ನವರಾತ್ರಿ ಸಮಯದಲ್ಲಿ ದಸರಾ ಗೊಂಬೆಗಳ ಅಲಂಕಾರ ಮನೆಮಾತಾಗಿರುವ ಸಂಪ್ರದಾಯ. ನವದುರ್ಗೆಯ ಆರಾಧನೆಗೆ ವೈಭವವನ್ನು ಹೆಚ್ಚಿಸುವುದೇ ಗೊಂಬೆಗಳ ವಿಶೇಷತೆ. ಮಣ್ಣು, ಮರ ಹಾಗೂ ಹಬ್ಬದ ಥೀಮ್ ಆಧಾರಿತ ಸೆಟ್ ಗೊಂಬೆಗಳ ಮೂಲಕ ಈ ಪಾರಂಪರಿಕ ಸಂಪ್ರದಾಯವು ಇನ್ನಷ್ಟು ಬಣ್ಣ ಬೀರುತ್ತದೆ. ಬೆಂಗಳೂರು ನಗರದ ಜಯನಗರ ಮೊದಲ ಹಂತದಲ್ಲಿರುವ ಎನ್ ಎಲ್ ದಸರಾ ಬೊಂಬೆಗಳ ಮಳಿಗೆ ಈ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿಕೊಂಡಿದೆ. ಕಳೆದ 20 ವರ್ಷಗಳಿಂದ ನಾಗರತ್ನ ದಂಪತಿಗಳು ಇಲ್ಲಿ ವಿವಿಧ ರೀತಿಯ ಗೊಂಬೆಗಳ ಮಾರಾಟ ಮಾಡುತ್ತಿದ್ದಾರೆ.
ಪ್ರಮುಖ ಆಕರ್ಷಣೆಗಳು
ಪಟ್ಟದ ಬೊಂಬೆ: ದಸರಾ ಬೊಂಬೆ ಕೂಡಿಸುವವರು ಮೊದಲಿಗೆ ಇಡಬೇಕಾದ ಪಾರಂಪರಿಕ ಗೊಂಬೆ.
ಮೂರ್ತಿ ದೇವಿಯರ ಅಲಂಕಾರ: ಲಕ್ಷ್ಮೀ, ಸರಸ್ವತಿ, ದುರ್ಗೆಯ ಸ್ವರೂಪಗಳು ವಿಶೇಷ ಅಲಂಕಾರದಲ್ಲಿ ದೊರೆಯುತ್ತವೆ.
ಧಾರ್ಮಿಕ-ಸಾಂಪ್ರದಾಯಿಕ ಸೆಟ್‌ಗಳು:
ರಾಮ-ಸೀತಾ-ಲಕ್ಷ್ಮಣ-ಹನುಮಂತನ ಸೆಟ್
ಕೃಷ್ಣ-ರಾಧೆ
ಗಣೇಶ-ಗೌರಿ
ನವವಧು-ವರರ ಸೆಟ್
ಮೀರಾಬಾಯಿ ಬೊಂಬೆ
ಅಷ್ಟಲಕ್ಷ್ಮೀ ಸೆಟ್
ದಶಾವತಾರ ಬೊಂಬೆ
Van Heusen Women's Regular Fit Solid 3/4 Sleeve Cotton Rich Formal Shirt
ತಂಜಾವೂರು ತಲೆಯಾಡಿಸುವ ಬೊಂಬೆಗಳು: ಮನೆ ಅಲಂಕಾರಕ್ಕೆ ವಿಶೇಷ ಆಕರ್ಷಣೆ.
ಬೆಲೆ ಶ್ರೇಣಿ
ಈ ಮಳಿಗೆಯಲ್ಲಿ ದೊರೆಯುವ ಗೊಂಬೆಗಳು ₹100 ರಿಂದ ₹25,000 ರವರೆಗೆ ಲಭ್ಯ. ಖರೀದಿದಾರರ ಆಸಕ್ತಿ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ಎಲ್ಲ ಮಾದರಿಯ ಗೊಂಬೆಗಳೂ ಇಲ್ಲಿವೆ.
ಸಂಪ್ರದಾಯ ಮತ್ತು ನವೀನತೆಯ ಸೇತುವೆ
ದಸರಾ ಬೊಂಬೆಗಳು ಕೇವಲ ಅಲಂಕಾರದ ವಸ್ತುಗಳಲ್ಲ, ಅವು ಪೌರಾಣಿಕ ಕಥೆಗಳನ್ನು, ಧಾರ್ಮಿಕ ಆಚರಣೆಗಳನ್ನು, ಸಂಸ್ಕೃತಿಯ ವೈಭವವನ್ನು ಜೀವಂತಗೊಳಿಸುವ ಸಾಧನಗಳು. ಜಯನಗರದ ಈ ಮಳಿಗೆ ಹಳೆಯ ಸಂಪ್ರದಾಯವನ್ನು ಮುಂದುವರಿಸುತ್ತಾ, ಹೊಸ ತಲೆಮಾರಿಗೆ ಗೊಂಬೆಗಳ ಮಹತ್ವವನ್ನು ಪರಿಚಯಿಸುತ್ತಿದೆ. ಈ ದಸರಾ, ನೀವು ಕೂಡಾ ಜಯನಗರದ ಎನ್ ಎಲ್ ದಸರಾ ಬೊಂಬೆಗಳ ಮಳಿಗೆಗೆ ಭೇಟಿ ನೀಡಿ, ನಿಮ್ಮ ಮನೆಗೆ ಸಂಪ್ರದಾಯದ ನವಚೈತನ್ಯವನ್ನು ತರಬಹುದು.