ಸಿಲಿಕಾನ್ ಸಿಟಿಯಾದ ಬೆಂಗಳೂರಿನಲ್ಲಿ ಇಂದಿನಿಂದ ಮಳೆರಾಯನ ಅಬ್ಬರ ಜೋರಾಗಿದೆ, ಬೆಂಗಳೂರಿನ ಕೆಲವು ಕಡೆ ವರುಣನ ಅಬ್ಬರ ಶುರುವಾಗಿದೆ, ಕೆಲವು ಕಡೆ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದೆ. ಮಳೆಯಿಂದಾಗಿ ಕೆಲವು ಪ್ರದೇಶದಲ್ಲಿ ಪವರ್ ಕಟ್ ಕೂಡ ಮಾಡಿದ್ದಾರೆ. ಜನರು ಸಂಚಾರ ಮಾಡಲು ಪರದಾಡುವಂತಾಗಿದೆ.ಕರ್ನಾಟಕದಲ್ಲಿ ಭಾರೀ ಮಳೆಯಿಂದ ಫುಡ್ ಡೆಲಿವರಿ ಸೇವೆಗಳಿಗೆ ಸವಾಲು: ಜಲಾವೃತ ರಸ್ತೆಗಳು ಮತ್ತು ಸುರಕ್ಷತೆಯ ಕೊರತೆ..!
ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಆಗಿದೆ, ರಾಜಾಜಿನಗರ, ಶಾಂತಿನಗರ, ಯಶವಂತಪುರ, ಕೆ ಆರ್ .ಮಾರುಕಟ್ಟೆ, ಮೈಸೂರು ರಸ್ತೆ, ವಿಜಯನಗರ, ಬಸವನಗುಡಿ, ವಿದ್ಯಾಪೀಠ, ನಾಗರಬಾವಿ, ಬನಶಂಕರಿ, ಸೇರಿದಂತೆ ಹಲವು ಪ್ರದೇಶದಲ್ಲಿ ಬಿಟ್ಟು ಬಿಡದೆ ವರುಣನ ಅಬ್ಬರ ಜೋರಾಗಿದೆ. ರಸ್ತೆಯಲ್ಲಿ ಮಳೆಯ ನೀರು ಹೊಳೆಯ ರೀತಿಯಲ್ಲಿ ಹರಿಯುತ್ತಿದೆ.
ಬೆಂಗಳೂರಿನ ಹಲವೆಡೆ ಮಳೆರಾಯನ ಅಬ್ಬರದಿಂದ ಜನರು ತತ್ತರಿಸಿ ಹೋಗಿದ್ದಾರೆ, ಅವರು ಸಂಚಾರ ಮಾಡುವ ರಸ್ತೆಯಲ್ಲಿ ನೀರಿನ ಹೊಳೆಯೇ ಹರಿಯುತ್ತಿದೆ. ವಾಹನ ಸಂಚಾರ ಮಾಡಲು ಜನರು ಪರಾದಾಡುತ್ತಿದ್ದಾರೆ. ಮಳೆಯಿಂದ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ.
ಬೆಂಗಳೂರಿನ ಇತರೆ ನಗರದ ರಸ್ತೆಗಳಲ್ಲಿ ಮಳೆಯ ನೀರು ನಿಂತು ಅವಾಂತರ ಸೃಷ್ಟಿಸಿದೆ, ಜನರು ಕೆಲಸಕ್ಕೆ ಹೋಗಲು ಪರಾದಾಡುತ್ತಿದ್ದಾರೆ. ರಸ್ತೆಯಲ್ಲಿ ಮಳೆಯ ನೀರು ನಿಂತ ಕಾರಣ, ರಸ್ತೆಯ ಗುಂಡಿ ನೀರಿನಲ್ಲಿ ಆವೃತ್ತಿಯಾಗಿದೆ. ಜನರು ಸಂಚಾರ ಮಾಡುವ ರಸ್ತೆಯೆಂದು ಗುಂಡಿಗೆ ತಮ್ಮ ವಾಹನವನ್ನು ಹಾರಿಸಿ, ಪರಾದಾಡುವಂತಾಗಿದೆ. ಬೆಂಗಳೂರಿನಲ್ಲಿ ಮಳೆಯು ಮುಗಿಯುವರೆಗೂ ಜನರು ಪರಾದಾಡುವುದು ತಪ್ಪುವುದಿಲ್ಲ. ಪ್ರತಿದಿನ ಜನರು ಸಂಕಷ್ಟ ಎದುರಿಸಬೇಕು.ಭಾರೀ ಮಳೆಯಿಂದ ದೆಹಲಿ ಜಲಾವೃತ: ಟ್ರಾಫಿಕ್ ಜಾಮ್ ಮತ್ತು ಜನಜೀವನ ಅಸ್ತವ್ಯಸ್ತ..!
ಬೆಂಗಳೂರಿನಲ್ಲಿ ಮಳೆ ಬರುವ ಸಮಯದಲ್ಲಿ ರಸ್ತೆಯ ಹೊಳೆಯಾಗುತ್ತದೆ. ಕೆಲವು ಮನೆಯ ಒಳಗೆ ನೀರು ನುಗ್ಗುತ್ತದೆ. ಜನರ ಜೀವನ ನರಕ ದರ್ಶನವಾಗುತ್ತದೆ, ಜನರು ಜೀವನ ನಡೆಸಲು ಬಹಳ ಕಷ್ಟವಾಗುತ್ತದೆ. ಬೆಂಗಳೂರಿನ ಕೆಲವು ತಗ್ಗು ಪ್ರದೇಶದಲ್ಲಿ ಮಳೆಯ ಬಂದರೆ ಸಾಕು ಮಳೆಯ ನೀರು ಮನೆಯ ಒಳಗೆ ನುಗ್ಗುತ್ತದೆ. ಜನರ ನಿದ್ದೆ ಗೆಡಿಸುತ್ತದೆ. ಬೆಂಗಳೂರಿನಲ್ಲಿ ವರುಣನ ಅಬ್ಬರದಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ, ಮತ್ತೇ ಮಳೆಯ ಭೀತಿ ಶುರುವಾಗಿದೆ, ಯಾವ ಸಮಸ್ಯೆ ಮತ್ತೆ ಮಳೆಯಿಂದ ಶುರುವಾಗುತ್ತದೆ ಎಂದು ಜನರು ಆತಂಕ ಮನೆ ಮಾಡಿದೆ.ಮುಂಬೈನಲ್ಲಿ ವರುಣನ ಆರ್ಭಟ: ಶಾಲಾ- ಕಾಲೇಜು ರಜೆ & ರೆಡ್ ಅಲರ್ಟ್ ಘೋಷಣೆ..!