ಮಧುಗಿರಿ: ಈ ಹಿಂದೆ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸಂಪುಟ ದರ್ಜೆಯ ಸ್ಥಾನಮಾನ ಮತ್ತು ಸಚಿವರಾಗಿದ್ದ ಕೆ ಎನ್. ರಾಜಣ್ಣ ಅವರು ಹೈಕಮಾಂಡ್ ಹೇಳಿಕೆಗಳ ವಿರುದ್ಧ ಟೀಕೆಗಳನ್ನು ಮಾಡಿದ ಕಾರಣಕ್ಕಾಗಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಸಂಪುಟದಿಂದ ವಜಾ ಗೊಂಡಿದ್ದರು. ಆದರೆ ಈ ಬೆಳವಣಿಗೆಯನ್ನು ಸಹಿಸದ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಹಾಗೂ ಅವರ ಸಮುದಾಯದ ಸ್ವಾಮೀಜಿಗಳು ಹೋರಾಟಕ್ಕೆ ಮುಂದಾಗಿದ್ದಾರೆ.
ಹೌದು, ದೆಹಲಿಯಲ್ಲಿ ಐದು ದಿನಗಳ ಪ್ರತಿಭಟನೆ ನಡೆಸಲು ಈಗಾಗಲೇ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದ್ದು ಹೈಕಮಾಂಡ್ಗೆ ಒತ್ತಡ ಹಾಕುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಇದು ಎಷ್ಟರಮಟ್ಟಿಗೆ ಫಲ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಅವರಿಗೆ ಈಗಾಗಲೇ ಹಲವು ಬಾರಿ ಕಾಂಗ್ರೆಸ್ ಉಸ್ತುವಾರಿಯಿಂದ ಮತ್ತು ರಾಷ್ಟ್ರೀಯ ಕಾಂಗ್ರೆಸ್‌ನಿಂದ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಾಗ ಜವಾಬ್ದಾರಿಯುತವಾಗಿ ಹೇಳಿಕೆ ನೀಡಿ ಎಂಬ ಸಂದೇಶ ಬಂದಿದ್ದರೂ ಸಹ ಅವರು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮತಗಳ್ಳತನ ಆರೋಪದ ವಿರುದ್ಧ ಹಲವು ಟೀಕೆಗಳನ್ನು ಮಾಡಿದ್ದರು. ಇದನ್ನು ಓದಿ: ಮೋದಿ–ಪುಟಿನ್–ಕ್ಸಿ ಭೇಟಿಗೆ ಅಮೆರಿಕ ಟೀಕೆ...'ನಮೋ' ನಡೆ ಬಗ್ಗೆಯೇ ನಾಲಗೆ ಹರಿಬಿಟ್ಟ ಟ್ರಂಪ್ ಸಲಹೆಗಾರ ನವರೋ!
ಹೀಗಾಗಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಈ ನಿರ್ಧಾರ ಕಾಂಗ್ರೆಸ್ನ ಹಲವು ರಾಷ್ಟ್ರೀಯ ಮುಖಂಡರ ಒಮ್ಮತದ ನಿರ್ಧಾರವಾಗಿತ್ತು. ಆದರೆ ಮುಂದೆ ಪ್ರತಿಭಟನೆ ನಡೆಸಿದರು ಸಚಿವ ಸ್ಥಾನ ಸಿಗುವುದು ಬಹುತೇಕ ಕಷ್ಟವಾಗಿದೆ ಎಂದು ತಿಳಿದುಬಂದಿದೆ.Handcuffs Backpacks Vegan Leather Casual Backpack Multipurpose Travelling Bags Daypacks For Men And Women
ಈ ಬೆನ್ನಲ್ಲೇ ಡಿಕೆ. ಶಿವಕುಮಾರ್ ಅವರ ಆಪ್ತ ಶಾಸಕರಾದ ಸುಧಾಕರ್ ಮಾಧ್ಯಮಗಳಿಗೆ ಒಂದು ಹೇಳಿಕೆಯನ್ನು ನೀಡಿದ್ದು, ಈಗಾಗಲೇ ರಾಜಣ್ಣ ಬಿಜೆಪಿಗೆ ಸೇರಲು ಅರ್ಜಿಯನ್ನು ಹಾಕಿದ್ದಾರೆ ಎಂದಿದ್ದಾರೆ. ಹೀಗಾಗಿ ಈ ಸುದ್ದಿ ಸದ್ಯದ ದೊಡ್ಡ ಸುದ್ದಿಯಾಗಿದೆ, ರಾಜಣ್ಣ ಅವರ ಮುಂದಿನ ನಡೆಯನ್ನು ಕಾದು ನೋಡಬೇಕಿದೆ.