Skip to main content
ವಿಡಿಯೋ
cinema

'ಬೆಂಗಳೂರು ಹುಡುಗಿಯರು ನಡತೆಗೆಟ್ಟವರು'...ರಾಜ್ ಬಿ.ಶೆಟ್ಟಿ ವಿತರಿಸಿದ ಈ ಸಿನಿಮಾ ಡೈಲಾಗ್ ಆಕ್ರೋಶಕ್ಕೆ ಗುರಿ! ಯಾವ ಸಿನಿಮಾ ಗೊತ್ತಾ?

By Ram Chethan
'ಬೆಂಗಳೂರು ಹುಡುಗಿಯರು ನಡತೆಗೆಟ್ಟವರು'...ರಾಜ್ ಬಿ.ಶೆಟ್ಟಿ ವಿತರಿಸಿದ ಈ ಸಿನಿಮಾ ಡೈಲಾಗ್ ಆಕ್ರೋಶಕ್ಕೆ ಗುರಿ! ಯಾವ ಸಿನಿಮಾ ಗೊತ್ತಾ?

ಕಲ್ಯಾಣಿ ಪ್ರಿಯದರ್ಶನ್ ಅಭಿನಯದ ‘ಲೋಕ’ ಚಿತ್ರದಲ್ಲಿ ಬೆಂಗಳೂರಿನ ಹುಡುಗಿಯರ ಬಗ್ಗೆ ಕೀಳುಮಟ್ಟದ ಸಂಭಾಷಣೆ ಬಳಕೆಯಾಗಿದೆ ಎಂಬ ಕಾರಣಕ್ಕೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಯಶಸ್ವಿ ಬಾಕ್ಸ್‌ಆಫೀಸ್ ಓಟದಲ್ಲಿರುವ ಈ ಸಿನಿಮಾ ಇದೀಗ ವಿವಾದದ ಹೊಳೆಯಲ್ಲಿ ಸಿಲುಕಿದೆ.

ಮಲಯಾಳಂ ಚಿತ್ರರಂಗದಲ್ಲಿ ಇತ್ತೀಚೆಗೆ ಬಿಡುಗಡೆಯಾದ ‘ಲೋಕ’ ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಆದರೆ, ಈ ಚಿತ್ರದಲ್ಲಿನ ಒಂದು ಸಂಭಾಷಣೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಿಯದರ್ಶನ್ ಅವರ ಪುತ್ರಿ ಕಲ್ಯಾಣಿ ಪ್ರಿಯದರ್ಶನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಂಡಿದ್ದರೂ, ಈಗ ವಿವಾದಕ್ಕೆ ಸಿಲುಕಿದೆ.

ಸಿನಿಮಾದಲ್ಲಿ ಬಳಸಲಾದ ಒಂದು ಸಂಭಾಷಣೆಯು ಬೆಂಗಳೂರಿನ ಹುಡುಗಿಯರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದೆ ಎಂಬ ಆರೋಪ ಕೇಳಿಬಂದಿದೆ. "ಬೆಂಗಳೂರಿನ ಹುಡುಗಿಯರನ್ನು ಮದುವೆಯಾಗುವುದಿಲ್ಲ, ಅವರು ನಡತೆಗೆಟ್ಟವರು" ಎಂಬ ಸಂಭಾಷಣೆಯು ಕನ್ನಡಿಗರಿಂದ ತೀವ್ರ ಟೀಕೆಗೆ ಒಳಗಾಗಿದೆ, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Van Heusen Men's Regular Fit Mid Rise Track Pant

ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಸುದೀಪ್‌ .... ಸೆಪ್ಟೆಂಬರ್ 3 ರಂದು ವಿಡಿಯೋ ಬಿಡುಗಡೆ...!

ದುಲ್ಕರ್ ಸಲ್ಮಾನ್ ನಿರ್ಮಾಣದ ‘ಲೋಕ ಚಾಪ್ಟರ್ 1’ ಸಿನಿಮಾದಲ್ಲಿ ಕಲ್ಯಾಣಿ ಪ್ರಿಯದರ್ಶನ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕರ್ನಾಟಕದಲ್ಲಿ ಈ ಚಿತ್ರವನ್ನು ರಾಜ್ ಬಿ ಶೆಟ್ಟಿ ವಿತರಿಸಿದ್ದಾರೆ. ಈ ವಿವಾದಾತ್ಮಕ ಸಂಭಾಷಣೆ ಸದ್ಯ ಚಿತ್ರತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.