Skip to main content
ವಿಡಿಯೋ
general

ಸಮಾಜದಲ್ಲಿ ಏನೋ ದೋಷವಿದೆ; ನಮಗೆ ಪರಸ್ಪರರ ಮೂಲಭೂತ ಹಕ್ಕುಗಳನ್ನು ಗೌರವಿಸಲು ಸಾಧ್ಯವಾಗುತ್ತಿಲ್ಲ: ನ್ಯಾ. ಓಕಾ ವಿಷಾದ

By Vinutha U
ಸಮಾಜದಲ್ಲಿ ಏನೋ ದೋಷವಿದೆ; ನಮಗೆ ಪರಸ್ಪರರ ಮೂಲಭೂತ ಹಕ್ಕುಗಳನ್ನು ಗೌರವಿಸಲು ಸಾಧ್ಯವಾಗುತ್ತಿಲ್ಲ: ನ್ಯಾ. ಓಕಾ ವಿಷಾದ

ವಾಕ್‌ ಸ್ವಾತಂತ್ರ್ಯದ ಹಕ್ಕುಗಳ ಕುರಿತು ಮಾತನಾಡಿದ ಅವರು ಪೊಲೀಸರು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಈ ಬಗ್ಗೆ ಅರಿವು ಇಲ್ಲ. ಇಂತಹ ಹಕ್ಕುಗಳ ಬಲವರ್ಧನೆಗಾಗಿ ಅವರಿಗೆ ನಿರಂತರ ಮತ್ತು ಗಂಭೀರ ತರಬೇತಿ ನೀಡಬೇಕಿದೆ ಎಂದು ಹೇಳಿದ್ದಾರೆ.

ಸಂವಿಧಾನದ 19(1) () ಅಡಿ ದೊರೆತಿರುವ ವಾಕ್ಸ್ವಾತಂತ್ರ್ಯ ಮಹತ್ವದ ಮೌಲಿಕ ಹಕ್ಕು ಎಂದು ತಿಳಿಸಿರುವ ಸುಪ್ರೀಂ ಕೋರ್ಟ್ನಿವೃತ್ತ ನ್ಯಾಯಮೂರ್ತಿ ಎಸ್‌. ಓಕಾ ಅವರು ಸಂವಿಧಾನದ 19 (2) ಅಡಿಯಲ್ಲಿ ಹೇಳಿರುವ ನಿರ್ಬಂಧಗಳನ್ನು ಹೊರತುಪಡಿಸಿ ಇನ್ನಾವುದೇ ನಿರ್ಬಂಧವನ್ನು ಅನ್ವಯಿಸಬಾರದು, ಮೂಲಕ 19(1)()  ವಿಧಿಯನ್ನು ಎತ್ತಿಹಿಡಿಯಬೇಕು ಎಂದಿದ್ದಾರೆ.

ಬಾರ್ ಅಂಡ್ ಬೆಂಚ್' ಜಾಲತಾಣದ ಇಂಗ್ಲಿಷ್ ಆವೃತ್ತಿಗೆ ಅವರು ನೀಡಿರುವ ಸಂದರ್ಶನದ ಎರಡನೇ ಭಾಗದ ಪ್ರಮುಖ ಅಂಶಗಳನ್ನು ಸಂಗ್ರಹ ರೂಪದಲ್ಲಿ ಇಲ್ಲಿ ನೀಡಲಾಗಿದ್ದು ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಕಾಯ್ದುಕೊಳ್ಳಬೇಕಾದ ಆರೋಗ್ಯಕರ ಅಂತರ, ಪೊಲೀಸ್ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಇರುವ ತರಬೇತಿಯ ಕೊರತೆ, ಸಮಾಜದ ಕೆಲ ಲೋಪಗಳ ಕುರಿತಂತೆಯೂ ಮಾತನಾಡಿದ್ದಾರೆ.

ಭಾವನೆಗಳಿಗೆ ಧಕ್ಕೆ ಒದಗಿದೆ ಎಂಬಂತಹ ಅಸ್ಪಷ್ಟ ಮತ್ತು ವೈಯಕ್ತಿಕ ಮಾನದಂಡಗಳನ್ನು ಆಧರಿಸಿ ಭಾಷಣಗಳನ್ನು ಅಪರಾಧ ಎಂಬುದಾಗಿ ಪರಿಗಣಿಸಬಾರದು ಎಂದ ಅವರು ಬಗ್ಗೆ ನಿರ್ಧಾರಕ್ಕೆ ಬರಲು ಕಾನೂನು ಪರೀಕ್ಷೆಯನ್ನಷ್ಟೇ ಅನ್ವಯಿಸಬೇಕು ಎಂದಿದ್ದಾರೆ.

ವಾಕ್ಸ್ವಾತಂತ್ರ್ಯಕ್ಕೆ ವಿಧಿಸಲಾಗುತ್ತಿರುವ ನಿರ್ಬಂಧ ಪ್ರಶ್ನಿಸಿ ನಾಗರಿಕರು ಹೂಡುತ್ತಿರುವ ದಾವೆಗಳ ಸಂಖ್ಯೆ ಹೆಚ್ಷಚಾಗುತ್ತಿದ್ದು ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಂಗ ಮಧ್ಯಪ್ರವೇಶಿಸಬೇಕು ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದಾರೆ.

Womanista Women's Satin Saree with Embellished Cape (WM1946_Pink)

ಬೇರೆಯವರಿಗೆ ಮಾತನಾಡುವ ಹಕ್ಕಿದೆ ಹಾಗೂ ಉಳಿದವರು ಹೇಳಿದ್ದನ್ನು ವಿವಾದಿಸುವ ಹಕ್ಕು ಅವರಿಗೆ ಇದೆ ಎಂಬುದನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಜನರಿಗೆ ಅರ್ಥವಾಗುತ್ತಿಲ್ಲ. ಸಮಾಜದಲ್ಲಿ ಏನೋ ದೋಷವಿದೆ; ನಮಗೆ ಪರಸ್ಪರರ ಮೂಲಭೂತ ಹಕ್ಕುಗಳನ್ನು ಗೌರವಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಅವರು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಆರೋಗ್ಯಕರ ಅಂತರ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾದ ಸಂಗತಿಯಾಗಿದೆ. ಎರಡರ ನಡುವಿನ ಅತಿಯಾದ ಸಾಮೀಪ್ಯ ನ್ಯಾಯಾಂಗ ನಿಷ್ಪಕ್ಷಪಾತವಾಗಿರಬೇಕು ಎಂಬ ಸಾಂವಿಧಾನಿಕ ಆದೇಶವನ್ನು ದುರ್ಬಲಗೊಳಿಸುತ್ತದೆ ಎಂದಿದ್ದಾರೆ. ವಾಕ್ಸ್ವಾತಂತ್ರ್ಯದ ಹಕ್ಕುಗಳ ಕುರಿತು ಮಾತನಾಡಿದ ಅವರು ಪೊಲೀಸರು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಬಗ್ಗೆ ಅರಿವು ಇಲ್ಲ. ಇಂತಹ ಹಕ್ಕುಗಳ ಬಲವರ್ಧನೆಗಾಗಿ ಅವರಿಗೆ ನಿರಂತರ ಮತ್ತು ಗಂಭೀರ ತರಬೇತಿ ನೀಡಬೇಕಿದೆ ಎಂದು ಹೇಳಿದ್ದಾರೆ.