Skip to main content
ವಿಡಿಯೋ
politics

ಸೌಜನ್ಯ ಪ್ರಕರಣ ಆರೋಪ ಇರುವ ಧರ್ಮಾಧಿಕಾರಿಗಳನ್ನು ಓಲೈಸುವರು, ಸೌಜನ್ಯ ಮನೆಗೂ ಹೋಗುವರು - ಬಿಜೆಪಿಯವರು ಯಾರ ಪರ? - ಸಿಎಂ ಸಿದ್ದರಾಮಯ್ಯ

By Shravanthi R
ಸೌಜನ್ಯ ಪ್ರಕರಣ ಆರೋಪ ಇರುವ ಧರ್ಮಾಧಿಕಾರಿಗಳನ್ನು ಓಲೈಸುವರು, ಸೌಜನ್ಯ ಮನೆಗೂ ಹೋಗುವರು - ಬಿಜೆಪಿಯವರು ಯಾರ ಪರ? - ಸಿಎಂ ಸಿದ್ದರಾಮಯ್ಯ

ಧರ್ಮಯಾತ್ರೆ ಸಲುವಾಗಿ ಬಿಜೆಪಿ ನಾಯಕರು ಒಟ್ಟಾಗಿ ಸೇರಿ ಹೋರಾಟ ಯಾತ್ರೆ ನಡೆಸಿದ್ದರು. ಅತ್ತ ಸೌಜನ್ಯ ಪರ ಅವರ ಮನೆಗೂ ಧಾವಿಸಿ ಸೌಜನ್ಯಾಳಿಗೆ ನ್ಯಾಯ ಸಿಗಬೇಕು ಎನ್ನುತ್ತಾರೆ. ಅದೇ ರೀತಿ ಧರ್ಮಸ್ಥಳ ಧರ್ಮಾಧಿಕಾರಿಗಳನ್ನು ಭೇಟಿ ಮಾಡಿ ವೀರೇಂದ್ರ ಹೆಗಡೆ ಅವರನ್ನು ಬೆಂಬಲಿಸಿದ್ದಾರೆ. ಧರ್ಮಸ್ಥಳದಲ್ಲಿ ಬೃಹತ್ ಸಂಖ್ಯೆಯಲ್ಲಿ ಧರ್ಮಸ್ಥಳ ಚಲೋ ಸೇರಿದ ಬಿಜೆಪಿಗರು, ಇವರು ಯಾರ ಪರವಾಗಿದ್ದಾರೆ ಎಂದು ಸೌಜನ್ಯ ಪ್ರಕರಣವನ್ನು ಸಿಬಿಐ ಹಾಗೂ ಎನ್‌ಐಎಗೆ ಕೊಡಬೇಕೆಂದು ಬಿಜೆಪಿ ಹೇಳುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಧರ್ಮಸ್ಥಳದಲ್ಲಿ ಧರ್ಮ ಸಮಾವೇಶ ನಡೆಸಿದ ಬಿಜೆಪಿಯ ಪ್ರಮುಖ ನಾಯಕರು ಧರ್ಮಸ್ಥಳ ಪ್ರಕರಣವನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ತನಿಖಾ ದಳಕ್ಕೆ ನೀಡಬೇಕೆಂದು ಆಗ್ರಹಿಸಿದ್ದರು. ಇದನ್ನು ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇವರು ಸೌಜನ್ಯ ಪ್ರಕರಣ ಆರೋಪ ಎದುರಿಸುತ್ತಿರುವ ಧರ್ಮಾಧಿಕಾರಿಗಳನ್ನು ಭೇಟಿ ಮಾಡಿದ್ದಾರೆ, ಆನಂತರ ಸೌಜನ್ಯ ಮನೆಗೂ ಹೋಗಿ ಕಾನೂನು ನ್ಯಾಯ ಸಿಗಬೇಕು ಅಂತ ಮಾತನಾಡಿದ್ದಾರೆ. ಅಷ್ಟಕ್ಕೂ ಬಿಜೆಪಿ ಯಾರ ಪರ ಎಂದು ಅವರು ಪ್ರಶ್ನಿಸಿದ್ದಾರೆ.

ಧರ್ಮಯಾತ್ರೆ  ಸಲುವಾಗಿ ಬಿಜೆಪಿ ನಾಯಕರು ಒಟ್ಟಾಗಿ ಸೇರಿ ಹೋರಾಟ ಯಾತ್ರೆ ನಡೆಸಿದ್ದರು. ಅತ್ತ ಸೌಜನ್ಯ ಪರ ಅವರ ಮನೆಗೂ ಧಾವಿಸಿ ಸೌಜನ್ಯಾಳಿಗೆ ನ್ಯಾಯ ಸಿಗಬೇಕು ಎನ್ನುತ್ತಾರೆ. ಅದೇ ರೀತಿ ಧರ್ಮಸ್ಥಳ ಧರ್ಮಾಧಿಕಾರಿಗಳನ್ನು ಭೇಟಿ ಮಾಡಿ ವೀರೇಂದ್ರ ಹೆಗಡೆ ಅವರನ್ನು ಬೆಂಬಲಿಸಿದ್ದಾರೆ. ಧರ್ಮಸ್ಥಳದಲ್ಲಿ ಬೃಹತ್ ಸಂಖ್ಯೆಯಲ್ಲಿ ಧರ್ಮಸ್ಥಳ ಚಲೋ ಸೇರಿದ ಬಿಜೆಪಿಗರು,  ಇವರು ಯಾರ ಪರವಾಗಿದ್ದಾರೆ ಎಂದು ಸೌಜನ್ಯ ಪ್ರಕರಣವನ್ನು ಸಿಬಿಐ ಹಾಗೂ ಎನ್‌ಐಎಗೆ ಕೊಡಬೇಕೆಂದು ಬಿಜೆಪಿ ಹೇಳುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಈಗಾಗಲೇ ಎಸ್ಐಟಿ ತನಿಖೆ ನಡೆಸಿ ವರದಿ ಸಲ್ಲಿಸುವ ಹಂತದಲ್ಲಿದೆ ಎನ್ನಲಾಗಿದೆ, ಈಗ ಸುಪ್ರೀಂ ಕೋರ್ಟ್ ಗೆ ಹೋಗಬೇಕೆಂದು ಬಿಜೆಪಿ ನಾಯಕರು ಹೇಳುತ್ತಿರುವುದು ಯಾವ ರೀತಿ ಸರಿ ಎಂದು ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಸೌಜನ್ಯ ಪ್ರಕರಣವು ಸೌಜನ್ಯ ತಾಯಿ ಹಾಗೂ ಕುಟುಂಬದವರಿಗೆ ಸಂಬಂಧಿಸಿರುವುದಾದರಿಂದ ಮರು ತನಿಖೆಗೆ ಹೋಗಬೇಕೆ ಬೇಡವೇ ಎಂಬುದರ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿದೆ. ಅಗತ್ಯವಿದ್ದರೆ ಅವರು ಮೇಲ್ ಹಂತದ ನ್ಯಾಯಾಲಯಕ್ಕೆ ಹೋಗಲಿ, ಆದರೆ ಬಿಜೆಪಿಯವರು ಯಾರ ಪರ ಇದ್ದಾರೆ ಎಂದು ಬಿ.ವೈ ವಿಜಯೇಂದ್ರರಿಗೆ ತಿರುಗೇಟು ನೀಡಿದ್ದಾರೆ. 

United Colors of Benetton Polo T Shirt | Collar Tshirts | Half Sleeves Plain T Shirt | Solid Polo T-Shirt with Colored Collar Tipping

ಇದು ರಾಜಕೀಯ ಯಾತ್ರೆ ಎಂದು ಹೇಳಿರುವ ಅವರು ಧರ್ಮದ ಹೆಸರಿನಲ್ಲಿ ಕೈಗೊಂಡ ಹಾಗೂ ರಾಜಕೀಯ ಹಿತಾಸಕ್ತಿಗಾಗಿ ಆರಂಭಿಸಿರುವ ಯಾತ್ರೆಯಾಗಿದೆ ಹಾಗೂ ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡಿರುವ ಬಿಜೆಪಿಯವರು ಎಸ್ಐಟಿ ರಚಿಸಿದಾಗ ಎನ್ಐಎ ತನಿಖೆ ಮಾಡಲಿ ಎನ್ನಲಿಲ್ಲ ಮತ್ತೆ ಈಗ ಒತ್ತಾಯಿಸುತ್ತಿದ್ದಾರೆ ಎಂದು ಸಿಎಂ ಅರುಹಿದರು. ವಿರೋಧ ಪಕ್ಷ ನಾಯಕ ಆರ್ ಅಶೋಕ್ ಸದನದಲ್ಲಿ ಹೇಳಿದ್ದೆ ಬೇರೆ ಈಗ ಮಾತನಾಡುತ್ತಿರುವುದೇ ಬೇರೆ ಎಂದು ಆರೋಪಿಸಿರುವ ಅವರು ದಿನಕ್ಕೊಂದು ಹೇಳಿಕೆ ಕೊಟ್ಟು ಮಾತನಾಡುತ್ತಿರುವುದಲ್ಲದೇ ಅಸತ್ಯದ ಮೇಲೆ ಅವರು ಚರ್ಚೆ ನಡೆಸಿ ಆರೋಪಿಸುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಬಿಹಾರದಲ್ಲಿ ಪ್ರಧಾನಿ ಮೋದಿ ತಾಯಿಯನ್ನು ನಿಂದಿಸಿದ ವಿಚಾರ: ಬಿಹಾರದ ಮಹಿಳೆಯರು ಆ ಹೇಳಿಕೆಗಳನ್ನು ಖಂಡಿಸಿದ್ದಾರೆ.