Skip to main content
ವಿಡಿಯೋ
1/2
cinema

ಮೋಸ ಮಾಡಲು ನಾನೇ ಏಕೆ ರಚಿತಾ ರಾಮ್ ಎಂದ ಕಣ್ಣ ರವಿ..! ವಿಷಯ ಕೇಳಿ ಹೇಗೆ ಉತ್ತರ ಕೊಟ್ರು ಗೊತ್ತಾ ಡಿಂಪಲ್ ಕ್ವೀನ್?

By Ram Chethan
ಮೋಸ ಮಾಡಲು ನಾನೇ ಏಕೆ ರಚಿತಾ ರಾಮ್ ಎಂದ ಕಣ್ಣ ರವಿ..! ವಿಷಯ ಕೇಳಿ ಹೇಗೆ ಉತ್ತರ ಕೊಟ್ರು ಗೊತ್ತಾ ಡಿಂಪಲ್ ಕ್ವೀನ್?

‘ಕೂಲಿ’ ಸಿನಿಮಾದ ಕಥಾಹಂದರ ಆಧರಿಸಿ ಕಣ್ಣ ರವಿ “ನಾನೇ ಏಕೆ?” ಎಂದು ಹಾಕಿದ ಪೋಸ್ಟ್‌ಗೆ ರಚಿತಾ ರಾಮ್ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ. ನಿರ್ದೇಶಕ ಲೋಕೇಶ್ ಕನಗರಾಜ್‌ನ್ನು ಉಲ್ಲೇಖಿಸಿದ ಅವರ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಟಿ ರಚಿತಾ ರಾಮ್ ಅವರು ಯಾವುದೇ ವಿವಾದಗಳಿಗೆ ನೇರ ಮತ್ತು ಮುಕ್ತ ಉತ್ತರ ನೀಡುವ ಮೂಲಕ ಗಮನ ಸೆಳೆಯುತ್ತಾರೆ. ಯಾವುದೇ ವಿವಾದ ಎದುರಾದಾಗ ಅವರು ಹಿಂದೆ ಸರಿಯುವುದಿಲ್ಲ. ಇತ್ತೀಚೆಗೆ ತಮಿಳು ನಟ ಕಣ್ಣ ರವಿ ಅವರು ‘ನಾನೇ ಏಕೆ' ಎಂದು ಪ್ರಶ್ನಿಸಿದ್ದು, ಅದಕ್ಕೆ ರಚಿತಾ ರಾಮ್ ದಿಟ್ಟ ಉತ್ತರ ನೀಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಇಡೀ ವಿಷಯ ‘ಕೂಲಿ' ಸಿನಿಮಾದ ಕಥಾಹಂದರಕ್ಕೆ ಸಂಬಂಧಿಸಿದೆ. ಲೋಕೇಶ್ ಕನಗರಾಜ್ ನಿರ್ದೇಶನದ, ರಜನಿಕಾಂತ್ ಅಭಿನಯದ ‘ಕೂಲಿ' ಚಿತ್ರ ಆಗಸ್ಟ್ 14ರಂದು ತೆರೆಕಂಡು ಉತ್ತಮ ಗಳಿಕೆ ಕಂಡಿದೆ. ಈ ಸಿನಿಮಾದಲ್ಲಿ ರಚಿತಾ ರಾಮ್ 'ಕಲ್ಯಾಣಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಕಣ್ಣ ರವಿ 'ಅರ್ಜುನ್ ಸೈಮನ್' ಪಾತ್ರ ನಿರ್ವಹಿಸಿದ್ದಾರೆ. ಎರಡೂ ಪಾತ್ರಗಳು ಚಿತ್ರದಲ್ಲಿ ಮಹತ್ವ ಪಡೆದಿವೆ.

Van Heusen Men's Textured Regular Fit Polo Shirt

ಗಣೇಶನ ಆಶೀರ್ವಾದ ಪಡೆಯಲು ಬಂದ ಜಾನ್ವಿ ಕಪೂರ್ ಭಯಗೊಂಡಿದ್ದು ಯಾಕೆ? 'ಪರಂ ಸುಂದರಿ'ಗೆ ಏನಾಯ್ತು?

ಕಥೆಯ ಪ್ರಕಾರ, ಸೈಮನ್‌ನ ಮಗ ಅರ್ಜುನ್ ಕಲ್ಯಾಣಿಯನ್ನು ಪ್ರೀತಿಸುತ್ತಾನೆ. ಆದರೆ, ಕಲ್ಯಾಣಿ ಅರ್ಜುನ್‌ಗೆ ಮೋಸ ಮಾಡಿ, ಕೊನೆಗೆ ಆತನನ್ನು ಕೊಲ್ಲುತ್ತಾಳೆ. ಈ ಘಟನೆಯನ್ನು ಆಧರಿಸಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಚಿತಾ ರಾಮ್ ಅವರ ಜೊತೆಗಿರುವ ಫೋಟೋವನ್ನು ಹಂಚಿಕೊಂಡು, "ಏಕೆ ಕಲ್ಯಾಣಿ, ನಾನೇ ಏಕೆ?" ಎಂದು ಪ್ರಶ್ನಿಸಿದ್ದಾರೆ. ಇದರರ್ಥ, "ನನ್ನನ್ನು ಏಕೆ ಬಲಿಪಶು ಮಾಡಬೇಕಿತ್ತು?" ಎಂಬುದು.

ಕಣ್ಣ ರವಿ ಅವರ ಈ ಪೋಸ್ಟ್‌ಗೆ ರಚಿತಾ ರಾಮ್ ಕಾಮೆಂಟ್ ಬಾಕ್ಸ್‌ನಲ್ಲಿ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ. "ಅರ್ಜುನ್ (ಕೂಲಿ ಪಾತ್ರದ ಹೆಸರು), ನಾನು ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಸ್ಕ್ರಿಪ್ಟ್ ಅನ್ನು ಅನುಸರಿಸಿದ್ದೇನೆ. ನನ್ನ ಈ 'ಕ್ರೇಜಿ ನಡವಳಿಕೆ'ಗೆ ನಮ್ಮ ಬಾಸ್ (ನಿರ್ದೇಶಕ) ಲೋಕೇಶ್ ಅವರನ್ನೇ ದೂಷಿಸಿ" ಎಂದು ಹೇಳಿದ್ದಾರೆ. ಈ ಕಾಮೆಂಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಸುಮಾರು 10 ಸಾವಿರ ಲೈಕ್‌ಗಳನ್ನು ಪಡೆದಿದೆ.