ಸರ್ಕಾರಿ ನೌಕರನಿಗಿಂತಲೂ ಮೊದಲೇ ಆತನ ಪತ್ನಿ ನಿಧನರಾಗಿದ್ದು, ದಂಪತಿಗೆ ಮಕ್ಕಳಿಲ್ಲದ ಸಂದರ್ಭದಲ್ಲಿ ಮೃತ ನೌಕರನ ತಾಯಿಯನ್ನು ಆರೈಕೆ ಮಾಡುತ್ತಿರುವ ಸಹೋದರನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ ಈಚೆಗೆ ಆದೇಶಿಸಿದೆ.
ಬಳ್ಳಾರಿ ವಿಭಾಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (ಕೆಕೆಆರ್ಟಿಸಿ) ಚಾಲಕನಾಗಿದ್ದ ತನ್ನ ಪುತ್ರ ವೀರೇಶ್ ಮಾಂತಪ್ಪ ಮತ್ತು ಆತನ ಪತ್ನಿ ಸಾವನ್ನಪ್ಪಿದ್ದು, ಅವರಿಗೆ ಮಕ್ಕಳಿಲ್ಲದ ಹಿನ್ನೆಲೆಯಲ್ಲಿ ತನ್ನ ಎರಡನೇ ಪುತ್ರ ಮೃತ ನೌಕರನ ಸಹೋದರ ಸಂಗಣ್ಣಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ಆದೇಶಿಸುವಂತೆ ಕೋರಿ ತಾಯಿ ಮಾಂತವ್ವ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.Also read: ಡಿಕೆ. ಶಿವಕುಮಾರ್ ಸದನದಲ್ಲಿ RSS ಗೀತೆ ಹಾಡಿದ ವಿಚಾರ: ಜನತಾದಳ ಪಕ್ಷದ “ಜಸ್ಟ್ ಮಿಸ್” ವ್ಯಂಗ್ಯ ಪೋಸ್ಟ್ ವೈರಲ್
ಸಂಗಣ್ಣಗೆ ಆತನ ಶೈಕ್ಷಣಿಕ ಅರ್ಹತೆಗೆ ಅನುಸಾರ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ವಿಚಾರವನ್ನು ಮೂರು ತಿಂಗಳಲ್ಲಿ ಪರಿಗಣಿಸಬೇಕು ಎಂದು ಕೆಕೆಆರ್ಟಿಸಿಗೆ ಪೀಠ ನಿರ್ದೇಶಿಸಿದೆ. ಹಾಗೆಯೇ, ಸಂಗಣ್ಣ ಒಂದೊಮ್ಮೆ ತಾಯಿಯನ್ನು ಆರೈಕೆ ಮಾಡದೆ ಹೋದರೆ ಈ ಆದೇಶವನ್ನು ರದ್ದುಪಡಿಸುವುದಕ್ಕೆ ಕೋರಲು ಆಕೆ (ತಾಯಿ ಮಾಂತವ್ವ) ಸ್ವತಂತ್ರರಾಗಿರುತ್ತಾರೆ ಎಂದು ಪೀಠ ಸ್ಪಷ್ಟಪಡಿಸಿದೆ.
ಸರ್ಕಾರಿ ನೌಕರನ ನಿಧನದ ನಂತರ ಆತನ ಕುಟುಂಬ ಸದಸ್ಯರು ಅರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಅನುಕಂಪದ ಆಧಾರದಲ್ಲಿ ಮೃತನ ನೌಕರನ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವುದರ ಮೂಲ ಉದ್ದೇಶ. ಈ ಪ್ರಕರಣದಲ್ಲಿ ನಿಗಮವು ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ನಿರಾಕರಿಸುತ್ತಿಲ್ಲ. ಆದರೆ, ಮೃತ ನೌಕರ ವೀರೇಶ್ ವಿವಾಹವಾಗಿರುವ ಕಾರಣದಿಂದ ಆತನ ಸಹೋದರ ಸಂಗಣ್ಣಗೆ ಉದ್ಯೋಗ ನೀಡಲು ಅಡ್ಡಿಯಾಗಿದೆ ಎಂದು ಹೇಳುತ್ತಿರುವುದಾಗಿ ಆದೇಶದಲ್ಲಿ ವಿವರಿಸಿದೆ.