ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಮೊಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದರು. ಈ ವೇಳೆ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜೈ ಹಿಂದ್, ಜೈ ಕರ್ನಾಟಕ, ಜೈ ಹಿಂದೂ ಮುಸಲ್ಮಾನ್ ಎಂದು ಘೋಷಣೆ ಕೂಗಿದ್ದಾರೆ. ತಮ್ಮ ಭಾಷಣದ ಕೊನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಮಾತನ್ನು ಹೇಳಿದ್ದಾರೆ.
ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಕೈ ಹಿಡಿದು ವೇದಿಕೆಗೆ ಕರೆದುಕೊಂಡು ಬಂದರು. ಈ ವೇಳೆ ಬಾಲಕನೊಬ್ಬ ಸಿಎಂ ಸಿದ್ದರಾಮಯ್ಯ ಜೊತೆ ಸೆಲ್ಫಿ ಕ್ಲಿಕ್ ಮಾಡಿಕೊಂಡು ಥ್ಯಾಂಕ್ಸ್ ಕೊಟ್ಟು ಖುಷಿ ಪಟ್ಟನು. ಸಮಾರಂಭದಲ್ಲಿ ಮುಸ್ಲಿಂ ಮುಖಂಡರು ಸಿಎಂ ಸಿದ್ದರಾಮಯ್ಯಗೆ ಶಾಲು ಹೊದಿಸಿ, ಟೋಪಿ ಹಾಕಿ ಸನ್ಮಾನ ಮಾಡಿದರು. ಮುಖ್ಯಮಂತ್ರಿಯವರು ಸಹ ಸಂತಸ ವ್ಯಕ್ತ ಪಡಿಸಿದರು.TRASE Block Heels Sandals For Women, Dusky Stylish & Comfortable Footwear
ಆದರೆ ಮುಖ್ಯಮಂತ್ರಿಯವರ ಈ ಘೋಷಣೆಯಿಂದ ಹಲವಾರು ಹಿಂದು ಮುಖಂಡರು ಟೀಕೆ ಮಾಡಿದ್ದು, ಮುಖ್ಯಮಂತ್ರಿಯವರು ಇಲ್ಲಿಯವರೆಗೂ ಈ ರೀತಿಯ ಘೋಷಣೆಯನ್ನು ಮಾಡಿದ್ದಿಲ್ಲ ಆದರೆ ಈ ಬಾರಿ ಇಂತಹ ಘೋಷಣೆ ಮಾಡಿರುವುದು ಆಶ್ಚರ್ಯ ವುಂಟುಮಾಡಿದೆ ಎಂದರು.
ಇನ್ನು ಮುಸ್ಲಿಮ್ ಟೋಪಿ ಹಾಕಿಸಿಕೊಳ್ಳುವ ಬಗ್ಗೆ ಮಾತನಾಡಿದ ಕೆಲವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆಯು ಹಲವಾರು ಬಾರಿ ಇದೆ ರೀತಿ ಟೋಪಿ ಹಾಕಿಸಿಕೊಂಡಿದ್ದಾರೆ, ಅದು ಸಾಲದೆಂಬಂತೆ ಅವರಿಗಾಗಿಯೆ ಹಲವಾರು ಯೋಜನೆಯನ್ನು ಜಾರಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.