ನ್ಯೂಯಾರ್ಕ್‌ನಲ್ಲಿ ರೋಚಕ ಪಂದ್ಯಾವಳಿ ಸೃಷ್ಟಿಸಿರುವ ಯುಎಸ್ ಓಪನ್ ಟೆನ್ನಿಸ್ ಅಂತಿಮ ಘಟ್ಟ ಸಮೀಪಿಸಲಿದೆ. ತಮ್ಮ ಬೆನ್ನು ನೋವನ್ನು ಮೇರಿ ನಿಂತು ಅನುಭವಿ ಆಟಗಾರ ನೊವಾಕ್ ಜೊಕೊವಿಕ್ ಅವರು ನಾಲ್ಕು ಸೆಟ್ ಗಳ ಸೆಣೆಸಾಟದಲ್ಲಿ ಅಮೆರಿಕಾ ಆಟಗಾರ ಟೇಲರ್ ಫ್ರಿಟ್ಜ್ ಅವರನ್ನು 6-3, 7-5, 3-6, 6-4 ಅಂತರದಿಂದ ಸೋಲಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ 2ನೇ ಶ್ರೇಯಾಂಕದ ಕಾರ್ಲೊಸ್ ಅಲ್ಕರಾಜ್ ಅವರೊಂದಿಗೆ ಸೆಣಸಾಡಲಿದ್ದಾರೆ.
25ನೇ ಗ್ರಾಂಡ್‌ಸ್ಲಾಂ ಪ್ರಶಸ್ತಿ ಮೇಲೆ ಲಕ್ಷ್ಯವಿಟ್ಟಿರುವ ಅವರು ಅದನ್ನು ಸಾಧಿಸಲು ಇನ್ನೆರಡೇ ಹೆಜ್ಜೆ ಬಾಕಿ ಇದೆ. ಬುಧವಾರದಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆರಂಭಿಕ ಎರಡು ಸೆಟ್‌ನಲ್ಲಿ ಗೆದ್ದು ಮುನ್ನಡೆ ಸಾಧಿಸಿದ ನಂತರ ಮೂರನೇ ಸುತ್ತಿನಲ್ಲಿ ಫ್ರಿಟ್ಜ್ ಗೆದ್ದರು. ನಾಲ್ಕನೇ ಸೆಟ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ತೋರಿ ಪಂದ್ಯವನ್ನು ಗೆದ್ದುಕೊಂಡರು.
Van Heusen Men's Slim Fit Mid Rise Pants
ಕೊನೆಗೆ ಮೈದಾನದಲ್ಲಿ ವಿಶೇಷ ನೃತ್ಯ ಮಾಡುವ ಮೂಲಕ ತಮ್ಮ ಗೆಲುವನ್ನು ಸಂಭ್ರಮಿಸಿದರು, ಇದೇ ವೇಳೆ ಅವರ ಮಗಳು ತಾರಾ ಎಂಟನೇ ಹುಟ್ಟುಹಬ್ಬದ ಸಂಭ್ರಮ ಮನೆಮಾಡಿದ್ದರ ಸಲುವಾಗಿ ಅವಳಿಗೆ ಉಡುಗೊರೆಯಾಗಿ ಈ ಗೆಲುವು ಎನ್ನುವಂತೆ ತಮ್ಮ ಉತ್ಸಾಹವನ್ನು ತೋರ್ಪಡಿಸಿದರು ಎನ್ನಲಾಗಿದೆ.
ಇದನ್ನೂ ಓದಿ: ಸಾದಿಕ್ ಮುಹಮ್ಮದ್ ಖಾನ್ ಅಬ್ಬಾಸಿ, 1911ರ ದೆಹಲಿ ದರ್ಬಾರ್‌ನಲ್ಲಿ 7 ವರ್ಷದ ಬಹಾವಲ್‌ಪುರದ ನವಾಬ್: ಇತಿಹಾಸ