Skip to main content
ವಿಡಿಯೋ
crime

ಆದಾಯ ಮೀರಿದ ಆಸ್ತಿ: KAS ಅಧಿಕಾರಿ ಸುಧಾ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

By Gireesh Vasishta
ಆದಾಯ ಮೀರಿದ ಆಸ್ತಿ: KAS ಅಧಿಕಾರಿ ಸುಧಾ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

ಹೀಗಾಗಿ, ಆರೋಪ ಪಟ್ಟಿಯಲ್ಲಿನ ಅಂಶಗಳನ್ನು ಉಲ್ಲೇಖಿಸುವುದರಿಂದ ಈ ನ್ಯಾಯಾಲಯವು ಅಂತರ ಕಾಯ್ದುಕೊಂಡಿದೆ. ಆದರೆ, ನಿಸ್ಸಂಶಯವಾಗಿ ಅಪರಾಧ ಕೃತ್ಯಗಳು ಗಂಭೀರವಾಗಿದ್ದು, ಎಲ್ಲಾ ಅಪರಾಧಗಳು ನಿರ್ದಿಷ್ಟವಾಗಿ ಸುಧಾ ಅವರು ಭ್ರಷ್ಟಾಚಾರದಲ್ಲಿ ಆಳವಾಗಿ ಮುಳುಗಿರುವುದರತ್ತ ಬೆರಳು ಮಾಡುತ್ತವೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಕೆಎಎಸ್ ಅಧಿಕಾರಿ ಬಿ. ಸುಧಾ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಮೇಲ್ನೋಟಕ್ಕೆ ಗೋಚರಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ಅಭಿಪ್ರಾಯಪಟ್ಟಿದ್ದು, ಅವರ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ. ಅಲ್ಲದೇ, ಹೈಕೋರ್ಟ್ಅನುಮತಿ ಇಲ್ಲದೇ ಸಕ್ಷಮ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಬಾರದು ಎಂದು ಮಾಡಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ತೆರವುಗೊಳಿಸಿದೆ.

ಸುಧಾ ಮತ್ತು ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಆಕೆಯ ಪತಿ ಸ್ಟ್ರೋಯ್ನಿ ಜೋಸೆಫ್ಪ್ಯಾಸ್ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

ಆರೋಪ ಪಟ್ಟಿಯಲ್ಲಿನ ಅಂಶಗಳನ್ನು ಆದೇಶದಲ್ಲಿ ಉಲ್ಲೇಖಿಸಿದರೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಅರ್ಜಿದಾರರಿಗೆ ಸಮರ್ಥನೆ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ, ಆರೋಪ ಪಟ್ಟಿಯಲ್ಲಿನ ಅಂಶಗಳನ್ನು ಉಲ್ಲೇಖಿಸುವುದರಿಂದ ನ್ಯಾಯಾಲಯವು ಅಂತರ ಕಾಯ್ದುಕೊಂಡಿದೆ. ಆದರೆ, ನಿಸ್ಸಂಶಯವಾಗಿ ಅಪರಾಧ ಕೃತ್ಯಗಳು ಗಂಭೀರವಾಗಿದ್ದು, ಎಲ್ಲಾ ಅಪರಾಧಗಳು ನಿರ್ದಿಷ್ಟವಾಗಿ ಸುಧಾ ಅವರು ಭ್ರಷ್ಟಾಚಾರದಲ್ಲಿ ಆಳವಾಗಿ ಮುಳುಗಿರುವುದರತ್ತ ಬೆರಳು ಮಾಡುತ್ತವೆಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಆರೋಪಗಳು: ಭೂಸ್ವಾಧೀನ ಫೈಲ್ಗಳ ಪ್ರಕ್ರಿಯೆಯಲ್ಲಿ ಸುಧಾ, ಭೂಮಾಲೀಕರ ಸಂಪರ್ಕ ವಿವರಗಳನ್ನು ತನ್ನ ಏಜೆಂಟ್ಗಳಿಗೆ ನೀಡಿ, ಭೂಸ್ವಾಧೀನದ ಪರಿಹಾರಕ್ಕಾಗಿ ಲಂಚ ಸಂಗ್ರಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.YUISI ​​Sun Hat​​ for Men Women, Breathable Summer Hat for Travel, Hiking, Gardening, Sun Hats for Men​​ & Round Sun Cap for Hiking, Hats for Women​​ Indoor Outdoor Activities

ತನಿಖೆಯ ಹಿನ್ನೆಲೆ: 2020ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ACB) ಸುಧಾ ಅವರ ಕೊಡಿಗೆಹಳ್ಳಿಯ ಮನೆ ಸೇರಿದಂತೆ ಬೆಂಗಳೂರು, ಮೈಸೂರು, ಮತ್ತು ಉಡುಪಿಯ ಆರು ಸ್ಥಳಗಳಲ್ಲಿ ದಾಳಿ ನಡೆಸಿತು. 200ಕ್ಕೂ ಅಧಿಕ ಆಸ್ತಿ ದಾಖಲೆಗಳು, 50 ಬ್ಯಾಂಕ್ ಖಾತೆಗಳು, ₹36.89 ಲಕ್ಷ ನಗದು, 3.7 ಕೆಜಿ ಚಿನ್ನ, 10.5 ಕೆಜಿ ಬೆಳ್ಳಿ, ಮತ್ತು ಐಷಾರಾಮಿ ವಾಹನಗಳನ್ನು ವಶಪಡಿಸಿಕೊಂಡಿತು. ಆಸ್ತಿಗಳು ಆಕೆಯ ಆದಾಯಕ್ಕಿಂತ ಅನುಪಾತವಿಲ್ಲದಿರುವುದರಿಂದ ಆರೋಪಗಳು ದಾಖಲಾದವು.ಬ್ರಿಟನ್‌ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್‌ನಿಂದ (CPS) ತಿಹಾರ್ ಜೈಲಿನ ತಪಾಸಣೆ: ವಿಜಯ್ ಮಲ್ಯ, ನೀರವ್ ಮೋದಿ ಅವರ ಗಡಿಪಾರು ಮಾಡುವಿಕೆಗೆ ಜೈಲಿನ ಪರಿಶೀಲನಯೇ?

ಬೆಂಗಳೂರಿನ ಕೆಎಎಸ್ ಅಧಿಕಾರಿ ಬಿ ಸುಧಾ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಅವರು ಬಿಡಿಎಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಪ್ರಸ್ತುತ ಅವರು ಶಾಂತಿನಗರದ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಆಡಳಿತ ಅಧಿಕಾರಿಯಾಗಿದ್ದಾರೆ. ಅವರ ಆಸ್ತಿ ಬರೋಬ್ಬರಿ 50 ಕೋಟಿಗೂ ಅಧಿಕ ಎಂದು ತಿಳಿದುಬಂದಿದೆ.