ತುಮಕೂರು: ತುಮಕೂರು ವಿಶ್ವವಿದ್ಯಾಲಯಕ್ಕೆ ಕರ್ನಾಟಕ ರತ್ನ, ತ್ರಿವಿಧ ದಾಸೋಹಿಗಳಾದ ಡಾ. ಶಿವಕುಮಾರ ಸ್ವಾಮೀಜಿಯವರ ಹೆಸರು ಮರುನಾಮಕರಣ ಮಾಡುವಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಈ ಮನವಿಯನ್ನು ಸಲ್ಲಿಸಿದ್ದಾರೆ. ವಿ. ಸೋಮಣ್ಣ ಅವರು ತಮ್ಮ ಪತ್ರದಲ್ಲಿ, ಡಾ. ಶಿವಕುಮಾರ ಸ್ವಾಮೀಜಿಯವರ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆಯನ್ನು ಎತ್ತಿ ತೋರಿಸಿದ್ದಾರೆ. ನಡೆದಾಡುವ ದೇವರು ಎಂದೇ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವ ಸಿದ್ದಗಂಗಾ ಮಠದ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು ರಾಜ್ಯದಾದ್ಯಂತ ಸಾವಿರಾರು ಕುಟುಂಬಗಳಿಗೆ ಉಚಿತ ಶಿಕ್ಷಣ, ವಸತಿ ಮತ್ತು ದಾಸೋಹವನ್ನು ಒದಗಿಸಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅವರ ಪ್ರಗತಿಗೆ ಕಾರಣರಾಗಿದ್ದಾರೆ.ಇದನ್ನೂ ಓದಿ: ಒಬ್ಬ ಮುಸುಕುಧಾರಿ, ಒಂದು ರಾಜ್ಯ ಯಂತ್ರಾಂಗವನ್ನು ಮೂರ್ಖರನ್ನಾಗಿ ಮಾಡಿದನು: ಕೆ. ಅಣ್ಣಾಮಲೈ
ಇಂತಹ ಮಹಾನ್ ಸಂತರ ಹೆಸರನ್ನು ತುಮಕೂರು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡುವುದು ಅವರಿಗೆ ಗೌರವ ಸಲ್ಲಿಸುವ ಜೊತೆಗೆ ಯುವಜನರಿಗೆ ಸ್ಪೂರ್ತಿಯಾಗಲಿದೆ, ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಸೋಮಣ್ಣ ಅವರು ತುಮಕೂರು ಜಿಲ್ಲೆಯ ಜನತೆಯ ಪರವಾಗಿ, ವಿಶ್ವವಿದ್ಯಾಲಯಕ್ಕೆ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಕೋರಿದ್ದಾರೆ. ಸಿದ್ದಗಂಗಾ ಮಠವು ಕರ್ನಾಟಕದ ಪ್ರಮುಖ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರಗಳಲ್ಲಿ ಒಂದಾಗಿದೆ. 1930ರಲ್ಲಿ ಪೀಠಾಧಿಪತಿಗಳಾದ ಡಾ. ಶಿವಕುಮಾರ ಸ್ವಾಮೀಜಿಯವರು 87 ವರ್ಷಗಳ ಕಾಲ ಸಮಾಜಕ್ಕೆ ಶಿಕ್ಷಣ, ಆಹಾರ ಮತ್ತು ವಸತಿಯ ಮೂಲಕ ಸೇವೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ಚಿನ್ನಯ್ಯ 10 ದಿನಗಳ ಕಾಲ SIT ವಶದಲ್ಲಿ...ಪ್ರಕರಣದ ಬಗ್ಗೆ ವಿಸ್ತೃತ ವಿಚಾರಣೆಗೆ ತಯಾರಿ!
ರಾಜ್ಯದ ವಿವಿಧ ಸಮುದಾಯಗಳಿಂದ ಬಂದ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸಿ, ಅವರ ಜೀವನವನ್ನು ಉನ್ನತಿಗೊಳಿಸಿದ ಕೀರ್ತಿ ಸ್ವಾಮೀಜಿಯವರಿಗೆ ಸಲ್ಲುತ್ತದೆ. ಪದ್ಮಭೂಷಣ ಪುರಸ್ಕೃತರಾದ ಇವರನ್ನು ನಡೆದಾಡುವ ದೇವರು” ಎಂದು ಜನತೆ ಗೌರವದಿಂದ ಕರೆಯುತ್ತಾರೆ. ತುಮಕೂರು ವಿಶ್ವವಿದ್ಯಾಲಯಕ್ಕೆ ಶಿವಕುಮಾರ ಸ್ವಾಮೀಜಿಯವರ ಹೆಸರು ನಾಮಕರಣ ಮಾಡುವ ಪ್ರಸ್ತಾಪಕ್ಕೆ ಸ್ಥಳೀಯ ಜನತೆ, ಭಕ್ತರು ಮತ್ತು ಶಿಕ್ಷಣ ತಜ್ಞರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ಕ್ರಮವು ಸ್ವಾಮೀಜಿಯವರ ಶಿಕ್ಷಣ ಕ್ಷೇತ್ರದ ಕೊಡುಗೆಗೆ ಶಾಶ್ವತ ಗೌರವವನ್ನು ಸಲ್ಲಿಸಲಿದೆ ಎಂದು ತುಮಕೂರಿನ ಜನತೆ ಭಾವಿಸಿದ್ದಾರೆ. ಈ ಪತ್ರದ ಮೂಲಕ ವಿ. ಸೋಮಣ್ಣ ಅವರು ರಾಜ್ಯ ಸರ್ಕಾರವನ್ನು ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ತುಮಕೂರು ಜಿಲ್ಲೆಯ ಜನತೆಯ ಒಕ್ಕೊರಲಿನ ಒತ್ತಾಯದಂತೆ, ರಾಜ್ಯ ಸರ್ಕಾರ ಈ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿ, ಅಗತ್ಯ ಅನುಮೋದನೆಯನ್ನು ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.JUNEBERRY® Oversize Loose Baggy Fit Drop Shoulder Cool and Stylish Latest Pocket Print Print Design Multicolor Half Sleeve T-Shirt for Women & Girls