Skip to main content
ವಿಡಿಯೋ
general

ಆಲಮಟ್ಟಿ ಜಲಾಶಯ ತುಂಬಿದ ಸಂತಸ: ರೈತರಿಗೆ ಪರಿಹಾರ ಭರವಸೆ - ಸಿದ್ಧರಾಮಯ್ಯ..!

By Vinutha U
ಆಲಮಟ್ಟಿ ಜಲಾಶಯ ತುಂಬಿದ ಸಂತಸ: ರೈತರಿಗೆ ಪರಿಹಾರ ಭರವಸೆ - ಸಿದ್ಧರಾಮಯ್ಯ..!

ನಿಡಗುಂದಿಯ ಆಲಮಟ್ಟಿಯಲ್ಲಿ ಪೂಜೆ ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಜಲಾಶಯಗಳು ತುಂಬಿರುವುದರಿಂದ ರೈತರು ಖುಷಿಯಾಗಿದ್ದಾರೆ. ರೈತರು ಸಂತೋಷದಿಂದ ಇದ್ದಾರೆ, ಅವರು ಖುಷಿಯಾಗಿದ್ದರೆ ಸರ್ಕಾರಕ್ಕೂ ಖುಷಿಯಾಗುತ್ತದೆ ಎಂದರು.

ವಿಜಯಪುರ (ಸೆ.07): ಆಲಮಟ್ಟಿ ಜಲಾಶಯ ತುಂಬಿದ್ದರಿಂದ ಇಂದು ಕೃಷ್ಣಾ ನದಿಗೆ ಗಂಗಾಪೂಜೆ ಮಾಡಿ ಬಾಗಿನ ಅರ್ಪಿಸಿದ್ದೇವೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಚೆನ್ನಾಗಿ ಮಳೆಯಾಗಿದ್ದರಿಂದ ಆಲಮಟ್ಟಿ, ಕಾವೇರಿ, ಕಬಿನಿ, ಹೇಮಾವತಿ ಸೇರಿದಂತೆ ರಾಜ್ಯದ ಹಲವು ಜಲಾಶಯಗಳು ತುಂಬಿವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಹೇಳಿದರು. ನಿಡಗುಂದಿಯ ಆಲಮಟ್ಟಿಯಲ್ಲಿ ಪೂಜೆ ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಜಲಾಶಯಗಳು ತುಂಬಿರುವುದರಿಂದ ರೈತರು ಖುಷಿಯಾಗಿದ್ದಾರೆ. ರೈತರು ಸಂತೋಷದಿಂದ ಇದ್ದಾರೆ, ಅವರು ಖುಷಿಯಾಗಿದ್ದರೆ ಸರ್ಕಾರಕ್ಕೂ ಖುಷಿಯಾಗುತ್ತದೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಮಿ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದ ಅವರು, ರೈತರು ಮತ್ತು ಹೋರಾಟಗಾರರೊಂದಿಗೆ ಬೆಳಗಾವಿಯಲ್ಲಿ ಸಭೆ ನಡೆಸಿದ್ದೇವೆ. ಎಲ್ಲರೂ ಒಮ್ಮೆಗೇ ಒಪ್ಪಿಗೆಯ ಪರಿಹಾರ ಕೊಡಿ ಎಂದಿದ್ದಾರೆ. ಸರ್ಕಾರವೂ ಒಪ್ಪಿಕೊಂಡಿದೆ. ಮೂರು ದಿನಗಳ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಭೆ ನಡೆಸಿದ್ದಾರೆ. ಮುಂದಿನ ವಾರದಲ್ಲಿ ನಾನು, ಡಿಕೆಶಿ, ಸಚಿವರು, ಶಾಸಕರು ಸೇರಿ ಒಂದು ದರ ನಿಗದಿಪಡಿಸುತ್ತೇವೆ.

ಒಣ ಜಮೀನು, ನೀರಾವರಿ ಜಮೀನು, ನಾಲಾ ಜಮೀನಿಗೆ ಎಷ್ಟು ಪರಿಹಾರ ಕೊಡಬೇಕು ಎಂದು ತೀರ್ಮಾನಿಸುತ್ತೇವೆ. ರೈತರು ಇದನ್ನು ಒಪ್ಪಿಕೊಳ್ಳಬೇಕು. ಕೋರ್ಟ್‌ಗೆ ಹೋದರೆ ಕೆಲಸಕ್ಕೆ ತಡೆಯಾಗುತ್ತದೆ, ಯಾವ ಪ್ರಯೋಜನವೂ ಆಗುವುದಿಲ್ಲ ಎಂದಿದ್ದಾರೆ. ಆಲಮಟ್ಟಿ ಡ್ಯಾಂನ ಎತ್ತರವನ್ನು 519.60 ಮೀಟರ್‌ನಿಂದ 524.26 ಮೀಟರ್‌ಗೆ ಏರಿಸಿದರೆ 130 ಟಿಎಂಸಿ ನೀರನ್ನು ಬಳಸಬಹುದು. ಇದರಿಂದ 6.6 ಲಕ್ಷ ಹೆಕ್ಟೇರ್‌ಗೆ 173 ಟಿಎಂಸಿ ನೀರು ಒದಗಿಸಬಹುದು. ಆದರೆ ಕೇಂದ್ರದಿಂದ ಗೆಜೆಟ್ ನೋಟಿಫಿಕೇಷನ್ ಆಗಿಲ್ಲ, ಅದು ಕೂಡ ಆದರೆ ಒಳ್ಳೆಯದು.

Womanista Women's Satin Saree with Embellished Cape (WM1946_Pink)

ನಾನು ಮೂರು ಬಾರಿ, ಡಿಕೆಶಿ ಐದು ಬಾರಿ ಕೇಂದ್ರ ಸಚಿವರನ್ನು ಭೇಟಿಯಾಗಿದ್ದೇವೆ. ರೈತರ ಬದುಕು ಚೆನ್ನಾಗಿರಲಿ ಎಂಬುದು ನಮ್ಮ ಗುರಿ. ಸರ್ಕಾರವೂ ಇದಕ್ಕೆ ಪ್ರಯತ್ನಿಸುತ್ತಿದೆ. ಘಟಪ್ರಭಾ, ಮಲಪ್ರಭಾ ನದಿಗಳಲ್ಲಿ ಹೂಳು ತುಂಬಿದ್ದರಿಂದ ನೀರಿನ ಪ್ರವಾಹವಾಗುತ್ತಿದೆ. ರೈತರಿಗಾಗಿ ನಾವು ಕೆಲಸ ಮಾಡುತ್ತೇವೆ. ಯುಕೆಪಿ ಯೋಜನೆಯ ವಿಳಂಬದ ಬಗ್ಗೆ 2010ರಲ್ಲಿ ಅವಾರ್ಡ್ ಆಗಿತ್ತು. ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಿದ್ದೇವೆ. ಅವರು ನೋಟಿಫಿಕೇಷನ್ ಮಾಡಿದರೆ ಕಾಮಗಾರಿ ಶುರುವಾಗುತ್ತದೆ ಎಂದಿದ್ದಾರೆ.