ಯುಎಸ್‌ನ “ನಾವಿಕ” ಈವೆಂಟ್ನಲ್ಲಿ ರಕ್ಷಿತ್ ಶೆಟ್ಟಿ ಮಾತು: ತಮ್ಮ ಮುಂದಿನ ಸಿನಿಮಾದ ಬಗ್ಗೆ ಈ ರೀತಿಯಾಗಿ ಹೇಳಿದರು: ಅಚ್ಚರಿ ಮಾಹಿತಿ ಹೀಗಿದೆ
ಅಮೆರಿಕಾ: ರಕ್ಷಿತ್ ಶೆಟ್ಟಿ ಕರ್ನಾಟಕದ ಕನ್ನಡ ಚಿತ್ರರಂಗದ ಪ್ರಮುಖ ನಟ, ನಿರ್ದೇಶಕ, ಚಿತ್ರಕಥೆಗಾರ, ಮತ್ತು ನಿರ್ಮಾಪಕರಾಗಿದ್ದಾರೆ. ತಮ್ಮ ಗುಣಮಟ್ಟದ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ತಾಜಾತನವನ್ನು ನೀಡಿದ್ದಾರೆ. ಇವರ ಚಿತ್ರಗಳು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿವೆ.
ರಕ್ಷಿತ್ ಶೆಟ್ಟಿಯವರ ಅಭಿನಯದ ಹಲವು ಚಿತ್ರಗಳು ಚಿತ್ರರಸಿಕರ ಮನಸ್ಸನ್ನು ಸೂರೆಗೊಳಿಸಿದೆ.
ಸಿಂಪಲ್ ಆಗಿ ಒಂಧ್ ಲವ್ ಸ್ಟೋರಿ (2013), ಉಳಿದವರು ಕಂಡಂತೆ (2014), ಕಿರಿಕ್ ಪಾರ್ಟಿ (2016), 777 ಚಾರ್ಲಿ (2022), ಸಪ್ತ ಸಾಗರದಾಚೆ ಎಲ್ಲೋ, ಹೀಗೆ ಹಲವು ಚಿತ್ರಗಳು ತನ್ನದೇ ಆದ ಶೈಲಿಯಲ್ಲಿ ಫ್ಯಾನ್ ಬೇಸ್ ಅನ್ನು ಹೊಂದಿದೆ. ಆದರೆ ಅವರ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ತಡವಾಗಿ ಬರುತ್ತಿರುವುದು ಅಭಿಮಾನಿಗಳಿಗೆ ಕೊಂಚ ನಿರಾಸೆಯನ್ನು ಉಂಟುಮಾಡಿದೆ.
ಅವರು ಇತ್ತೀಚೆಗೆ ಅಮೆರಿಕಾದ ನಾವಿಕ ಈವೆಂಟ್‌ನಲ್ಲಿ ಭಾಗವಹಿಸಿದ್ದರು, ಅಲ್ಲಿ ತಮ್ಮ ಸಿನಿ ಕೆರಿಯರ್‌ನ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.Levi's Men's Slim Fit Mid Rise 511 Mid-Rise Jeans
ರಕ್ಷಿತ್ ಶೆಟ್ಟಿ ಯುಎಸ್‌ನ ನಾವಿಕ ಈವೆಂಟ್ನಲ್ಲಿ:
ರಕ್ಷಿತ್ ಶೆಟ್ಟಿ ಅವರ ಹೇಳಿಕೆ:
"ನನ್ನ ಮುಂದಿನ ಚಿತ್ರ ಎಲ್ಲರನ್ನೂ ಚಿತ್ರಮಂದಿರಗಳಿಗೆ ಮರಳುವಂತೆ ಮಾಡುತ್ತದೆ.. ಒಳ್ಳೆಯ ಕೆಲಸಕ್ಕೆ ಕೆಲವೊಮ್ಮೆ ಸಮಯ ಬೇಕು. ಮತ್ತು ನಾವೆಲ್ಲರೂ ಕನ್ನಡದ ಮೇಲಿನ ಪ್ರೀತಿಯನ್ನು ಬೆಳೆಸಿಕೊಳ್ಳೋಣ ಮತ್ತು ಅದು ಬೆಳೆಯುತ್ತಿರಲಿ," ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.ಇದನ್ನು ಓದಿ: ಮಾರುತಿ ಸುಜುಕಿ ವಿಕ್ಟೋರಿಯಸ್ ಲಾಂಚ್: ಸೂಪರ್ ಲುಕ್‌ನ SUVಯ ಪ್ರಮುಖ ಅಂಶಗಳು ಹೀಗಿವೆ!
ಹೀಗಾಗಿ ಈ ಮಾಹಿತಿಯಿಂದ ಕನ್ನಡ ಚಿತ್ರ ರಸಿಕರಿಗೆ ಕೊಂಚ ಜೋಷ್ ಹೆಚ್ಚಾಗಿದ್ದು, ಅವರ ಸಿನಿಮಾಗಾಗಿ ಅಭಿಮಾನಿಗಳು ಇನ್ನು ಕೆಲ ಸಮಯ ಕಾಯಬೇಕಿದೆ.