Skip to main content
ವಿಡಿಯೋ
1/2
politics

ವಿಜಯಪುರ ಜಿಲ್ಲೆಯ ವಡವಡಗಿ ಗ್ರಾಮದಲ್ಲಿ ಅದ್ದೂರಿ ಗಣೇಶೋತ್ಸವ: ವಿಜಯಪುರ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಶ್ರೀ ಬಸನಗೌಡ ಮಾಡಗಿಯವರಿಂದ ಉದ್ಘಾಟನೆ

By Gireesh Vasishta
ವಿಜಯಪುರ ಜಿಲ್ಲೆಯ ವಡವಡಗಿ ಗ್ರಾಮದಲ್ಲಿ ಅದ್ದೂರಿ ಗಣೇಶೋತ್ಸವ: ವಿಜಯಪುರ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಶ್ರೀ ಬಸನಗೌಡ ಮಾಡಗಿಯವರಿಂದ ಉದ್ಘಾಟನೆ

ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಗಣೇಶ ಉತ್ಸವ ಬರಿ ಒಂದು ಹಬ್ಬ ಅಥವಾ ಸಡಗರವಲ್ಲ, ಇದು ಒಂದು ಸಂಸ್ಕೃತಿ ಹಾಗೂ ಪ್ರತಿ ವರ್ಷದಂತೆ ಈ ವರ್ಷವೂ ವಡವಡಗಿ ಗ್ರಾಮದಲ್ಲಿ ಗಣೇಶ ಉತ್ಸವವನ್ನು ಆಯೋಜನೆ ಮಾಡಿದ್ದೀರಿ ಇದು ತುಂಬಾ ಸಂತಸ ತಂದಿದೆ ಎಂದರು.

ವಡವಡಗಿ(ವಿಜಯಪುರ): ಕರ್ನಾಟಕದಾದ್ಯಂತ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ, ಗಣೇಶ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ, ಇದರ ನಿಮಿತ್ತ ದಿನಾಂಕ 06-09-2025 ರಂದು ವಡವಡಗಿ ಗ್ರಾಮದಲ್ಲಿ ಗಣೇಶ ಉತ್ಸವ ಅಂಗವಾಗಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದರಲ್ಲಿ ಮುಖ್ಯವಾಗಿ ರಸಮಂಜರಿ ಕಾರ್ಯಕ್ರಮ ಉದ್ಘಾಟನೆಯನ್ನು ವಿಜಯಪುರ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಶ್ರೀ ಬಸನಗೌಡ ಮಾಡಗಿಯವರು ನೆರವೇರಿಸಿದರು.

 

ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಗಣೇಶ ಉತ್ಸವ ಬರಿ ಒಂದು ಹಬ್ಬ ಅಥವಾ ಸಡಗರವಲ್ಲ, ಇದು ಒಂದು ಸಂಸ್ಕೃತಿ ಹಾಗೂ ಪ್ರತಿ ವರ್ಷದಂತೆ ಈ ವರ್ಷವೂ ವಡವಡಗಿ ಗ್ರಾಮದಲ್ಲಿ ಗಣೇಶ ಉತ್ಸವವನ್ನು ಆಯೋಜನೆ ಮಾಡಿದ್ದೀರಿ ಇದು ತುಂಬಾ ಸಂತಸ ತಂದಿದೆ ಎಂದರು.Handcuffs Backpacks Vegan Leather Casual Backpack Multipurpose Travelling Bags Daypacks For Men And Women

 

ಮಾತು ಮುಂದುವರೆಸಿದ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಸವನಗೌಡ ಮಾಡಗಿಯವರು ಗ್ರಾಮಸ್ಥರು ಸಂತೋಷದಿಂದ ಕಾರ್ಯದರ್ಮದಲ್ಲಿ ಭಾಗವಹಿಸಿದ್ದೀರಿ, ನಿಮಗೆಲ್ಲರಿಗೂ ಅಭಿನಂದನೆಗಳು ಹಾಗೂ ಶ್ರೀ ಗಣಪತಿಯ ಆಶೀರ್ವಾದ ನಮ್ಮ ನಿಮ್ಮೆಲ್ಲರ ಮೇಲೂ ಇರಲಿ ಎಂದರು. ಇದೇ ರೀತಿ ಗ್ರಾಮದಲ್ಲಿ ಹಲವಾರು ಕಾರ್ಯಕ್ರಮಗಳು ಯುವಕರಿಂದ ಆಯೋಜನೆಗೊಳ್ಳಲಿ, ಯುವಕರಲ್ಲಿ ಇದೆ ಹುರುಪು ಸದಾ ಇರಲಿ ಎಂದರು.ಮದ್ದೂರು ಕಲ್ಲು ತೂರಾಟ: ಗಣೇಶೋತ್ಸವ ಮೆರವಣಿಗೆ ವೇಳೆ ನಿಜಕ್ಕೂ ನಡೆದಿದ್ದೇನು? ಮಂಡ್ಯ SP ಹೇಳಿದ್ದೇನು?

 

ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಶ್ರೀ ಬಸನಗೌಡ ಮಾಡಗಿಯವರಿಗೆ ವಡವಡಗಿ ಗ್ರಾಮದ ಹಿರಿಯ ಮುಖಂಡರು, ಯುವಕರು, ಹಾಗೂ ಹಲವಾರು ನಾಗರೀಕರು ಅದ್ದೂರಿಯಾಗಿ ಸ್ವಾಗತವನ್ನು ಕೋರಿದರು. ಈ ಸಂದರ್ಭದಲ್ಲಿ ಹಲವಾರು ಜೆಡಿಎಸ್‌ ರಾಜಕೀಯ ಮುಖಂಡರು ಅಧ್ಯಕ್ಷರಾದ ಶ್ರೀ ಬಸನಗೌಡ ಮಾಡಗಿಯವರಿಗೆ ಸಾತ್‌ ನೀಡಿದರು. ನಂತರ ಗ್ರಾಮದ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಯಿತು, ಗಣೇಶೋತ್ಸವದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದು ಇದರಿಂದ ಗ್ರಾಮಸ್ಥರು ಸಂತಸದಿಂದ ಭಾಗವಹಿಸಿದರು.