ಮಂಡ್ಯ ಜಿಲ್ಲೆಯ ಮದ್ದೂರಿನ ಕಲ್ಲು ತೂರಾಟ ಪ್ರಕರಣ: ಬಿಜೆಪಿಯ ಕುಮ್ಮಕ್ಕು ಎಂದು ಬೇಜವಾಬ್ದಾರಿಯಿಂದ ಮಾತನಾಡಬಾರದು, ಸಂಸದ ಯದುವೀರ್ ಒಡೆಯರ್ ಆಕ್ರೋಶ
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಸಂಸದ ಯದುವೀರ್ ಒಡೆಯರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಕಿಡಿಕಾರಿದ್ದಾರೆ, ಎರಡು ಕೋಮುಗಳ ನಡುವೆ ಕಲ್ಲು ತೂರಾಟ ನಡೆದಿದ್ದು ಸರಿಯಲ್ಲ. ಇದಕ್ಕೆ ಸರಕಾರ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ, ಬರಿ ಬಿಜೆಪಿಯವರನ್ನು ದೂರವ ಕೆಲಸ ಆಗಬಾರದು ತಪ್ಪು ಮಾಡಿದವರನ್ನು ಗುರುತಿಸಿ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಹೇಳಿದ್ದಾರೆ.BULLMER Striped Textured Printed Polo Neck Fullsleeve T-Shirt with Rib for Men
ಮಂಡ್ಯ ಜಿಲ್ಲೆ ಮದ್ದೂರು ಕಲ್ಲುತೂರಾಟ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ರಾಜಕೀಯ ಮುಖಂಡರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು ಜೆಡಿಎಸ್ ನ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ವಿಪಕ್ಷನಾಯಕ ಆರ್, ಆಶೋಕ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇದು ನೇರವಾಗಿ ಸರ್ಕಾರದ ಎಡವಟ್ಟು ಎಂದು ಆರೋಪಿಸಿದ್ದಾರೆ.ತಂತ್ರಜ್ಞಾನಕ್ಕಿಂತಲೂ ಭಾರತೀಯ ಕಾನೂನುಗಳು ಜ್ಯೋತಿರ್ವರ್ಷ ಹಿಂದಿವೆ: ನ್ಯಾ. ಮನಮೋಹನ್ ಬೇಸರ: ಏನಿದು ವಿಚಾರ?
ಜೆಡಿಎಸ್‌ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪೋಸ್ಟ್‌ನಲ್ಲಿ
“ಕಲ್ಲು ಹೊಡೆದವರಿಗೆ ಬಿರಿಯಾನಿ, ನ್ಯಾಯ ಕೇಳಿದವರಿಗೆ ಲಾಠಿ ಏಟು !
ಇದು ಕಟುಕ ಕಾಂಗ್ರೆಸ್ ಸರ್ಕಾರ” ಎಂದು ಬರೆದುಕೊಂಡಿದೆ.
ಆದರೂ ಮದ್ದೂರಿನಲ್ಲಿ ನಡೆದ ಈ ಘಟನೆ ಖಂಡನೀಯವಾಗಿದೆ, ನಂತರ ಜನರ ಪ್ರತಿಭಟನೆಗೆ ಬೇಸತ್ತ ಪೊಲೀಸರು ಲಘು ಲಾಠಿಚಾರ್ಜ್‌ಅನ್ನು ನಡೆಸಿದ್ದಾರೆ. ಆದರೆ ಈ ಲಾಠಿಚಾರ್ಜ್ ಅಚಶ್ಯಕತೆ ಇತ್ತಾ ಎಂದು ವಿಪಕ್ಷಗಳು ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.