Skip to main content
ವಿಡಿಯೋ
1/2
cinema

OTT ಪ್ರಿಯರಿಗೆ ಶುಭಸುದ್ದಿ..ಕಣ್ಣಪ್ಪ ಭಕ್ತಿಗೆ ಒಲಿಯಲಿದೆ ಪ್ರೈಮ್ ವಿಡಿಯೋ! ಮಲ್ಟಿ ಸ್ಟಾರ್ ಫ್ಯಾನ್ಸ್‌ಗೆ ಹಬ್ಬ ಯಾವಾಗ?

By Ram Chethan
 OTT ಪ್ರಿಯರಿಗೆ ಶುಭಸುದ್ದಿ..ಕಣ್ಣಪ್ಪ ಭಕ್ತಿಗೆ ಒಲಿಯಲಿದೆ ಪ್ರೈಮ್ ವಿಡಿಯೋ! ಮಲ್ಟಿ ಸ್ಟಾರ್ ಫ್ಯಾನ್ಸ್‌ಗೆ ಹಬ್ಬ ಯಾವಾಗ?

ವಿಷ್ಣು ಮಂಚು ನಟಿಸಿರುವ ಭಕ್ತಿಪ್ರಧಾನ ಚಿತ್ರ ಕಣ್ಣಪ್ಪ, ಯಶಸ್ವಿ ಥಿಯೇಟರ್ ಪ್ರದರ್ಶನದ ಬಳಿಕ ಈಗ ಪ್ರೈಮ್ ವಿಡಿಯೋ ಇಂಡಿಯಾದಲ್ಲಿ ಸ್ಟ್ರೀಮಿಂಗ್‌ಗೆ ಬಂದಿದೆ. ಶಿವನ ಪರಮಭಕ್ತನಾದ ಕಣ್ಣಪ್ಪನ ಪೌರಾಣಿಕ ಕಥೆ, ಭಕ್ತಿ, ತ್ಯಾಗ ಮತ್ತು ಆಧ್ಯಾತ್ಮಿಕ ಶಕ್ತಿಯ ಅದ್ಭುತ ಚಿತ್ರಣವನ್ನು ನೀಡುತ್ತದೆ.

ಪ್ರೈಮ್ ವಿಡಿಯೋ ಇಂಡಿಯಾ ಕಣ್ಣಪ್ಪ ಚಿತ್ರದ ಒಟಿಟಿ ಪ್ರೀಮಿಯರ್ ಅನ್ನು ಅಧಿಕೃತವಾಗಿ ಘೋಷಿಸಿದೆ. ತೆಲುಗು ಭಾಷೆಯ ಈ ಭಕ್ತಿಪ್ರಧಾನ ಸಿನಿಮಾ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ.

ಈ ಚಿತ್ರವು ಪ್ರೈಮ್ ವಿಡಿಯೋದಲ್ಲಿ 'ಗ್ಲೋರಿ, ಗಟ್ಸ್, ಗ್ರ್ಯಾಂಡರ್, ಆಲ್ ಇನ್ ಒನ್ ಎಪಿಕ್ #KannappaOnPrime' ಎಂಬ ಅಡಿಬರಹದೊಂದಿಗೆ ಸ್ಟ್ರೀಮಿಂಗ್ ಆಗಲಿದೆ ಎಂದು ಘೋಷಿಸಲಾಗಿದೆ. ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ಮತ್ತು ವಿಷ್ಣು ಮಂಚು ಬರೆದು ನಟಿಸಿರುವ ಈ ಚಿತ್ರವನ್ನು ಹಿರಿಯ ನಟ ಮೋಹನ್ ಬಾಬು ನಿರ್ಮಿಸಿದ್ದಾರೆ.

ಈ ಚಿತ್ರವು ಕನ್ನಪ್ಪನ ಪೌರಾಣಿಕ ಕಥೆಯಾಧಾರಿತವಾಗಿದೆ. ಕನ್ನಪ್ಪ ಮೊದಲು ತಿನ್ನಾಡು ಎಂಬ ಹೆಸರಿನ ಒಬ್ಬ ಉಗ್ರ ಬುಡಕಟ್ಟು ಯೋಧನಾಗಿರುತ್ತಾನೆ, ನಂತರ ವಾಯುಲಿಂಗನಾದ ಶಿವನ ಪರಮ ಭಕ್ತನಾಗಿ ಪರಿವರ್ತನೆಯಾಗುತ್ತಾನೆ. ಅಚಲ ಭಕ್ತಿಯ ಸಂಕೇತವಾಗಿ ತನ್ನ ಕಣ್ಣುಗಳನ್ನು ತ್ಯಾಗ ಮಾಡಿದ ಕಣ್ಣಪ್ಪ ಕಥೆ, ಭಕ್ತಿ, ಧೈರ್ಯ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ತೋರಿಸುತ್ತದೆ.

Tommy Hilfiger Quartz Multifunction Blue Dial Leather Strap Watch for Men-NETH1791399

ಈ ಸಿನಿಮಾ ಪುರಾಣವನ್ನು ಸಿನಿಮಾ ವೈಭವದೊಂದಿಗೆ ಅದ್ಭುತವಾಗಿ ಬೆರೆಸಿದೆ. ದೃಶ್ಯ ಶ್ರೀಮಂತಿಕೆ ಮತ್ತು ಸಾಂಸ್ಕೃತಿಕ ಸೌಂದರ್ಯದ ಹಿನ್ನೆಲೆಯಲ್ಲಿ ಪಾತ್ರದ ಪ್ರಯಾಣದ ತೀವ್ರತೆಯನ್ನು ಸೆರೆಹಿಡಿದಿದೆ. ವಿಷ್ಣು ಮಂಚು ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದು, ಪ್ರೀತಿ ಮುಖುಂದನ್, ಮೋಹನ್ ಬಾಬು, ಆರ್. ಶರತ್‌ಕುಮಾರ್ ಮತ್ತು ಮಧೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿವಾದದ ನಡುವೆಯೂ 'ಲೋಕಃ' ಸಿನಿಮಾ ಭರ್ಜರಿ ರೆಕಾರ್ಡ್...ಒಂದೇ ವಾರದಲ್ಲಿ ದುಲ್ಕರ್ ಸಲ್ಮಾನ್ ಗಳಿಸಿದ್ದೆಷ್ಟು ಕೋಟಿ ಗೊತ್ತಾ?

ಭಾರತದ ಕೆಲವು ಜನಪ್ರಿಯ ತಾರೆಯರಾದ ಮೋಹನ್‌ಲಾಲ್, ಪ್ರಭಾಸ್, ಅಕ್ಷಯ್ ಕುಮಾರ್ ಮತ್ತು ಕಾಜಲ್ ಅಗರವಾಲ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇದು ಭಾಷೆ ಮತ್ತು ಪ್ರಾದೇಶಿಕ ಗಡಿಗಳನ್ನು ಮೀರಿದ ಒಂದು ಪ್ಯಾನ್-ಇಂಡಿಯನ್ ಕಲಾಕೃತಿಯಾಗಿದೆ.

ಚಿತ್ರಮಂದಿರಗಳಲ್ಲಿ ಯಶಸ್ವಿಯಾದ ನಂತರ, ಈ ಚಿತ್ರವು ಪ್ರೈಮ್ ವಿಡಿಯೋ ಇಂಡಿಯಾದಲ್ಲಿ ಬಿಡುಗಡೆಯಾಗುವುದರಿಂದ ಪ್ರೇಕ್ಷಕರು ಈ ಭಕ್ತಿ ಮತ್ತು ಪರಿವರ್ತನೆಯ ಕಥೆಯನ್ನು ಮನೆಯಲ್ಲೇ ಆರಾಮವಾಗಿ ನೋಡಬಹುದು. ಸ್ಫೂರ್ತಿದಾಯಕ ಸಂಗೀತ, ಭವ್ಯವಾದ ಸೆಟ್‌ಗಳು ಮತ್ತು ಮನಃಪೂರ್ವಕ ಅಭಿನಯದಿಂದ, ʼʼಕಣ್ಣಪ್ಪʼʼ ಒಂದು ಆಧ್ಯಾತ್ಮಿಕ ಮತ್ತು ಸಿನಿಮೀಯ ಪ್ರಯಾಣವನ್ನು ನೀಡುತ್ತದೆ.