Skip to main content
ವಿಡಿಯೋ
cinema

52ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್ ...''ಈ ದೋಸ್ತಿ ಒಂದೇ ನನ್ನ ಆಸ್ತಿ ಕಣೋ” ಬಾದ್‌ಷಾ ಭಾವುಕ !

By Ram Chethan
52ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್ ...''ಈ ದೋಸ್ತಿ ಒಂದೇ ನನ್ನ ಆಸ್ತಿ ಕಣೋ” ಬಾದ್‌ಷಾ ಭಾವುಕ !

ಜನಪ್ರಿಯ ನಟ ಕಿಚ್ಚ ಸುದೀಪ್ ತಮ್ಮ 52ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು. ಅಭಿಮಾನಿಗಳನ್ನು ‘ಗೆಳೆಯರು’ ಎಂದು ಕರೆಯುವ ಸುದೀಪ್, ಸಾಮಾಜಿಕ ಜಾಲತಾಣದಲ್ಲಿ ನಕಾರಾತ್ಮಕ ಪ್ರತಿಕ್ರಿಯೆಗಳಿಗೆ ಉತ್ತರಿಸಬೇಡಿ ಎಂದು ಭಾವುಕರ ಮನವಿ ಮಾಡಿದರು.

ಕನ್ನಡದ ಜನಪ್ರಿಯ ನಟ ಕಿಚ್ಚ ಸುದೀಪ್ ಅವರು ತಮ್ಮ 52ನೇ ಜನ್ಮದಿನವನ್ನು ಅಭಿಮಾನಿಗಳ ಜೊತೆಗೆ ಸಂಭ್ರಮದಿಂದ ಆಚರಿಸಿಕೊಂಡರು. ದೇಶದ ಮೂಲೆ ಮೂಲೆಗಳಿಂದ ಬಂದ ಅಭಿಮಾನಿಗಳು ತಮ್ಮ ಪ್ರೀತಿಯ ಹೀರೋಗೆ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲೇ ಸುದೀಪ್ ತಮ್ಮ ಹೃದಯದ ಮಾತುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು.

ಅವರು ತಮ್ಮ ಜೀವನದಲ್ಲಿ ಅಭಿಮಾನಿಗಳ ಪ್ರೀತಿಯೇ ದೊಡ್ಡ ಆಸ್ತಿ ಎಂದು ಹೇಳಿದ್ದಾರೆ. “ನೀ ನನ್ನ ಜೀವ ಗೆಳೆಯಾ ಕಣೋ… ಈ ದೋಸ್ತಿ ಒಂದೇ ನನ್ನ ಆಸ್ತಿ ಕಣೋ” ಎಂದು ಹಾಡಿ ಎಲ್ಲರನ್ನು ಭಾವುಕರನ್ನಾಗಿಸಿದರು. ಸುದೀಪ್ ಯಾವಾಗಲೂ ಅಭಿಮಾನಿಗಳನ್ನು ‘ಫ್ಯಾನ್ಸ್’ ಎಂದು ಅಲ್ಲ, ‘ಗೆಳೆಯರು’ ಎಂದು ಕರೆದಿರುವುದು ವಿಶೇಷ.

Van Heusen Men's Regular Fit Mid Rise Track Pant

ಜನ್ಮ ದಿನದಂದು ಜನ್ಮ ಕೊಟ್ಟೋಳು ಇಲ್ಲ...ಅಮ್ಮನ ನೆನೆದು ಭಾವುಕರಾದ ಕಿಚ್ಚ...ಖಾಲಿ ಮನೆ, ಖಾಲಿ ಕುರ್ಚಿ! ನೋವಿನೊಂದಿಗೆ ಸುದೀಪ್!

ಇದೇ ಸಂದರ್ಭದಲ್ಲಿ ಸುದೀಪ್ ತಮ್ಮ ಅಭಿಮಾನಿಗಳಿಗೆ ಒಂದು ಮುಖ್ಯವಾದ ವಿನಂತಿಯನ್ನೂ ಮಾಡಿದರು. “ಸೋಷಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಯಾರೇ ಏನೇ ಬರೆದರೂ, ಕೆಟ್ಟದಾಗಿ ಬರೆದರೂ, ಅದಕ್ಕೆ ಯಾವ ಉತ್ತರ ಕೊಡಬೇಡಿ. ಯಾವುದಕ್ಕೂ ರಿಯಾಕ್ಟ್ ಮಾಡ್ಬೇಡಿ. ನನ್ನ ಮಕ್ಕಳ ಬಗ್ಗೆ ಯಾರಾದರೂ ಕಿತ್ತೋದ್ರೆ, ಅದನ್ನೂ ಲೆಕ್ಕಿಸಬೇಡಿ” ಎಂದು ಮನವಿ ಮಾಡಿದರು.

ತಮ್ಮ ಹೆಸರನ್ನು ಮತ್ತು ಸ್ಥಾನವನ್ನು ಗಳಿಸಲು ಮೂರು ದಶಕಗಳ ಕಾಲ ಶ್ರಮಪಟ್ಟಿದ್ದೇನೆ. ಇದಕ್ಕೆ ಕಾರಣ ನನ್ನ ಅಭಿಮಾನಿಗಳ ಪ್ರೀತಿ ಮತ್ತು ಆಶೀರ್ವಾದವೇ ಎಂದು ಸುದೀಪ್ ಹೇಳಿದರು. “ನಿಮ್ಮ ಪ್ರೀತಿ ಹೀಗೆಯೇ ಸದಾ ನನ್ನೊಂದಿಗೆ ಇರಲಿ, ಅದು ನನಗೆ ದೊಡ್ಡ ಶಕ್ತಿ” ಎಂದು ಅವರು ಹೃದಯದಿಂದ ಕೃತಜ್ಞತೆ ವ್ಯಕ್ತಪಡಿಸಿದರು.