ಮೈಸೂರು: ಮೈಸೂರು ದಸರಾ ಉತ್ಸವ ಎಂದರೇ ನಾಡ ಹಬ್ಬ ಎಂದೇ ಪ್ರಖ್ಯಾತಿ, ತಾಯಿ ಚಾಮುಂಡೇಶ್ವರಿಯನ್ನ ನಾಡ ದೇವತೆ ಎಂದು ಪೂಜಿಸುತ್ತೇವೆ. ಆದರೆ ಪ್ರಸ್ತುತ ಕರ್ನಾಟಕದಲ್ಲಿ ದಸರಾ ಧಾರ್ಮಿಕ ಹಬ್ಬವೊ ಅಥವಾ ಧಾರ್ಮಿಕ ಹಬ್ಬವೊ ಎಂಬ ಚರ್ಚೆ ಜೋರಾಗಿದೆ.
ದಸರಾ ಧಾರ್ಮಿಕ ಉತ್ಸವವೂ ಹೌದು ಯಾಕೆಂದರೆ ಇದರ ಮೂಲ ಉಲ್ಲೇಖ ಇರುವುದು ಮಾರ್ಕಂಡೇಯ ಪುರಾಣದಲ್ಲಿ, ಜಗನ್ಮಾತೆ ಹೇಗೆ ಮಹಿಷಾಸುರನ ಸಂಹಾರ ಮಾಡುತ್ತಾಳೆ, ಶುಂಭ ನಿಶುಂಭರ ಸಂಹಾರ ಮಾಡುತ್ತಾಳೆ ಎಂಬ ಎಲ್ಲ ಸಂಗತಿಗಳೂ ಉಲ್ಲೇಖ ಇದೆ. ಆ ಕಥೆಯೇ ನವರಾತ್ರಿ ಆಚರಣೆಗೆ ಮುಖ್ಯವಾದದ್ದು.
ಪುರಾಣದ ಪ್ರಸಂಗಗಳನ್ನ ತೆಗೆದುಕೊಂಡು ಶರತ್ ಕಾಲದಲ್ಲಿ ನವರಾತ್ರಿಯನ್ನ ಆಚರಣೆ ಮಾಡುವುದು ಚಿರಕಾಲದ ಒಂದು ಅಭ್ಯಾಸವಾಗಿದೆ. ಹೀಗೆ ಪುರಾಣ ಮೂಲದಲ್ಲಿರುವಂತದ್ದನ್ನ ನಾವು ಹಿಂದೂಗಳ ಬಹಳ ಶ್ರದ್ದೆಯಿಂದ ನಂಬುತ್ತೇವೆ. ಹಿಂದೆ ರಾಜಂದಿರೂ ಈ ಆಚರಣೆಯನ್ನ ಪೋಷಿಸುತ್ತಾ ಇದ್ದರೂ, ಅದ್ದೂರಿಯಿಂದ ಇಡಿ ಊರು ಜಗನ್ಮಾತೆಯನ್ನ ಆರಾಧಿಸುತ್ತಿತ್ತು, ಅದಕ್ಕೆ ನಾಡ ಹಬ್ಬ ಎಂದು ಪ್ರತಿಯೊಬ್ಬರೂ ಸಂಭ್ರಮಿಸುತ್ತಿದ್ದರು.
ಈ ಹಬ್ಬ ನಮ್ಮ ನಾಡು ನುಡಿ ಅಸ್ಮಿತೆಯ ಪ್ರತೀಕವಾಗಿದೆ, ಇಂತಹ ಹಬ್ಬವನ್ನ ನಮ್ಮ ಸಂಸ್ಕೃತಿಯನ್ನ ಆಚರಿಸುವವರು, ಅದನ್ನ ಗೌರವಿಸುವವರೇ ಉದ್ಘಾಟಿಸಿದರೆ ಉತ್ತಮವಾಗಿರುತ್ತದೆ.