ಈ ಹಿಂದೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿದ್ದ ಕೆ ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಲಾಗಿತ್ತು. ಅದಕ್ಕೆ ಕಾರಣ ಅವರು ಎಲ್ಲೆಂದರಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದರು ಎಂಬ ಒಮ್ಮತದ ನಿರ್ಧಾರವಾಗಿತ್ತು. ಆ ನಿರ್ಧಾರವನ್ನು ಕಾಂಗ್ರೆಸ್ನ ಹಲವಾರು ನಾಯಕರು, ಶಾಸಕರು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾದ ಸುರ್ಜೆವಾಲಾ ಅವರಿಗೆ ಮುಟ್ಟಿಸಿದ್ದು.
ಆದರೆ ಅವರನ್ನು ಯಾವಾಗ ಸಂಪುಟ ಸ್ಥಾನಮಾನದಿಂದ ವಜಾ ಮಾಡಲಾಯಿತು ಆಗಿನಿಂದಲೂ ಸಹ ಅವರ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಮಧುಗಿರಿಯಿಂದ ಶಾಸಕರಾಗಿದ್ದ ಅವರು ಬೇಗನೆ ಸಚಿವ ಸ್ಥಾನದಿಂದ ಬಲವಂತದ ರಾಜೀನಾಮೆ ನೀಡಿದರು ಹೀಗಾಗಿ ಅವರ ಅಭಿಮಾನಿಗಳು ಹಾಗೂ ಸ್ವಾಮೀಜಿಗಳ ಸಮೇತ ದೆಹಲಿಯಲ್ಲಿ ಐದು ದಿವಸಗಳ ಕಾಲ ಪ್ರತಿಭಟನೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದರು. ಈ ಪ್ರತಿಭಟನೆ ಪುನಃ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಲು ಎಂಬುದು ಎಂದು ಎಲ್ಲರಿಗೂ ಗೊತ್ತಿದೆ. TRASE Block Heels Sandals For Women, Dusky Stylish & Comfortable Footwear
ಹೀಗಾಗಿ ಹೈಕಮಾಂಡ್ನ ಭೇಟಿಗಾಗಿ ಕೆ ಎನ್. ರಾಜಣ್ಣ ಅವರು ಎರಡು ಬಾರಿ ಅವಕಾಶವನ್ನು ಕೇಳಿದ್ದರು. ಎರಡು ಬಾರಿಯೂ ಸಹ ನಿರಾಕರಿಸಿದ್ದಾಗಿ ತಿಳಿದು ಬಂದಿದೆ. ಏಕೆಂದರೆ ಈ ಹಿಂದೆ ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮಿಸಿದ ದಿನ ಮತಗಳ್ಳತನದ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಹಲವಾರು ಹೇಳಿಕೆಗಳನ್ನು ರಾಹುಲ್ ಗಾಂಧಿ ನೀಡಿದ್ದರು. ರಾಹುಲ್ ಗಾಂಧಿ ಹೇಳಿಕೆಗಳ ವಿರುದ್ಧವೇ ಕೆ ಎನ್. ರಾಜಣ್ಣ ಟೀಕೆ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿತ್ತು.ಇದನ್ನು ಓದಿ: ಬಿಹಾರದಲ್ಲಿ ಪ್ರಧಾನಿ ಮೋದಿ ತಾಯಿಯನ್ನು ನಿಂದಿಸಿದ ವಿಚಾರ: ಬಿಹಾರದ ಮಹಿಳೆಯರು ಆ ಹೇಳಿಕೆಗಳನ್ನು ಖಂಡಿಸಿದ್ದಾರೆ.
ಹೀಗಾಗಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಸುರ್ಜೆವಾಲ ಅವರು ರಾಜಣ್ಣ ಅವರನ್ನು ಹೈಕಮಾಂಡ್‌ಗೆ ಭೇಟಿ ಮಾಡಿಸುವುದಕ್ಕೆ ನಿರಾಕರಿಸಿದಂತೆ ಕಾಣುತ್ತಿದೆ. ಹೀಗಾಗಿ ಮುಂದೆ ರಾಜಣ್ಣ ಅವರ ಸಚಿವ ಸ್ಥಾನದ ಆಕಾಂಕ್ಷೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ