ಧರ್ಮಸ್ಥಳ: ಅಗಸ್ಟ್ 31 ರಂದು ನಡೆದ ಧರ್ಮಸ್ಥಳ ಷಡ್ಯಂತ್ರದ ವಿರುದ್ಧದ ಜೆಡಿಎಸ್‌ನ ಧರ್ಮ ಯಾತ್ರೆ ಕಾರ್ಯಕ್ರಮದಲ್ಲಿ ಇನ್‌ಸೈಟ್‌ರಶ್‌ನೊಂದಿಗೆ ಮಾತನಾಡಿದ ಶಿವಮೊಗ್ಗ ನಗರ ಜೆಡಿಎಸ್‌ನ ಅಧ್ಯಕ್ಷರಾದ “ದೀಪಕ್ ಸಿಂಗ್” ಅವರು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಷಡ್ಯಂತ್ರ ಮತ್ತು ಧರ್ಮಸ್ಥಳವನ್ನು ವಿವಾದದ ಕೇಂದ್ರಬಿಂದುವಾಗಿ ಮಾಡುತ್ತಿರುವವರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಹಿಂದಿನ ಸೌಜನ್ಯ ಪ್ರಕರಣದಲ್ಲಿ ನ್ಯಾಯಾಲಯವು ಈಗಾಗಲೇ ತೀರ್ಪು ನೀಡಿದೆ ಆದರೂ ಸಹ ಸೌಜನ್ಯ ಪ್ರಕರಣದಲ್ಲಿ ನಮ್ಮ ನಿರಂತರ ಹೋರಾಟವಿದೆ. ಆದರೆ ಇತ್ತೀಚಿನ ಕೆಲವು ದಿನಗಳಿಂದ ಧರ್ಮಸ್ಥಳದ ವಿರುದ್ಧ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಇದು ಧರ್ಮ ಕ್ಷೇತ್ರಕ್ಕೆ ಮಾಡಿದ ಅಪಮಾನವಷ್ಟೇ ಅಲ್ಲದೆ ಭಕ್ತರಿಗೂ ಮಾಡಿದ ಅವಮಾನ ಎಂದು ದೀಪಕ್ ಸಿಂಗ್ ಆಕ್ರೋಶವನ್ನು ವ್ಯಕ್ತಪಡಿಸಿದರು.Handcuffs Backpacks Vegan Leather Casual Backpack Multipurpose Travelling Bags Daypacks For Men And Women
ಇದೇ ಉದ್ದೇಶದಿಂದ ಧರ್ಮಸ್ಥಳದ ವಿರುದ್ಧ ನಡೆದಿರುವ ಷಡ್ಯಂತ್ರವನ್ನು ಎಸ್ಐಟಿ ತನಿಖೆ ಅಷ್ಟೇ ಅಲ್ಲದೆ NIA ತನಿಖೆಗೂ ವಹಿಸಬೇಕೆಂದು ನಮ್ಮ ಸಮಾವೇಶದ ಮೂಲಕ ಆಗ್ರಹಿಸುತ್ತೇವೆ ಎಂದರು. ಸಮಾವೇಶಕ್ಕೆ ರಾಜ್ಯ ಜೆಡಿಎಸ್‌ನ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಹಾಗೂ ಶಾಸಕರಾದ ಬಾಲಕೃಷ್ಣ, ಮತ್ತು ಮಾಜಿ ಶಾಸಕರಾದ ಪ್ರಸನ್ನ ಕುಮಾರ್, ಹಾಗೂ ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಕಡಿದಾಳ್ ಗೋಪಾಲ್, ಜೆಡಿಎಸ್ ನಗರ ಅಧ್ಯಕ್ಷರಾದ ದೀಪಕ್ ಸಿಂಗ್ ಹಾಗೂ ಜೆಡಿಎಸ್‌ನ ಅಪಾರ ಕಾರ್ಯಕರ್ತರು ಭಾಗವಹಿಸಿದ್ದರು.Also read: ಚಿನ್ನ ಕಳ್ಳ ಸಾಗಣೆ ಪ್ರಕರಣ: ಆರೋಪಿಗಳಾದ ರನ್ಯಾ ರಾವ್ ಮತ್ತು ತರುಣ್ ಕೊಂಡೂರು ರಾಜು ಅವರ ವಶದ ಹಿನ್ನೆಲೆ: ಇಂದು ವಿಚಾರಣೆ