ಮೈಸೂರು,ಸೆಪ್ಟಂಬರ್,6,2025: ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನ ಆಯ್ಕೆ ಮಾಡಿರುವ ಸಲುವಾಗಿ ಇದನ್ನು ವಿರೋಧಿಸಿ ಹಿಂದೂ ಜಾಗರಣಾ ವೇದಿಕೆಯಿಂದ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದಕ್ಕೆ ಪ್ರತಿಯಾಗಿ ದಲಿತ ಮಹಾಸಭಾವು ಚಾಮುಂಡಿ ನಡಿಗೆ ಆಯೋಜಿಸಲಾಗಿದೆ. ದಿನಾಂಕ 09-09-2025 ರಂದು ಚಾಮುಂಡಿಬೆಟ್ಟಕ್ಕೆ ಚಾಮುಂಡಿತಾಯಿಯನ್ನು ಮತ್ತು ದಸರಾ ಉದ್ಘಾಟನೆಯನ್ನು ಕುರುಬರಹಳ್ಳಿ ವೃತ್ತದಿಂದ ರಾಜಕೀಯಕ್ಕೆ ಹಾಗೂ ಕೋಮುಗಲಭೆ ಸೃಷ್ಟಿಸಲು ಬಳಸಿಕೊಳ್ಳೂತ್ತಿರುವವರ ವಿರುದ್ಧ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮವನ್ನು ಮಾಡಲು ಅನುಮತಿ ನೀಡುವಂತೆ ದಲಿತ ಮಹಾಸಭಾ ಅಧ್ಯಕ್ಷ ಎಸ್.ರಾಜೇಶ್ ಅವರು ಪೊಲೀಸ್ ಆಯಕ್ತರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಈ ಹಿಂದೆ ನಿಸಾರ್ ಅಹಮದ್ ಹಾಗೂ ಜೈನ ಸಮುದಾಯಕ್ಕೆ ಸೇರಿದ್ದ ಹಂಪಾ ನಾಗರಾಜರವರನ್ನು ಕರೆದು ದಸರಾ ಉದ್ಘಾಟಿಸುವ ಸಂದರ್ಭದಲ್ಲಿ ಬಿಜೆಪಿ ಮತ್ತು ಹಿಂದು ಸಂಘಟನೆಯೆಂದು ಹೇಳಿಕೊಳ್ಳುತ್ತಿರುವವರು ಚಕಾರವೆತ್ತಿರಲಿಲ್ಲ. ಆದರೆ ಈ ಬಾರಿ ಬೂಕರ್ ಪ್ರಶಸ್ತಿ ವಿಜೇತರಾಗಿರುವ ಬಾನು ಮುಷ್ತಕ್ ರವರನ್ನು ದಸರಾ ಉದ್ಘಾಟಿಸಲು ಸರ್ಕಾರ ಅಹ್ವಾನ ಮಾಡಿರುವುದನ್ನು ಕೆಲ ಸಂಘಟನೆಗಳು ವಿರೋಧಿಸುವುದರ ಮೂಲಕ ನಗರದಲ್ಲಿ ಗಲಭೆ ಮಾಡಬೇಕೆಂದು ಪ್ರಯತ್ನ ನಡೆಸುತ್ತಿದ್ದಾರೆ.
ಸುಮಾರು 10000 ಜನರು ದಿನಾಂಕ 09-09-2025 ರಂದು ಬೆಳಿಗ್ಗೆ 7.30ಕ್ಕೆ “ಚಾಮುಂಡಿತಾಯಿಯನ್ನು ರಾಜಕೀಯಗೊಳಿಸದಿರಿ ಹಾಗು ಕೋಮುಗಲಭೆ ಸೃಷ್ಟಿಸದಿರಿ” ಎಂಬ ಘೋಷವಾಕ್ಯದಡಿ ಚಾಮುಂಡಿಬೆಟ್ಟ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.