ಭುವನೇಶ್ವರ, ಆಗಸ್ಟ್ 24, 2025: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಆಗಸ್ಟ್ 23, 2025 ರಂದು ಮಧ್ಯಾಹ್ನ 12:30 ಗಂಟೆಗೆ ಒಡಿಶಾದ ಕರಾವಳಿಯ ಚಾಂದಿಪುರದ ಸಂಯೋಜಿತ ಪರೀಕ್ಷಾ ಕೇಂದ್ರ (ಐಟಿಆರ್)ನಲ್ಲಿ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ (ಐಎಡಿಡಬ್ಲ್ಯೂಎಸ್)ನ ಮೊದಲ ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ. ಈ ಸಂಪೂರ್ಣ ಸ್ವದೇಶಿ ಬಹು-ಪದರದ(layered) ವಾಯು ರಕ್ಷಣಾ ವ್ಯವಸ್ಥೆಯು ಆತ್ಮನಿರ್ಭರ ಭಾರತದ ದೃಷ್ಟಿಯಡಿಯಲ್ಲಿ ಭಾರತದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲನ್ನು ಗುರುತಿಸಿದೆ.
ಐಎಡಿಡಬ್ಲ್ಯೂಎಸ್‌ನ ಪ್ರಮುಖ ಲಕ್ಷಣಗಳು- ಐಎಡಿಡಬ್ಲ್ಯೂಎಸ್ ವಿಮಾನಗಳು, ಡ್ರೋನ್ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ನಿಖರ-ಮಾರ್ಗದರ್ಶಿತ ಶಸ್ತ್ರಾಸ್ತ್ರಗಳಂತಹ ವಿವಿಧ ವೈಮಾನಿಕ ದಾಳಿಗಳನ್ನು ಎದುರಿಸಲು ವಿನ್ಯಾಸಗೊಳಿಸಲಾಗಿದೆ. ಈ ವ್ಯವಸ್ಥೆಯು ಮೂರು ಪ್ರಮುಖ ಘಟಕಗಳನ್ನು ಒಳಗೊಂಡಿದೆ:
ಕ್ವಿಕ್ ರಿಯಾಕ್ಷನ್ ಸರ್ಫೇಸ್-ಟು-ಏರ್ ಮಿಸೈಲ್ (ಕ್ಯೂಆರ್ಎಸ್ಎಎಂ): ಮಧ್ಯಮ ದೂರದ ವೈಮಾನಿಕ ಗುರಿಗಳ ತಡೆಗಟ್ಟುವಿಕೆಗೆ.
ಅಡ್ವಾನ್ಸ್ಡ್ ವೆರಿ ಶಾರ್ಟ್ ರೇಂಜ್ ಏರ್ ಡಿಫೆನ್ಸ್ ಸಿಸ್ಟಮ್ (ವಿಎಸ್ಎಚ್ಒಆರ್ಎಡಿಎಸ್): ಕಡಿಮೆ ಎತ್ತರದ ದಾಳಿಯನ್ನು ಹತ್ತಿರದಿಂದ ತಡೆಗಟ್ಟುವಿಕೆಗೆ.ಚಿತ್ರದುರ್ಗದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ಗ್ಯಾಂಗ್‌ಟಾಕ್‌ನಿಂದ ಬಂಧಿಸಿ ಬೆಂಗಳೂರಿಗೆ ಕರೆತಂದ ಇ.ಡಿ ಅಧಿಕಾರಿಗಳು
ಹೈ-ಪವರ್ ಲೇಸರ್-ಆಧಾರಿತ ಡೈರೆಕ್ಟೆಡ್ ಎನರ್ಜಿ ವೆಪನ್ (ಡಿಇಡಬ್ಲ್ಯೂ): ಡ್ರೋನ್ಗಳು ಮತ್ತು ಕಡಿಮೆ ಎತ್ತರದ ದಾಳಿಯನ್ನು ನಿಖರವಾಗಿ ಮತ್ತು ವೇಗವಾಗಿ ತಡೆಗಟ್ಟಲು ಸಹಾಯಕವಾಗಿದೆ.YUISI Sun Hat for Men Women, Breathable Summer Hat for Travel, Hiking, Gardening, Sun Hats for Men & Round Sun Cap for Hiking, Hats for Women Indoor Outdoor Activities
ಈ ಘಟಕಗಳ ಸಂಯೋಜಿತ ಕಾರ್ಯಾಚರಣೆಯನ್ನು ಡಿಫೆನ್ಸ್ ರಿಸರ್ಚ್ & ಡೆವಲಪ್ಮೆಂಟ್ ಲ್ಯಾಬೊರೇಟರಿ (ಡಿಆರ್ಡಿಎಲ್) ಅಭಿವೃದ್ಧಿಪಡಿಸಿದ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ನಿರ್ವಹಿಸುತ್ತದೆ. ವಿಎಸ್ಎಚ್ಒಆರ್ಎಡಿಎಸ್ ಅನ್ನು ರಿಸರ್ಚ್ ಸೆಂಟರ್ ಇಮಾರತ್ (ಆರ್ಸಿಐ) ಮತ್ತು ಡಿಇಡಬ್ಲ್ಯೂ ಅನ್ನು ಸೆಂಟರ್ ಫಾರ್ ಹೈ ಎನರ್ಜಿ ಸಿಸ್ಟಮ್ಸ್ ಅಂಡ್ ಸೈನ್ಸಸ್ (ಸಿಎಚ್ಇಎಸ್ಎಸ್) ಅಭಿವೃದ್ಧಿಪಡಿಸಿದೆ. ಈ ಮಾಹಿತಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.