ಜಪಾನ್ : ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್ ಭೇಟಿ ಯಶಸ್ವಿಯಾಗಿದೆ. ಮುಂದಿನ ಒಂದು ದಶಕದಲ್ಲಿ ಭಾರತದಲ್ಲಿ 6 ಲಕ್ಷ ಕೋಟಿ (10 ಟ್ರಿಲಿಯನ್ ಯೆನ್) ಹೂಡಿಕೆ ಮಾಡುವುದಾಗಿ ಜಪಾನ್ ಘೋಷಿಸಿದೆ. ಈ ಘೋಷಣೆಯು ಅಮೆರಿಕ-ಭಾರತ ಆರ್ಥಿಕ ಸಂಘರ್ಷದ ನಡುವೆ ಹೊರಬಿದ್ದಿರುವುದು ಗಮನಾರ್ಹ.
ಜಪಾನ್ ಈ ಹೂಡಿಕೆಗೆ ನಿರ್ಧರಿಸಿರುವುದು ಆರ್ಥಿಕ ಸಹಕಾರಕ್ಕೆ ಹೊಸ ಬಾಗಿಲು ತೆರೆದಿದೆ. ಇದರ ಜೊತೆಗೆ, ಭಾರತ ಮತ್ತು ಜಪಾನ್ ಚಂದ್ರಯಾನ-5 ಯೋಜನೆಯನ್ನು ಜಂಟಿಯಾಗಿ ಕೈಗೊಳ್ಳಲು ಒಪ್ಪಿಕೊಂಡಿವೆ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಉಭಯ ದೇಶಗಳ ಸಹಕಾರಕ್ಕೆ ಪ್ರಮುಖ ಮೈಲುಗಲ್ಲಾಗಿದೆ.
ವಾರ್ಷಿಕ ಭಾರತ-ಜಪಾನ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಇಶಿಬಾ ನಡುವೆ ನಡೆದ ಮಾತುಕತೆಗಳಲ್ಲಿ ಈ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಶೃಂಗಸಭೆಯ ನಂತರ ಮಾತನಾಡಿದ ಮೋದಿ, ಜಪಾನ್ ಮುಂದಿನ ಒಂದು ದಶಕದಲ್ಲಿ ಭಾರತದಲ್ಲಿ ₹5.98 ಲಕ್ಷ ಕೋಟಿ ಹೂಡಿಕೆ ಮಾಡುವ ಗುರಿ ಹೊಂದಿದೆ ಎಂದು ಸ್ಪಷ್ಟಪಡಿಸಿದರು.Monte Carlo Mens Solid Lace Up Genuine Leather Casual Shoes (201803FW)
ಅಮೂಲ್ಯ ಖನಿಜಗಳು, ರಕ್ಷಣೆ ಮತ್ತು ತಂತ್ರಜ್ಞಾನದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸಲು ಎರಡೂ ದೇಶಗಳು ಕಾರ್ಯಸೂಚಿಯನ್ನು ಸಿದ್ಧಪಡಿಸಿವೆ. ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಭಾರತ-ಜಪಾನ್ ಸಹಕಾರ ನಿರ್ಣಾಯಕವಾಗಿದೆ ಎಂದು ಮೋದಿ ಹೇಳಿದರು.ಧರ್ಮಸ್ಥಳ ಚಲೋ: ಬಿಜೆಪಿಯಿಂದ ಬೃಹತ್ ಸಮಾವೇಶಕ್ಕೆ ಸಿದ್ಧತೆ: ಇಲ್ಲಿದೆ ಮಾಹಿತಿ
ನಾವು ಪಾಲುದಾರಿಕೆಯಲ್ಲಿ ಹೊಸ ಮತ್ತು ಸುವರ್ಣ ಅಧ್ಯಾಯಕ್ಕೆ ಬಲವಾದ ಅಡಿಪಾಯ ಹಾಕಿದ್ದೇವೆ. ಮುಕ್ತ, ಶಾಂತಿಯುತ, ಸಮೃದ್ಧ ಮತ್ತು ನಿಯಮ-ಆಧಾರಿತ ಇಂಡೋ-ಪೆಸಿಫಿಕ್ ಸ್ಥಾಪನೆಗೆ ನಾವು ಬದ್ಧರಾಗಿದ್ದೇವೆ ಎಂದು ಅವರು ಪ್ರತಿಪಾದಿಸಿದರು. ಸೈಬರ್ ಭದ್ರತೆ ಮತ್ತು ಭಯೋತ್ಪಾದನೆಯಂತಹ ವಿಚಾರಗಳ ಬಗ್ಗೆಯೂ ಎರಡೂ ರಾಷ್ಟ್ರಗಳು ಕಳವಳ ಹೊಂದಿದ್ದು, ಭದ್ರತೆ ಮತ್ತು ಕಡಲ ಭದ್ರತೆಯನ್ನು ಬಲಪಡಿಸುವಲ್ಲಿ ಸಮಾನ ಆಸಕ್ತಿ ತೋರಿವೆ.
ಉತ್ತಮ ಜಗತ್ತನ್ನು ರೂಪಿಸುವಲ್ಲಿ ಬಲವಾದ ಪ್ರಜಾಪ್ರಭುತ್ವಗಳು ಸಹಜವಾಗಿಯೇ ಪಾಲುದಾರರು ಎಂದು ಮೋದಿ ಬಣ್ಣಿಸಿದರು. ಭಾರತೀಯರ ನೈಪುಣ್ಯ ಮತ್ತು ಜಪಾನ್‌ನ ತಂತ್ರಜ್ಞಾನದ ಸಮ್ಮಿಲನವು ಮುಂದಿನ ದಿನಗಳಲ್ಲಿ ಮಹತ್ತರ ಸಾಧನೆಗಳನ್ನು ಮಾಡಲಿದೆ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದರು.