ಬೆಂಗಳೂರು (ಸೆ.07): ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಗ್ರಂಥಾಲಯದ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ತಿಂಗಳಿಗೆ ಸುಮಾರು ₹5,000 ಕೂಲಿ ಸಿಗಲಿದೆ. ಮನೆಕೆಲಸದಾಳಿನ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ಗೆ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಜೈಲಿನಲ್ಲಿ ಶಿಕ್ಷಿತ ಕೈದಿಗಳು ಕಡ್ಡಾಯವಾಗಿ ಕೆಲಸವನ್ನು ಮಾಡಬೇಕು. ಈ ಉದ್ದೇಶಕ್ಕಾಗಿ ಕೈದಿಗಳು ತಾವು ಬಯಸುವ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಕಾರಾಗೃಹದ ಅಧಿಕಾರಿಗಳು ಆ ಕೆಲಸಗಳನ್ನು ಹಂಚಿಕೆ ಮಾಡುತ್ತಾರೆ.
ಅದರಂತೆ, ಪ್ರಜ್ವಲ್‌ಗೆ ಗ್ರಂಥಾಲಯ ಸಹಾಯಕನ ಕೆಲಸವನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿನಗೂಲಿಯ ಲೆಕ್ಕದಲ್ಲಿ, ಕೆಲಸ ಮಾಡಿದ ದಿನಕ್ಕೆ ಇವರಿಗೆ ₹525 ಕೂಲಿ ಸಿಗಲಿದೆ. ಸಾಮಾನ್ಯವಾಗಿ ವಾರಕ್ಕೆ ಮೂರು ದಿನಗಳಂತೆ, ತಿಂಗಳಿಗೆ ಸುಮಾರು 10-12 ದಿನ ಕೆಲಸ ಮಾಡಬೇಕಾಗುತ್ತದೆ. ಈ ಲೆಕ್ಕದಂತೆ, ಪ್ರಜ್ವಲ್ ರೇವಣ್ಣ ಅವರಿಗೆ ಆಗಸ್ಟ್ 2 ರಿಂದ ತಿಂಗಳಿಗೆ ಸುಮಾರು ₹5,250 ಕೂಲಿ ಸಿಗಬಹುದು ಎಂದು ಅಂದಾಜಿಸಲಾಗಿದೆ. ಈ ಹಣವು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ. ಈ ದುಡಿಮೆಯ ಹಣವನ್ನು ಜೈಲಿನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬಳಸಬಹುದು ಅಥವಾ ಕುಟುಂಬದವರಿಗೆ ಕಳುಹಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Womanista Women's Satin Saree with Embellished Cape (WM1946_Pink)
ಮನೆಕೆಲಸದಾಳಿನ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಬಳಿಕ, ಕೈದಿಗಳ ಸಮವಸ್ತ್ರವನ್ನು ನೀಡಿದ ಅಧಿಕಾರಿಗಳು, ಗ್ರಂಥಾಲಯ, ಬೇಕರಿ, ಕಚೇರಿ ಸಹಾಯಕ, ಸಿದ್ಧ ಉಡುಪು ತಯಾರಿಕೆ ಘಟಕ, ಕೃಷಿ, ಹಾಗೂ ಹೂದೋಟ ಸೇರಿದಂತೆ ವಿವಿಧ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಪ್ರಜ್ವಲ್‌ಗೆ ಸೂಚಿಸಿದ್ದರು. ಈ ಪಟ್ಟಿಯಿಂದ ಗ್ರಂಥಾಲಯ ಸಹಾಯಕನ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಒಂದು ತಿಂಗಳ ಬಳಿಕ ಅಧಿಕಾರಿಗಳು ಈ ಕೆಲಸವನ್ನು ಇವರಿಗೆ ಹಂಚಿಕೆ ಮಾಡಿದ್ದಾರೆ.