Skip to main content
ವಿಡಿಯೋ
1/2
politics

ಧರ್ಮಸ್ಥಳ ಸಮಾವೇಶ - ಬಿಜೆಪಿ ಭರ್ಜರಿ ಶಕ್ತಿ ಪ್ರದರ್ಶನ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಗರಂ ಆಗಿ ಹೇಳಿದ್ದೇನು ಗೊತ್ತಾ?

By Shravanthi R
ಧರ್ಮಸ್ಥಳ ಸಮಾವೇಶ - ಬಿಜೆಪಿ ಭರ್ಜರಿ ಶಕ್ತಿ ಪ್ರದರ್ಶನ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಗರಂ ಆಗಿ ಹೇಳಿದ್ದೇನು ಗೊತ್ತಾ?

ಧರ್ಮಸ್ಥಳ ಕೇಸರಿಮಯವಾಗಿ ಕಂಗೊಳಿಸಿದೆ. ಈ ಸಮಾವೇಶದಲ್ಲಿ ಪ್ರಮುಖರಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸೇರಿದಂತೆ, ಛಲವಾದಿ ನಾರಾಯಣಸ್ವಾಮಿ, ವಿಪಕ್ಷ ನಾಯಕ ಆರ್‌. ಅಶೋಕ್‌, ಸಿಟಿ ರವಿ, ಮುನಿರತ್ನ, ಬ್ರಿಜೇಶ್‌ ಚೌಟ, ಬಿ.ಸಿ ಪಾಟೀಲ್‌, ಸುನೀಲ್‌ ಕುಮಾರ್‌, ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಶ್ರೀರಾಮುಲು, ತೇಜಸ್ವಿ ಸೂರ್ಯ, ನಿಖಿಲ್‌ ಕುಮಾರ್‌ಸ್ವಾಮಿ, ರೇಣುಕಾಚಾರ್ಯ, ಎಸ್‌. ಆರ್‌ ವಿಶ್ವನಾಥ್‌, ಸದಾನಂದ ಗೌಡ ಸೇರಿದಂತೆ ಇನ್ನಿತರ ಪ್ರಮುಖರು ಭಾಗಿಯಾಗಿದ್ದಾರೆ.

ಇಂದು ಕರ್ನಾಟಕದಲ್ಲಿ ದೊಡ್ಡ ಮಟ್ಟಿಗೆ ಜನರು ಸೇರಿರುವ ಹಿಂದೂ ಶ್ರದ್ದಾ ಕೇಂದ್ರದ ಸಂರಕ್ಷಣಾ ವೇದಿಕೆಯಲ್ಲಿ ಎಲ್ಲಾ ಬಿಜೆಪಿ ನಾಯಕರು, ಕಾರ್ಯಕರ್ತರು ಒಗ್ಗೂಡಿ ನಡೆಸಿರುವ ಜಾಥಾದಲ್ಲಿನ ಮುಂದುವರೆದ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನಸಂಖ್ಯೆಯಲ್ಲಿ ಬೃಹತ್‌ ಸಮಾವೇಶ ನಡೆದಿದ್ದು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧ ಪಟ್ಟಂತೆ, ರಾಜ್ಯ ಸರ್ಕಾರದ ನಡೆಸಿರುವ ಕಾರ್ಯಪ್ರವೃತ್ತಿಯು ನೀರಸವಾಗಿದೆ ಎನ್ನಲಾಗಿ ಪ್ರಕರಣವನ್ನು ಎನ್‌ಐಎಗೆ ಹೆಚ್ಚುವರಿ ತನಿಖೆಗಾಗಿ ಆಗ್ರಹಿಸಲಾಗಿದೆ. 

ಎಲ್ಲೆಲ್ಲೂ ಕೇಸರಿಮಯವಾಗಿರುವ ಕಂಗೊಳಿಸಿದೆ. ಈ ಸಮಾವೇಶದಲ್ಲಿ ಪ್ರಮುಖರಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸೇರಿದಂತೆ, ಛಲವಾದಿ ನಾರಾಯಣಸ್ವಾಮಿ, ವಿಪಕ್ಷ ನಾಯಕ ಆರ್‌. ಅಶೋಕ್‌, ಸಿಟಿ ರವಿ, ಮುನಿರತ್ನ, ಬ್ರಿಜೇಶ್‌ ಚೌಟ, ಬಿ.ಸಿ ಪಾಟೀಲ್‌, ಸುನೀಲ್‌ ಕುಮಾರ್‌, ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಶ್ರೀರಾಮುಲು, ತೇಜಸ್ವಿ ಸೂರ್ಯ, ನಿಖಿಲ್‌ ಕುಮಾರ್‌ಸ್ವಾಮಿ, ರೇಣುಕಾಚಾರ್ಯ, ಎಸ್‌. ಆರ್‌ ವಿಶ್ವನಾಥ್‌, ಸದಾನಂದ ಗೌಡ ಸೇರಿದಂತೆ ಇನ್ನಿತರ ಪ್ರಮುಖರು ಭಾಗಿಯಾಗಿದ್ದಾರೆ. 

ಇದೇ ವೇಳೆ ಕಾರ್ಯಕ್ರಮದಲ್ಲಿ ಹರೀಶ್‌ ಪೂಂಜಾ ಅವರು ಸ್ವಾಗತ ಭಾಷಣ ಮಾಡಿದರು. ಪ್ರಹ್ಲಾದ್‌ ಜೋಶಿಯವರು ಇದೇ ವೇಳೆ ಉಪಸ್ಥಿತರಿದ್ದರು. ಕೇಸರಿ ಧರ್ಮ ಕಹಳೆ ಧರ್ಮ ರಕ್ಷಣೆಗೆ ನಿಲ್ಲಬೇಕು, ಅನ್ಯಾಯದ ವಿರುದ್ದ ಹೋರಾಡಬೇಕು ಎಂದು ಸಂದೇಶ ಸಾರುವ ಮೂಲಕ, ಸರ್ಕಾರವನ್ನು ಬಿಜೆಪಿ ಎಚ್ಚರಿಸುತ್ತಿದೆ ಎನ್ನಲಾಗಿದೆ. ಧರ್ಮಸ್ಥಳಕ್ಕೆ ತಮ್ಮ ನೈತಿಕ ಬೆಂಬಲ ಸೂಚಿಸಿರುವ ಹಿನ್ನಲೆಯಾಗಿ ನಿರಂತರವಾಗಿ ಕೇಸರಿ ಕಹಳೆ ಮೊಳಗಲಿದೆ ಎನ್ನಲಾಗಿದೆ.  

World's Greatest Library : A Collection of 200 Inspiring Personalities (Box Set of 8 Biographies) Paperback – 6 August 2020

ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ -

ಧರ್ಮಸ್ಥಳದ ವಿಚಾರದಲ್ಲಿ ಧರ್ಮ ರಕ್ಷಣೆ ಮಾಡುವವರನ್ನ ಇಲ್ಲಿ ನೋಡಬಹುದಾಗಿದೆ. ಈ ನಿಟ್ಟಿನಲ್ಲಿ ಧರ್ಮ ಕಾಪಾಡುವುದು ಎಂಬುದರ ಮೇಲೆ ನಂಬಿಕೆ ಇರಲಿ ಎಂದಿದ್ದಾರೆ. ಹಿಂದುತ್ವ ಕಾಪಾಡಬೇಕು ಹಿಂದೂತ್ವ ಉಳಿಸಬೇಕು ಹಿಂದೂತ್ವಕ್ಕಾಗಿ ಹೋರಾಡುವವರು ಗಂಡುಗಲಿಗಳು ಎಂದು ತಮ್ಮ ಶಕ್ತಿದಾಯಕ ಮಾತುಗಳನ್ನು ಕಾರ್ಯಕ್ರಮವನ್ನುದ್ದೇಶಿಸಿ ತಿಳಿಸಿದ್ದಾರೆ.

ಎಸ್. ಆರ್. ವಿಶ್ವನಾಥ್ ಕಾರ್ಯಕ್ರಮ ಉದ್ದೇಶಿಸಿ ಹೇಳಿಕೆ -

ಧರ್ಮಸ್ಥಳದ ವಿರುದ್ದ ಷಡ್ಯಂತ್ರ ಮಾಡಿದವರಿಗೆ, ಬುರುಡೆ ಸರ್ಕಾರಕ್ಕೆ ಧಿಕ್ಕಾರ ಹಾಕುತ್ತಿದ್ದ ಸಮಾವೇಶದಲ್ಲಿ ಹಿಂದೂ ಧರ್ಮದ ವಿಚಾರವಾಗಿ ಯಾರೇ ಹುನ್ನಾರ ಮಾಡಿದರೆ, ಸರ್ವನಾಶ ಖಚಿತ, ರಾಜ್ಯದ ಮೂಲೆ ಮೂಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ದೇವರ ಭಕ್ತರು ಸೇರಿದ್ದಾರೆ ಎಂದು ತಿಳಿಸಿದ್ದಾರೆ.

ಆರ್‌. ಅಶೋಕ್‌ ಖಂಡನೆ -

ಸಿದ್ದರಾಮಯ್ಯ ನೀವು ನಕ್ಸಲ್‌ ಗ್ಯಾಂಗ್‌, ದೇಶದಲ್ಲಿ ಮತಾಂತರ ಮಾಡುವ ಸಂಸ್ಥೆ ಅದರ ಪಿತೂರಿ ಇಂದು ಧರ್ಮಸ್ಥಳ, ನಾಳೆ ಮಾರಮ್ಮ ಅಂತಾರೆ ಎಂದು ಅದಕ್ಕಾಗಿ ನಾವು ಹಿಂದುಗಳು ಒಂದಾಗಬೇಕಾಗಿ ಈ ಸಮಾವೇಶ. ಜಾತಿ ಜಾತಿ ಎಂದು ಸಿದ್ದರಾಮಯ್ಯ ಅವರಿಂದಾಗಿ ಮೆನ್ಷನ್‌ ಮಾಡುವಂತಾಗಿದೆ ಎನ್ನಲಾಗಿ ತೀವ್ರವಾಗಿ ನುಡಿದಿದ್ದಾರೆ.

ಪ್ರಹ್ಲಾದ್‌ ಜೋಶಿ ಮಾತು -

ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿ ಮಾತನಾಡಿದ ಅವರು, ಸಮಾವೇಶದಲ್ಲಿ ಕಾಂಗ್ರೆಸ್‌ ವಿರುದ್ದ ಕಿಡಿಕಾರಿದ್ದಾರೆ. ಹಿಂದೂಗಳ ನಂಬಿಕೆ ಕೆಡಿಸೋ ಪ್ರಯತ್ನವಾಗುತ್ತಿದೆ. ಧರ್ಮದ ವಿರುದ್ದ ಷಡ್ಯಂತ್ರ ನಡೆಯುತ್ತಿದೆ. ಧರ್ಮ ಹಾಗೂ ರಾಜಕಾರಣ ಎರಡು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎನ್ನಲಾಗಿದೆ. 

ಸಿಟಿ ರವಿ ಆಕ್ರೋಶ -

ಧರ್ಮಾಧಿಕಾರಿಗಳ ಕುಟುಂಬದವರಿಗೆ ಅವಮಾನ ಮಾಡಿದವರಿಗೆ ಶಿಕ್ಷೆ ಆಗಲೇಬೇಕು, ಪ್ರತಿಯೊಬ್ಬ ಹಿಂದೂ ಕೂಡ ಧರ್ಮಸ್ಥಳದ ಪರವಾಗಿ, ನ್ಯಾಯದ ಪರವಾಗಿ ಧ್ವನಿ ಎತ್ತಬೇಕಿದೆ ಹೀಗೆ ಸನಾತನ ಧರ್ಮದ ವಿರುದ್ದ ಪಿತೂರಿ ಹೂಡಿರುವವರ ವಿರುದ್ದವಾಗಿ ನಾವು ಇದ್ದೇವೆ ಎಂದಿದ್ದಾರೆ.

ವಿಜಯೇಂದ್ರ ಸ್ಪಂದನೆ -

ಕಾಂಗ್ರೆಸ್‌ ಸರ್ಕಾರ ದುಷ್ಟ ರಾಜಕಾರಣ ಮಾಡುತ್ತಿದೆ. ಇದರ ವಿರುದ್ದವಾಗಿ ನಮ್ಮ ಹಿರಿಯ ನಾಯಕರು, ಸಚಿವರು ಸೇರಿದ್ದೇವೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ನಡೆಸಲಾಗಿರುವ ಅಪ್ರಮಾಣಿಕವಾಗಿ ತನಿಖೆ ಆಗಿದೆ. ಎಲ್ಲೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿ ಸೇರಿದ್ದಾರೆ ಎಂದು ತಿಳಿಸಿದರು. 

ಶ್ರೀರಾಮುಲು ತಿರುಗೇಟು -

ಇದೊಂದು ಕೆಟ್ಟ ಕನಸು. ಯಾವುದೇ ಸರ್ಕಾರಗಳು ಬಂದರೂ ಹೋದರೂ ಜನರು ಮಾತನ್ನು ಕೇಳಬೇಕು. ಆದರೆ, ಧರ್ಮಸ್ಥಳದ ವಿಚಾರದಲ್ಲಿ ಸರ್ಕಾರ ಕಪ್ಪು ಮಸಿ ಬಳಿಯುವ ಕೆಲಸ ಮಾಡಿದೆ. ಭಗವಂತನ ವಿರುದ್ದವಾಗಿ, ಸಂಘರ್ಷವಿಟ್ಟುಕೊಂಡಿದೆ ಈ ಸರ್ಕಾರ ಎಂದು ವ್ಯಘ್ರವಾಗಿ ಖಂಡಿಸಿದ್ದಾರೆ. 

ಈ ಎಲ್ಲಾದರ ಮಧ್ಯೆ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಂದೆಡೆ ಇದಕ್ಕೆ ವಾಗ್ದಾಳಿ ನಡೆಸಿದ್ದಾರೆ. ಸಿಡಿಮಿಡಿಗೊಂಡು ಅವರು, ಪ್ರತಿಭಟನೆಗಳನ್ನು ಚಲೋವನ್ನು ಗಂಭೀರವಾಗಿ ಕಡೆಗಣಿಸಿರುವರೆನ್ನುವಂತಿದೆ. 

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದಲ್ಲಿ ರಾಜಕೀಯ: ಸಿದ್ದರಾಮನಹುಂಡಿಯಲ್ಲಿ ಸಿಎಂ ಗುದ್ದು, ಬಿಜೆಪಿ ವಿರುದ್ಧ ವಾಗ್ದಾಳಿ