ಧರ್ಮಸ್ಥಳ ಷಡ್ಯಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೆ ವಿಚಾರಗಳು ಬೆಳಕಿಗೆ ಬರುತ್ತಿರುವುದು ಸಹಜವಾಗಿ ಭಕ್ತರಿಗೆ ಸಂತೋಷ ತಂದಿದೆ. ಆದರೆ ಧರ್ಮ ಕ್ಷೇತ್ರವನ್ನು ಮುಗಿಸಲು ಬೇರೆ ರಾಜ್ಯಗಳ ಬಲಿಷ್ಠ ವ್ಯಕ್ತಿಗಳ ಸಂಪರ್ಕ ಮಾಡಿರುವುದು ಸಹ ಮುನ್ನೆಲೆಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬುರುಡೆ ಚಿನ್ನಯ್ಯ, ಜಯಂತ್ ಮತ್ತು ಮಟ್ಟಣ್ಣನವರ್ ಕೇರಳದ ರಾಜಕಾರಣಿ ಮತ್ತು ಸಂಸದರಾದ P ಸಂತೋಷ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ತಾವು ತಂದಿದ್ದ ಬುರುಡೆಯನ್ನು ಈ ಗ್ಯಾಂಗ್ ಕೇರಳದ ಸಂಸದ ಸಂತೋಷ್ ಕುಮಾರ್ ಅವರಿಗೆ ತೋರಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿದ ಕೇರಳ ಸಂಸದರು, ಒಂದು ಪಕ್ಷ ಎಸ್ಐಟಿ ತನಿಖೆ ನಡೆಸಿದಲ್ಲಿ ಉತ್ತರ ನೀಡಬೇಕಾದ ಪರಿಸ್ಥಿತಿ ಬರುವುದು ನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಕಾಂಗ್ರೆಸ್ ನ ಮತ್ತೊಬ್ಬ ಸಂಸದರಾದ ಶಶಿಕಾಂತ್ ಸೇಂತಿಲ್ ಅವರ ಸಹಾಯವು ಇತ್ತು ಎಂದು ಹೇಳಲಾಗಿತ್ತು. ಆದರೆ ಸಾಕ್ಷ್ಯಾಧಾರಗಳು ಸರಿಯಾಗಿ ಸಿಗದ ಕಾರಣ ಆ ಬಗ್ಗೆ ಖಚಿತ ಉತ್ತರಗಳಿಲ್ಲ.
ಆದರೆ ಧರ್ಮಸ್ಥಳವನ್ನು ವಿವಾದದ ಕೇಂದ್ರವನ್ನಾಗಿಸಬೇಕೆಂದು ಹಲವಾರು ತಂಡಗಳು ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದು ಆದರೆ ಆ ಪ್ರಯತ್ನ ಫಲ ನೀಡುತ್ತಿಲ್ಲ ಎಂಬುದು ಅವರಿಗೆ ದೊಡ್ಡ ಚಿಂತೆಯಾಗಿದೆ. ಆದರೆ ಧರ್ಮಸ್ಥಳ ಕೇಸ್ನಲ್ಲಿ ಕೇರಳದ ಕಮ್ಯುನಿಸ್ಟ್ ನಾಯಕರ ನಂಟು ಹೆಚ್ಚು ಅನುಮಾನಕ್ಕೆ ಈಡಾಗಿದೆ ಹೀಗಾಗಿ ಕರ್ನಾಟಕ ಸರ್ಕಾರವು ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.ಸೆಪ್ಟೆಂಬರ್ 7, 2025 ರಲ್ಲಿ ಈ ವರ್ಷದ ಕಡೆಯ ಚಂದ್ರ ಗ್ರಹಣ("ಬ್ಲಡ್ ಮೂನ್"): ವೀಕ್ಷಣೆ ಹೇಗೆ? ಗ್ರಹಗತಿಗಳ ಮೇಲೆ ಪರಿಣಾಮ ಏನು? ಇಲ್ಲಿದೆ ಮಾಹಿತಿ
ಆದರೆ ಇವೆಲ್ಲಾ ಮಾಹಿತಿಗಳು ಬರೀ ಉಹಾಪೋಹವೆಂದು ಕೆಲವರು ಹೇಳಿಕೆ ನೀಡಿದ್ದು, ಅಧಿಕೃತವಾಗಿ ಸರ್ಕಾರ ಮಾಹಿತಿ ನೀಡಬೇಕಿದೆ. ಈಗಾಗಲೆ ಬುರುಡೆ ಚಿನ್ನಯ್ಯನನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ SIT, ಗಿರೀಶ್ ಮಟ್ಟಣ್ಣನವರ್ ಅವರನ್ನು ಸಹ ವಿಚಾರಣೆ ಮಾಡಿದೆ ಆದರೆ ಇನ್ನು ಯಾವುದೇ ಮಾಹಿತಿಯನ್ನು SIT ಮಾಧ್ಯಮದವರೊಂದಿಗೆ ಹಂಚಿಕೊಂಡಿಲ್ಲ..
ಪಿ. ಸಂತೋಷ್ ಕುಮಾರ್ ಅವರು 1971ರಲ್ಲಿ ಕೇರಳದ ಇರಿಕ್ಕೂರ್ ತಾಲ್ಲೂಕಿನ ಪದಿಯೂರಿನಲ್ಲಿ ಕೆ.ಪಿ. ಪ್ರಭಾಕರನ್ ಮತ್ತು ಪಿ.ವಿ. ರಾಧಾ ದಂಪತಿಗಳಿಗೆ ಜನಿಸಿದರು. ಅವರು ಪ್ರಸ್ತುತ ಭಾರತೀಯ ಕಮ್ಯೂನಿಸ್ಟ್ ಪಕ್ಷದ (CPI) ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.