Skip to main content
ವಿಡಿಯೋ
politics

ಗೃಹ ಸಚಿವರ ವಿರುದ್ಧ ತೀವ್ರ ವಾಗ್ದಾಳಿ: "ಕಾನೂನು ಅಸ್ತವ್ಯಸ್ತ- ಅಪರಾಧಗಳಿಗೆ ರಾಜ್ಯ ಅಡಗುತಾಣವಾಗಿದೆ"!

By Shravanthi R
ಗೃಹ ಸಚಿವರ ವಿರುದ್ಧ ತೀವ್ರ ವಾಗ್ದಾಳಿ: "ಕಾನೂನು ಅಸ್ತವ್ಯಸ್ತ- ಅಪರಾಧಗಳಿಗೆ ರಾಜ್ಯ ಅಡಗುತಾಣವಾಗಿದೆ"!

ರಾಜ್ಯ ಉಗ್ರರ ಅಡಗುತಾಣವಾಗಿದೆ, ಅಕ್ರಮ ಚಟುವಟಿಕೆಗಳಿಗೆ ಬೀಡಾಗಿದೆ, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಮತ್ತು ಡ್ರಗ್ಸ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಅಂಕಿ-ಅಂಶಗಳ ಮೂಲಕ ಬಟಾಬಯಲಾಗಿ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಸಚಿವರು ಅಧಿಕಾರ ವಹಿಸಿಕೊಂಡ ನಂತರ ಸೈಬರ್ ಅಪರಾಧಗಳು, ಉಗ್ರ ಚಟುವಟಿಕೆಗಳು ಮತ್ತು ಡ್ರಗ್ಸ್ ದಂಧೆ ಹೆಚ್ಚಾಗಿದೆ ಎಂದು ಪ್ರತಿಪಕ್ಷಗಳು ಹರಿಹಾಯ್ದಿವೆ.

ಪ್ರಸ್ತುತ ಧರ್ಮಸ್ಥಳ ಪ್ರಕರಣವು ಭುಗಿಲೆಬ್ಬಿಸಿರುವ ಸಂದರ್ಭದಲ್ಲಿ, ಸಚಿವರು ಗೃಹ ಸಚಿವರಾದ ಮೇಲೆ ಸೈಬರ್ ಪ್ರಕರಣಗಳು ಹೆಚ್ಚಾಗಿವೆ, ಕಳೆದ ಮೂರು ವರ್ಷಗಳಲ್ಲಿ, ಸೈಬರ್‌ ಪ್ರಕರಣಗಳು ಹೆಚ್ಚಾಗಿದ್ದು, 3.5 ಕೋಟಿಗೂ ಅಧಿಕ ವಂಚನೆ ಉಂಟಾಗಿದೆ. 53, 345 ಪ್ರಕರಣಗಳು ದಾಖಲಾಗಿದೆ ಎಂದು ಮಾಹಿತಿ ತಿಳಿಸಿವೆ.

ರಾಜ್ಯ ಉಗ್ರರ ಅಡಗುತಾಣವಾಗಿದೆ, ಅಕ್ರಮ ಚಟುವಟಿಕೆಗಳಿಗೆ ಬೀಡಾಗಿದೆ, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಮತ್ತು ಡ್ರಗ್ಸ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಅಂಕಿ-ಅಂಶಗಳ ಮೂಲಕ ಬಟಾಬಯಲಾಗಿ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

Braun Silk-Epil 9 Flex 9-060, Flexible Head for Easier Hair Removal, Anti-Slip Grip and Pressure Control for Effortless Hair Removal, Deep Body Exfoliation Brush, Pouch Epilator for Women

ಅಪರಾಧಿಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ, ಗೃಹ ಸಚಿವರ "ಮೂರು ವರ್ಷಗಳ ಸಾಧನೆ"ಯನ್ನು ಟೀಕಿಸಿರುವ ಮೂಲಕ, "ನಿಮ್ಮ ಈ ಸಾಧನೆಗಳ ನಂತರವೂ ಚಾಟ್‌ಜಿಪಿಟಿ ನೋಡಿ ಎಂದು ಹೇಳಬೇಡಿ" ಎಂದು ವ್ಯಂಗ್ಯವಾಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಲಿವೆಯಾ? ಇದಕ್ಕೆ ಆಡಳಿತ ಪಕ್ಷವು ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಧರ್ಮಸ್ಥಳ ಅಸ್ಥಿಪಂಜರ ಕೇಸ್: SIT ತನಿಖೆಗೆ ಮತ್ತಷ್ಟು ವೇಗ..ಮುಸುಕುಧಾರಿ ಚಿನ್ನಯ್ಯ 10 ದಿನ ಕಸ್ಟಡಿಗೆ..!