Skip to main content
ವಿಡಿಯೋ
1/2
cinema

ಡಾ. ವಿಷ್ಣುವರ್ಧನ್ ಸಮಾಧಿ ಧ್ವಂಸ ಮಾಡಿದವ್ರಿಗೆ ಶಾಕ್...ಅಭಿಮಾನಿಗಳ ನೋವಿಗೆ ಸ್ಪಂದಿಸ್ತಾ ಸರ್ಕಾರ

By Ram Chethan
ಡಾ. ವಿಷ್ಣುವರ್ಧನ್ ಸಮಾಧಿ ಧ್ವಂಸ ಮಾಡಿದವ್ರಿಗೆ ಶಾಕ್...ಅಭಿಮಾನಿಗಳ ನೋವಿಗೆ ಸ್ಪಂದಿಸ್ತಾ ಸರ್ಕಾರ

ಡಾ. ವಿಷ್ಣುವರ್ಧನ್ ಸಮಾಧಿ ನೆಲಸಮಗೊಂಡು ವರ್ಷಗಳಿಂದ ವಿವಾದದಲ್ಲಿ ಸಿಲುಕಿದ್ದ ಅಭಿಮಾನ್ ಸ್ಟುಡಿಯೋ ಜಾಗವನ್ನು ಸರ್ಕಾರ ತನ್ನ ವಶಕ್ಕೆ ಪಡೆಯಲು ನಿರ್ಧರಿಸಿದೆ. ಅರಣ್ಯಭೂಮಿ ಗೊಂದಲದ ನಡುವೆಯೂ ಪುಣ್ಯಭೂಮಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕೆಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಅಭಿಮಾನ್ ಸ್ಟುಡಿಯೋ ಜಾಗದ ಸುತ್ತ ದಶಕಗಳಿಂದಲೂ ಭುಗಿಲೆದ್ದಿದ್ದ ವಿವಾದಗಳಿಗೆ ಸರ್ಕಾರ ಈಗ ಕಾನೂನು ಕ್ರಮಗಳ ಮೂಲಕ ಅಂತ್ಯ ಹಾಡಲು ಮುಂದಾಗಿದೆ. ಬಾಲಕೃಷ್ಣ ಅವರ ಮೊಮ್ಮಗ ಅಭಿಮಾನ್ ಸ್ಟುಡಿಯೋದ ಒಂದು ಎಕರೆ ಭೂಮಿಯನ್ನು 14.37 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದ ಸಂಗತಿ ಈ ವಿವಾದಕ್ಕೆ ಪ್ರಮುಖ ಕಾರಣವಾಗಿತ್ತು. ಪೂರ್ಣ 10 ಎಕರೆ ಜಾಗಕ್ಕೆ ಇದು 144 ಕೋಟಿ ರೂ.ಗಳಾಗಿ ವಿಸ್ತರಿಸುತ್ತಿತ್ತು.

ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮಗೊಳಿಸಿದ್ದ ಅಭಿಮಾನ್ ಸ್ಟುಡಿಯೋ ಮಾಲೀಕರಿಗೆ ಸರ್ಕಾರದ ಈಗಿನ ನಡೆ ಕಾನೂನಿನ ಮಹತ್ವವನ್ನು ಸಾರಿದೆ. ಆ ಜಾಗವನ್ನು ಮುಟ್ಟುಗೋಲು ಹಾಕಿಕೊಂಡು ಸರ್ಕಾರದ ವಶಕ್ಕೆ ಪಡೆಯುವ ನಿರ್ಧಾರವನ್ನು ಪ್ರಕಟಿಸಿದೆ. ಈ ಹಿಂದೆ, ಈ ಜಾಗದಲ್ಲಿನ ಹಣಕಾಸಿನ ಅವ್ಯವಹಾರಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದ್ದ ಹೋರಾಟಗಾರರಿಗೆ ಇದು ನ್ಯಾಯ ಸಿಕ್ಕಂತೆ ಆಗಿದೆ.

ಅಸಂಖ್ಯಾತ ಅಭಿಮಾನಿಗಳ 15 ವರ್ಷಗಳ ನೋವು, ಕಣ್ಣೀರು ಮತ್ತು ಅಸಹಾಯಕತೆಗೆ ಈಗ ನ್ಯಾಯ ಸಿಕ್ಕಿದೆ ಎಂದು ಹಲವರು ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ, ಈ ಆದೇಶದಲ್ಲಿ ಅಭಿಮಾನ್ ಸ್ಟುಡಿಯೋದ ಜಾಗವನ್ನು "ಅರಣ್ಯಭೂಮಿ" ಎಂದು ಘೋಷಿಸಿರುವುದು ಕೆಲವರಲ್ಲಿ ಗೊಂದಲ ಸೃಷ್ಟಿಸಿದೆ. ಅರಣ್ಯಭೂಮಿಯ ನೆಪದಲ್ಲಿ ವಿಷ್ಣುವರ್ಧನ್ ಹಾಗೂ ಬಾಲಕೃಷ್ಣ ಅವರ ಪುಣ್ಯಭೂಮಿ ನಿರ್ಮಾಣಕ್ಕೆ ತಡೆಯೊಡ್ಡುವ ಆತಂಕ ವ್ಯಕ್ತವಾಗಿದೆ.

Van Heusen Men's Textured Regular Fit Polo Shirt

ಈ ನಿಟ್ಟಿನಲ್ಲಿ, ಅರಣ್ಯಭೂಮಿಯ ನಿಯಮಗಳಿಗೆ ಅಡ್ಡಿಯಾಗದಂತೆ ಮರ-ಗಿಡಗಳಿಂದ ಕೂಡಿದ ಸರಳ ಪುಣ್ಯಭೂಮಿ ನಿರ್ಮಾಣಕ್ಕೆ ಸರ್ಕಾರ ಮನಸ್ಸು ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಇಲ್ಲದಿದ್ದರೆ, ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಿದ ಕಾರ್ತೀಕನ ಕನಸುಗಳೂ ನೆಲಸಮವಾದವು ಎಂದು ಸಮಾಧಾನಪಡುವುದಕ್ಕಷ್ಟೇ ಈ ತೀರ್ಮಾನ ಸೀಮಿತವಾಗುತ್ತದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.


ದರ್ಶನ್ ಮಗನ ಟಾರ್ಗೆಟ್ ಮಾಡಿದ ಕಿಡಿಗೇಡಿಗಳು...ಕೋಪಗೊಂಡ ವಿಜಯಲಕ್ಷ್ಮಿ ಮಾಡಿದ್ದು ಏನು ಗೊತ್ತಾ?

ಅಭಿಮಾನ್ ಸ್ಟುಡಿಯೋ ಮಾಲೀಕರು ಸರ್ಕಾರ, ನ್ಯಾಯಾಲಯ, ಅಭಿಮಾನಿಗಳು ಮತ್ತು ಕುಟುಂಬದವರನ್ನು ದಾರಿ ತಪ್ಪಿಸುತ್ತಿದ್ದ ಹಿಂದಿನ ಮರ್ಮವನ್ನು ಜನತೆ ಅರಿಯಲು, ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂಬ ಬೇಡಿಕೆ ಮೊದಲಿನಿಂದಲೂ ಇತ್ತು. ಈ ಸಂಬಂಧ, ಅಧಿವೇಶನ ಆರಂಭವಾದ ನಂತರ ಮುಖ್ಯಮಂತ್ರಿಗಳ ಕಚೇರಿಯಿಂದ ದೂರವಾಣಿ ಕರೆ ಬಂದಿತ್ತು.

ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ಕರೆದಿದ್ದು, ಹೆಚ್ಚಿನ ಮಾಹಿತಿ ಕೋರಿದ್ದರು. ಆಗ, ಆ ಜಾಗದ ಸತ್ಯಾಸತ್ಯತೆ ತಿಳಿಯಲು ನ್ಯಾಯಾಂಗ ತನಿಖೆ ನಡೆಸಿ, ಆಗಿರುವ ತಪ್ಪುಗಳನ್ನು ಸರಿಪಡಿಸಿ ಪುಣ್ಯಭೂಮಿಯನ್ನು ಉಳಿಸಿಕೊಡುವಂತೆ ಮನವಿ ಮಾಡಲಾಗಿತ್ತು. ಸರ್ಕಾರ ಈಗ ಮೊದಲ ಹೆಜ್ಜೆ ಇಟ್ಟಿದ್ದು, ಈ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ಮುಂದುವರಿಸಲು ನಿರ್ಧರಿಸಲಾಗಿದೆ. ಜಾಗವನ್ನು ಸಂಪೂರ್ಣವಾಗಿ ಸರ್ಕಾರದ ವಶಕ್ಕೆ ಪಡೆದು, ಡಾ. ವಿಷ್ಣುವರ್ಧನ್ ಮತ್ತು ಬಾಲಕೃಷ್ಣ ಅವರ ಸಮಾಧಿಗಳನ್ನು ಮರು ನಿರ್ಮಾಣಗೊಳಿಸಬೇಕಿದೆ.