸ್ ಸಾಮಾಜಿಕ ಜಾಲತಾಣವಾದ ಯೂಟ್ಯೂಬ್‌ನಲ್ಲಿ ಸಕ್ರಿಯವಾಗಿದೆ. ಯಾವಾಗಲೂ ಸತ್ಯ, ನ್ಯಾಯ, ನಿಷ್ಠೆಯ ಪರವಾಗಿರುವ ಈ ಯೂಟ್ಯೂಬ್ ಚಾನೆಲ್ ಈಗಾಗಲೇ ಹಲವಾರು ಗಣ್ಯರ ಸಂದರ್ಶನವನ್ನು ಮಾಡಿದೆ. ಬೆಂಗಳೂರಿನ ಹಲವು ಸಮಸ್ಯೆಗಳ ಬಗ್ಗೆ ದನಿ ಎತ್ತಿದ ಕೆಲಸವನ್ನು ಮಾಡಿದೆ.
ಈ ನಡುವೆ ಧರ್ಮಸ್ಥಳ ಪ್ರಕರಣ ಸದ್ದು ಮಾಡುವ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಹೋಗಿ ಅಲ್ಲಿಂದಲೇ ನೇರ ಸಂದರ್ಶನಗಳು, ಮತ್ತು ಸ್ಥಳ ಪರಿಚಯ ಹೀಗೆ ಇತ್ತೀಚಿನ ಹಲವಾರು ವಿಡಿಯೋಗಳನ್ನು ನಮ್ಮ ಚಾನೆಲ್ನ ಮೂಲಕ ಪ್ರಸಾರ ಮಾಡಿದ್ದೆವು. ಅದು ನಮಗೆ ಹೆಮ್ಮೆಯ ವಿಷಯವೇ ಸರಿ.
ಧರ್ಮಸ್ಥಳದ ಬಗ್ಗೆ ಹಲವಾರು ಆರೋಪಗಳಿದ್ದರೂ ಅದಕ್ಕೆ ಯಾವುದೇ ಸಾಕ್ಷಾವಿಲ್ಲ, ಹೀಗಾಗಿ ಸುಮ್ಮನೆ ಅಪಪ್ರಚಾರ ಮಾಡಿಕೊಂಡು ಓಡಾಡುವುದು ಕೆಲವರ ಚಾಳಿಯಾಗಿದೆ, ಧರ್ಮಸ್ಥಳದ ವಿರುದ್ಧ ನಿಮ್ಮ ಬಳಿ ಸಾಕ್ಷಿ ಇದ್ದರೆ ಅದನ್ನು ಕಾನೂನಿನ ಮುಂದೆ ಇಡಿ, ಅದನ್ನು ಬಿಟ್ಟು ಸುಮ್ಮನೆ ಮಾಧ್ಯಮಗಳ ಮುಂದೆ ಬಂದು ಧರ್ಮಸ್ಥಳ ಭಕ್ತರ ಮತ್ತು ಸಾರ್ವಜನಿಕರ ಜೀವನದಲ್ಲಿ ಅಶಾಂತಿಯನ್ನು ನೆಲೆಸುವಂತೆ ಮಾಡುತ್ತಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಇನ್ಸೈಟ್ ರಷ್ ನ್ಯೂಸ್ ಚಾನೆಲ್‌ಗೆ ಇತ್ತು, ಇದು ಸಾಮಾಜಿಕ ಕಳಕಳಿಯೂ ಹೌದು, ಹೀಗಾಗಿ ಆಳವಾದ ಅಧ್ಯಯನಕ್ಕಿಳಿದ ಇನ್ಸೈಟ್ ರಷ್ ನ್ಯೂಸ್, ತನ್ನ ಟೀಮ್‌ನ ಮೂಲಕ ಸುಜಾತ ಭಟ್ ಅವರನ್ನು ಕಾಂಟ್ಯಾಕ್ಟ್ ಮಾಡಿದರು.
ಅವರಿಗೆ ಯಾವುದೇ ತೊಂದರೆ ನೀಡದೆ ಅವರು ಹೇಳಿದ ಮಾತುಗಳೆಲ್ಲ ಅವರದ್ದೇ ಆಗಿದ್ದು ನೀವೆಲ್ಲರೂ ನೋಡಿದ್ದೀರಿ. ಹೀಗಾಗಿ ಸುಜಾತ ಭಟ್ಟ್ ಅವರು ಮೀಡಿಯಾ ಮತ್ತು ಮಾಧ್ಯಮಗಳ ಮುಂದೆ ಹೇಳಿದ್ದ ಮಾತು ಬರಿ ಸುಳ್ಳಲ್ಲ ಅದೊಂದು ದೊಡ್ಡ ಕಟ್ಟುಕಥೆ, ಯಾವ ಸಿನಿಮಾಗೂ ಸಹ ಕಮ್ಮಿ ಇಲ್ಲದ ದೊಡ್ಡ ಕಟ್ಟುಕಥೆಯನ್ನು ಭೇದಿಸಿ ಕರ್ನಾಟಕ ರಾಜ್ಯದ ಮುಂದಷ್ಟೇ ಅಲ್ಲದೆ ಭಾರತವನ್ನು ಬಿಟ್ಟು ಬೇರೆ ಸ್ಥಳಗಳಲ್ಲಿ ನೆಲೆಸಿರುವ ಧರ್ಮಸ್ಥಳದ ಮಂಜುನಾಥೇಶ್ವರ ಸ್ವಾಮಿಯ ಭಕ್ತರಿಗೂ ಸಹ ಸತ್ಯದರ್ಶನವಾಗಿದೆ ಎಂದರೆ ತಪ್ಪಿಲ್ಲ, ಹೀಗಾಗಿ ನಿಮ್ಮ ಬೆಂಬಲ ನಮಗೆ ಅತಿ ಅಗತ್ಯವಾಗಿದೆ. ನಿಮ್ಮ ಬೆಂಬಲ ನಮಗಿದ್ದರೆ ಮುಂದೆ ಇಂತಹ ಸಾಕಷ್ಟು ವಿಚಾರಗಳನ್ನು ನಿಮ್ಮ ಮುಂದೆ ಇಡುತ್ತೇವೆ ಅದರಲ್ಲಿ ಯಾವುದೇ ಅನುಮಾನವಿಲ್ಲ. ಜೈ ಹಿಂದ್
-ಟೀಮ್ ಇನ್‌ಸೈಟ್ ರಷ್ ನ್ಯೂಸ್