Skip to main content
ವಿಡಿಯೋ
politics

ಬಿಜೆಪಿ ವಿರುದ್ದ ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯ, ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸುವ ಅಗತ್ಯವಿಲ್ಲ - ಗೃಹಸಚಿವ ಜಿ.ಪರಮೇ‍ಶ್ವರ್‌

By Shravanthi R
ಬಿಜೆಪಿ ವಿರುದ್ದ ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯ, ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸುವ ಅಗತ್ಯವಿಲ್ಲ - ಗೃಹಸಚಿವ ಜಿ.ಪರಮೇ‍ಶ್ವರ್‌

ಕೇಂದ್ರ ಸರ್ಕಾರದ ಸಿಬಿಐ ಹಾಗೂ ಎನ್‌ಐಎದಲ್ಲಿ ಸಾಕಷ್ಟು ಪ್ರಕರಣಗಳು ಬಾಕಿಯಿವೆ ಎಂದ ಅವರು, ಧರ್ಮಸ್ಥಳ ಪ್ರಕರಣದ ಸಂಬಂಧವಾಗಿ ಧರ್ಮಸ್ಥಳ ಚಲೋ, ಚಾಮುಂಡೇಶ್ವರಿ ಚಲೋ ಮಾಡುತ್ತಿರುವುದು ಅವರ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು, ಇದರ ನಂತರವೂ ಬಿಜೆಪಿ ಪ್ರತಿಭಟನೆ ಮಾಡುವುದು ಕೇವಲ ರಾಜಕೀಯ ಲಾಭಕ್ಕಾಗಿ" ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ

ಬೆಂಗಳೂರು: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, "ಬಿಜೆಪಿಯವರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಈ ಹಿಂದೆ ಇದು ಆರ್‌ಎಸ್‌ಎಸ್‌ ವರ್ಸರ್ಸ್‌ ಆರ್‌ಎಸ್‌ಎಸ್‌ ಕಿತ್ತಾಟ ಎಂದು ಹೇಳಿದ್ದ ಖರ್ಗೆ, ಅವರು ದೆಹಲಿ ಚಲೋ ಕೂಡ ಮಾಡಲಿ, ನಾವು ಸತ್ಯದ ಪರವಾಗಿ ಧ್ವನಿ ಎತ್ತುತ್ತೇವೆ. ಎಸ್‌ಐಟಿ ರಚಿಸುವವರೆಗೂ ಸುಮ್ಮನಿದ್ದವರು ಈಗ ಹೋರಾಟ ನಡೆಸಿದ್ದಾರೆ ಎಂದು ಸವಾಲು ಹಾಕಿದ್ದಾರೆ.


What Happened to Netaji Paperback – 15 October 2015

ಕೇಂದ್ರ ಸರ್ಕಾರದ ಸಿಬಿಐ ಹಾಗೂ ಎನ್‌ಐಎದಲ್ಲಿ ಸಾಕಷ್ಟು ಪ್ರಕರಣಗಳು ಬಾಕಿಯಿವೆ ಎಂದ ಅವರು, ಧರ್ಮಸ್ಥಳ ಪ್ರಕರಣದ ಸಂಬಂಧವಾಗಿ ಧರ್ಮಸ್ಥಳ ಚಲೋ, ಚಾಮುಂಡೇಶ್ವರಿ ಚಲೋ ಮಾಡುತ್ತಿರುವುದು ಅವರ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು, ಇದರ ನಂತರವೂ ಬಿಜೆಪಿ ಪ್ರತಿಭಟನೆ ಮಾಡುವುದು ಕೇವಲ ರಾಜಕೀಯ ಲಾಭಕ್ಕಾಗಿ" ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.


ಗೃಹಸಚಿವರ ಸ್ಪಷ್ಟನೆ -

"ಈಗಾಗಲೇ ಎಸ್‌ಐಟಿ ಸರಿಯಾಗಿ ಕೆಲಸ ಮಾಡುವಾಗ ಪ್ರಕರಣವನ್ನು ಎನ್‌ಐಎಗೆ ವಹಿಸುವುದಿಲ್ಲ. ತನಿಖೆ ವಿಚಾರಣೆ ನಡೆಯುತ್ತಿದೆ ಇನ್ನೂ ವರದಿ ಬಂದಿಲ್ಲ, ಹಾಗಾಗಿ ಇದರಲ್ಲಿ ಏನೂ ಸಮಸ್ಯೆಯಿಲ್ಲ. ಮುಖ್ಯಮಂತ್ರಿಗಳೂ ಕೂಡ ತಿಳಿಸಿದ್ದಾರೆ. ಧರ್ಮಸ್ಥಳ ಪ್ರಕೆರಣವನ್ನು ಎನ್‌ಐಎಗೆ ವಹಿಸಬೇಕೆಂಬ ಬಿಜೆಪಿಯ ಬೇಡಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿಗೆ ಪ್ರತ್ಯುತ್ತರ ನೀಡಿದ್ದಾರೆ. 

ಇದನ್ನೂ ಓದಿ: ನೆಸ್ಲೆ ಸಿಇಒ ಲಾರೆಂಟ್ ಫ್ರೀಕ್ಸ್ ವಜಾ: ನೀತಿ ಸಂಹಿತೆ ಉಲ್ಲಂಘನೆ, ಫಿಲಿಪ್ ನವ್ರಾಟಿಲ್ ಹೊಸ ಸಿಇಒ..!