Skip to main content
ವಿಡಿಯೋ
cinema

KVN ಸಂಸ್ಥೆಯಡಿ ಶಿವಣ್ಣನ ಹೊಸ ಸಿನಿಮಾಗೆ ಚಾಲನೆ...ಶೂಟಿಂಗ್ ಯಾವಾಗ ಸ್ಟಾರ್ಟ್ ಮಾಡ್ತಾರೆ ಗೊತ್ತಾ ಪವನ್ ಒಡೆಯರ್?

By Ram Chethan
KVN ಸಂಸ್ಥೆಯಡಿ ಶಿವಣ್ಣನ ಹೊಸ ಸಿನಿಮಾಗೆ ಚಾಲನೆ...ಶೂಟಿಂಗ್ ಯಾವಾಗ ಸ್ಟಾರ್ಟ್ ಮಾಡ್ತಾರೆ ಗೊತ್ತಾ ಪವನ್ ಒಡೆಯರ್?

ಹ್ಯಾಟ್‌ಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ ಬೆಂಗಳೂರಿನಲ್ಲಿ ಗ್ರ್ಯಾಂಡ್ ಲಾಂಚ್ ನೆರವೇರಿತು. ಪವನ್ ಒಡೆಯರ್ ನಿರ್ದೇಶನದ ಈ ಸಿನಿಮಾ ಮುಂದಿನ ತಿಂಗಳು ಶೂಟಿಂಗ್ ಆರಂಭವಾಗಲಿದ್ದು, ಅಭಿಮಾನಿಗಳಿಗೆ ಭರ್ಜರಿ ಎಂಟರ್‌ಟೈನ್ ನೀಡುವ ನಿರೀಕ್ಷೆ ಮೂಡಿಸಿದೆ.

ಹ್ಯಾಟ್‌ಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೊಂದು ಹೊಸ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಬೆಂಗಳೂರಿನಲ್ಲಿಯೇ ಈ ಚಿತ್ರದ ಭರ್ಜರಿ ಲಾಂಚ್ ಕಾರ್ಯಕ್ರಮ ನಡೆಯಿತು. ಚಿತ್ರ ಲಾಂಚ್ ಆಗಿದ್ದರೂ, ಶೂಟಿಂಗ್ ಮುಂದಿನ ತಿಂಗಳು 3ರಿಂದ ಅಧಿಕೃತವಾಗಿ ಆರಂಭವಾಗುತ್ತಿದೆ. ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದ್ದು, ನಂತರ ಹೈದ್ರಾಬಾದ್, ಮುಂಬೈ, ಹಿಮಾಚಲ ಪ್ರದೇಶ ಮತ್ತು ಮಂಡ್ಯ ಸೇರಿದಂತೆ ಹಲವಾರು ಕಡೆಗಳಲ್ಲಿ ಶೂಟಿಂಗ್ ನಡೆಯಲಿದೆ.

ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ. ಅವರು ಸದಾ ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾಗಳನ್ನು ನೀಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಡುಗಳ ಮೇಲೂ ವಿಶೇಷ ಗಮನ ಕೊಡುವ ಪವನ್ ಒಡೆಯರ್, ಮೊದಲ ಬಾರಿಗೆ ಶಿವಣ್ಣ ಜೊತೆ ಕೆಲಸ ಮಾಡುತ್ತಿರುವುದರಿಂದ ತುಂಬಾ ಖುಷಿಯಾಗಿದ್ದಾರೆ.

Casio G-Shock GA-B2100-2ADR Black Analog-Digital Dial Blue Resin Strap Men's Watch Tough Solar Bluetooth G1243

ಪ್ರೀತಿ ಕೈ ಕೊಡ್ತು, ಆದ್ರೆ ಕಲೆ ಅಪ್ಪಿಕೊಳ್ತು...ಗಾಯನದ ಮೂಲಕ ಸಂಪಾದನೆ ಮಾಡಿದ್ದು ಬರೋಬ್ಬರಿ 50 ಕೋಟಿ ರೂ.!

ಚಿತ್ರಕ್ಕೆ ಕೆವಿಎನ್ ಸಂಸ್ಥೆಯೂ ಬೆಂಬಲ ನೀಡಿದೆ. ನಿರ್ದೇಶಕರಾಗಿರುವ ಪವನ್ ಒಡೆಯರ್ ಈ ಸಿನಿಮಾದ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಒಳ್ಳೆಯ ಕಥೆ, ಹಾಡು ಮತ್ತು ಮನರಂಜನೆಯ ಎಲ್ಲ ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾ ಶಿವಣ್ಣ ಅಭಿಮಾನಿಗಳಿಗೆ ಖಂಡಿತ ಸಂತೋಷ ನೀಡಲಿದೆ ಎಂಬ ನಿರೀಕ್ಷೆ ಇದೆ.