Skip to main content
ವಿಡಿಯೋ
politics

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿವಾದ: ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರ

By Shravanthi R
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿವಾದ: ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರ

ಬಾನು ಮುಷ್ತಾಕ್ ಅವರ ಆಯ್ಕೆ ವಿವಾದವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ್ತೊಂದು ಜಟಾಪಟಿಗೆ ಕಾರಣವಾಗಿದೆ.

ಈ ಬಾರಿಯ ದಸರಾ ಮಹೋತ್ಸವದ ಉದ್ಘಾಟನೆಗೆ ಲೇಖಕಿ ಹಾಗೂ ಬುಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದು ರಾಜಕೀಯ ವಲಯದಲ್ಲಿ ಜಿದ್ದಾಜಿದ್ದಿಗೆ ಎಡೆ ಮಾಡಿಕೊಟ್ಟಿದೆ. ಬಿಜೆಪಿ ನಾಯಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿರುವುದು ವಿವಾದವಾಗಿ ಪರಿಣಮಿಸಿದೆ.

ಪ್ರತಾಪ್ ಸಿಂಹ ಮತ್ತು ಯತ್ನಾಳ್ ಅಸಮಾಧಾನ

ಬಿಜೆಪಿ ಸಂಸದ ಪ್ರತಾಪ್ ಸಿಂಹ, ಸಾಹಿತ್ಯ ಸಮ್ಮೇಳನದಲ್ಲಿ ಬಾನು ಮುಷ್ತಾಕ್ ಮಾತನಾಡಿದ ವಿಡಿಯೊವೊಂದನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡು ತೀವ್ರ ಆಕ್ರೋಶ ಹೊರಹಾಕಿದ್ದಾರೆ. "ಕನ್ನಡ ಭಾಷೆಯನ್ನು 'ಭುವನೇಶ್ವರಿ' ಎಂದು, ಅದನ್ನು 'ಚಾಮುಂಡೇಶ್ವರಿ' ಎಂದು ಒಪ್ಪದವರು ದಸರಾ ಉತ್ಸವಕ್ಕೆ ಪುಷ್ಪಾರ್ಚನೆ ಮಾಡಿಯಾರೇ?" ಎಂದು ಪ್ರಶ್ನಿಸಿದ್ದಾರೆ. ಕನ್ನಡ ಬಾವುಟದ ಕುರಿತು ಬಾನು ಮುಷ್ತಾಕ್ ಅವರ ಹಿಂದಿನ ಹೇಳಿಕೆಗಳನ್ನೂ ಅವರು ಉಲ್ಲೇಖಿಸಿದ್ದಾರೆ. 

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಇತರ ಬಿಜೆಪಿ ನಾಯಕರು ಮತ್ತು ಹಿಂದೂಪರ ಸಂಘಟನೆಗಳು ಕೂಡ ಈ ಆಯ್ಕೆಯನ್ನು ವಿರೋಧಿಸಿವೆ. ನೆಟ್ಟಿಗರು ಕಾಮೆಂಟ್‌ ಮಾಡುವ ಹಿನ್ನಲೆಯಲ್ಲಿ ಈ ವಿಷಯವಿದೀಗ ಕಾಂಗ್ರೆಸ್‌ ಪಕ್ಷಕ್ಕೆ ಒತ್ತಡವನ್ನು ಹೇರುವ ಮೂಲಕ ಹರಿಹಾಯ್ದಿವೆ.


White Noise Machine Babelio Mini Sound Machine for Adults Kids Baby | 15 Non-looping Sounds | Timer | Easy to Pocket and Travel - White

ಕಾರ್ಮಿಕ ಸಚಿವರ ತಿರುಗೇಟು -

ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್, "ಸಂವಿಧಾನದಲ್ಲಿ ಯಾರನ್ನಾದರೂ ದಸರಾ ಉದ್ಘಾಟನೆಗೆ ಕರೆಯಬಾರದು ಎಂದು ಎಲ್ಲಾದರೂ ಬರೆದಿದೆಯೇ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ಬಿಜೆಪಿ ನಾಯಕರ ಅಪಸ್ವರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಒಟ್ಟಿನಲ್ಲಿ, ಬಾನು ಮುಷ್ತಾಕ್ ಅವರ ಆಯ್ಕೆ ವಿವಾದವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ್ತೊಂದು ಜಟಾಪಟಿಗೆ ಕಾರಣವಾಗಿದೆ.

ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ ಕುರಿತು ಸಮಾಜ ಕಲ್ಯಾಣ ಎಚ್.ಸಿ. ಮಹದೇವಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ. "ಒಬ್ಬ ಸಾಹಿತಿಯನ್ನು ಆಹ್ವಾನಿಸುವುದರಲ್ಲಿ ತಪ್ಪೇನಿದೆ?" ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಎಲ್ಲರೂ ಗೌರವಿಸಬೇಕು. ನಂಬಿಕೆಗಳು ಸಹಜ, ಆದರೆ ಅವು ವೈಯಕ್ತಿಕ. ದಸರಾ ಉತ್ಸವವು ಎಲ್ಲರೂ ಒಂದಾಗಿ ಸಂಭ್ರಮಿಸುವ ಹಬ್ಬ. ಈ ಆಯ್ಕೆಯ ಕುರಿತು ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಯವರ ಮಾತಿನಿಂದ ಕಾಂಗ್ರೆಸ್ ಸಂಸದರಿಗೆ ಮುಜುಗರ: ಕಿರಣ್ ರಿಜಿಜು ಕಟು ಟೀಕೆ..!