ನಾಡಹಬ್ಬವಾದ ಐತಿಹಾಸಿಕ ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಕರ್ನಾಟಕ ಸರ್ಕಾರ ಆಹ್ವಾನಿಸಿದೆ. ಈ ಬೆನ್ನಲ್ಲೇ ಪರ ವಿರೋಧದ ಚರ್ಚೆ ಎದ್ದಿದ್ದು ಸಾಕಷ್ಟು ಕನ್ನಡಪರ ಹೋರಾಟಗಾರರು ಹಾಗೂ ವಿಪಕ್ಷವಾದ ಬಿಜೆಪಿ ನಾಯಕರು ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಬುಕರ್ ಪ್ರಶಸ್ತಿ ಗೆದ್ದ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದೀರಿ. ಅವರ ಜೊತೆಯೇ ಮತ್ತೊಬ್ಬ ಮಹಿಳೆ ದೀಪಾ ಬಸ್ತಿ ಅವರನ್ನು ಆಹ್ವಾನಿಸಬೇಕೆಂದು ಅನಿಸಲಿಲ್ಲವೇ? ಎಂದು ಕಾಂಗ್ರೆಸ್ಗೆ ಮತ್ತು ಮುಖ್ಯಮಂತ್ರಿಗಳಿಗೆ ಪ್ರಶ್ನೆ ಮಾಡಿದ್ದಾರೆ.Vogaan Men's Polo Shirt and Shorts Set | Summer Fashion Short Sleeve Solid Zipper 2 Pieces Outfits for Men
ಬಾನು ಮುಷ್ತಾಕ್ ಅವರ ಪುಸ್ತಕವನ್ನು ಇಂಗ್ಲಿಷ್ ಗೆ ಅನುವಾದ ಮಾಡಿದ ದೀಪಾ ಬಸ್ತಿ ಮೂಲತಃ ಕನ್ನಡದವರೆ, ಮಡಿಕೇರಿ ಜಿಲ್ಲೆಯವರು ಹೀಗಾಗಿ ಅವರು ನೆನಪಾಗಲಿಲ್ಲವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ
ಹಲವಾರು ಬಿಜೆಪಿ ನಾಯಕರು ಮಾತನಾಡಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಒಂದು ರೀತಿಯ ಓಲೈಕೆ ರಾಜಕಾರಣವನ್ನು ಮಾಡುತ್ತಿದೆ ಹೀಗಾಗಿ ಸರ್ಕಾರ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದೆ ಎಂದಿದ್ದಾರೆ. ಆದರೆ ದಸರಾ ಹಬ್ಬದ ಉದ್ಘಾಟನೆಗೆ ಇನ್ನು ಹಲವು ದಿನ ಬಾಕಿ ಇದ್ದು ಸರ್ಕಾರ ತನ್ನ ನಿರ್ಧಾರವನ್ನು ಬದಲಾಯಿಸಿಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಿದೆ.ಇದನ್ನು ಓದಿ: "ಎಂಎಸ್‌ಎಂಇ ಭಾರತದ ಜಿಡಿಪಿಗೆ 31% ಕೊಡುಗೆ ನೀಡುತ್ತದೆ": ಜಿಎಸ್‌ಟಿ ಸುಧಾರಣೆಗಳ ಕುರಿತು ಸಚಿವ ಜಿತನ್ ರಾಮ್ ಮಾಂಝಿ
ಏಕೆಂದರೆ, ದಸರಾ ಹಬ್ಬ ಹಿಂದುಗಳ ಧಾರ್ಮಿಕ ಹಬ್ಬ, ವರ್ಷಕ್ಕೆ ಒಂದು ಬಾರಿ ನಡೆಯುವ ಈ ಹಬ್ಬಕ್ಕೆ ಹಿಂದು ಮಹಿಳಾ ಸಾಧಕಿಯರನ್ನು ಆಹ್ವಾನಿಸಿ ಎಂದು ಪಕ್ಷಗಳಾದ ಬಿಜೆಪಿ ಮತ್ತು ಇತರರು ಪಟ್ಟು ಹಿಡಿದಿದ್ದಾರೆ.