ಧರ್ಮಸ್ಥಳದಲ್ಲಿ ಹಲವಾರು ಅಕ್ರಮ ಶವಗಳನ್ನು ಹೂದಿಟ್ಟ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದ್ದು ಈ ಹಿಂದೆ ಸಾಕ್ಷಿಯಾಗಿ ಬಂದಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಬಂದನಕ್ಕೊಳಗಾಗಿ ಹಲವಾರು ಮಾಹಿತಿಗಳನ್ನು ಎಸ್ಐಟಿ ಅಧಿಕಾರಿಗಳಿಗೆ ನೀಡಿದ ಆದರೆ ಅವನ ಬಂಧನದ ನಂತರ ಅಸಲಿ ಆಟ ಶುರುವಾಗಿತ್ತು.
ಆ ಹಿನ್ನೆಲೆಯಲ್ಲಿ 14ನೇ ಗುಂಡಿಯ ಶೋಧದ ಸಂದರ್ಭದಲ್ಲಿ ಜಯಂತ್ ಎನ್ನುವರು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ಒಂದನ್ನು ದಾಖಲಿಸಿದ್ದರು. ಅದರಲ್ಲಿ ಒಂದು ಬಾಲಕಿಯನ್ನು ಹೂಳುವುದನ್ನು ನಾನು ನೋಡಿದ್ದೇನೆ ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ಅದರ ನಿಮಿತ್ತ ದೂರನ್ನು ದಾಖಲಿಸಿ ರುವುದಾಗಿ ಹೇಳಿದ್ದರು.Vogaan Men's T-Shirt and Shorts Set | Top & Shorts Night Suits Set | Night Wear for Men
ತದನಂತರ ಚಿನ್ನಯ್ಯನ ಬಂಧನದ ನಂತರ ಈ ಹಿಂದೆ ಹೋರಾಟಗಾರರ ರೂಪದಲ್ಲಿದ್ದ ಮಹೇಶ್ ತಿಮ್ಮರೋಡಿ, ಸುಜಾತಾ ಭಟ್, ಗಿರೀಶ್ ಮಟ್ಟಣ್ಣನವರ್, ಸಮೀರ್. ಎಂಡಿ ಹೀಗೆ ಹಲವರನ್ನು ಎಸ್ಐಟಿ ವಿಚಾರಣೆಗೆ ಕರೆದಿತ್ತು. ಈಗ ಜಯಂತ್ ಟಿ ಅವರನ್ನು ಸಹ ವಿಚಾರಣೆಗೆ ಕರೆದಿದೆ, ದಕ್ಷಿಣ ಕನ್ನಡ ಜಿಲ್ಲೆಯ SIT ಕಚೇರಿಯಲ್ಲಿ ಗೂರುದಾರ ಜಯಂತ್ ಮುಖಕ್ಕೆ ಮಾಸ್ಕ್ ಹಾಕಿಕೊಂಡು ವಿಚಾರಣೆಗೆ ಹಾಜರಾಗಿದ್ದಾರೆ. ಸದ್ಯ ವಿಚಾರಣ ಹಂತದಲ್ಲಿರುವ ಧರ್ಮಸ್ಥಳ ಪ್ರಕರಣ ಯಾವ ತಿರುವನ್ನು ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ.ಚಂದ್ರಗ್ರಹಣದ ನಂತರ ದರ್ಶನಕ್ಕೆ ದೇವಾಲಯಗಳ ಸಿದ್ದತೆ: ಶುದ್ದತಾ ಕಾರ್ಯ, ಪೂಜೆಯ ನಂತರ ಭಕ್ತರಿಗೆ ದರ್ಶನ ಶುರು
2 ದಿನಗಳ ಹಿಂದೆ ಮೃತ ಸೌಜನ್ಯ ಮಾವ ವಿಠ್ಹಲ ಗೌಡ ಹಲವಾರು ಮಾಹಿತಿಯನ್ನು SITಗೆ ನೀಡಿದ್ದರು ಎನ್ನಲಾಗಿದೆ, ಅದರಲ್ಲಿ ಬುರುಡೆಯನ್ನು ಚಿನ್ನಯ್ಯನಿಗೆ ಅವರೆ ನೀಡಲಾಗಿದೆ ಎಂದು ತಿಳಿದುಬಂದಿತ್ತು, ಮುಖ್ಯವಾಗಿ ಗಮನಿಸುವ ಅಂಶವೆಂದರೆ ಈ ಕೃತ್ಯದಲ್ಲಿ ಬೆಂಗಳೂರಿನಲ್ಲಿ ಈ ಎಲ್ಲಾ ಕೆಲಸಕ್ಕೂ ಪ್ಲಾನ್ ಮಾಡಲಾಗಿತ್ತು ಎನ್ನಲಾಗಿದೆ. ಟ. ಜಯಂತ್ ಮನೆಯಲ್ಲಿ ಗಿರೀಶ್, ಜಯಂತ್, ಚಿನ್ನಯ್ಯ ಎಲ್ಲರು ಇದ್ದರು ಎನ್ನಲಾಗಿದೆ.