ಗುರಿಯಿದ್ದರೂ ಸಾಧಿಸಲಾರದೇ ಕುಳಿತು ಬಿಳುವವರ ಮಧ್ಯೆ, ವೀಲ್‌ಚೇರ್‌ನಲ್ಲೇ ಜೀವನ ಕಳೆಯದೇ ಸ್ವ-ಉದ್ಯೋಗ ಹಾಗೂ ಕ್ರೀಡೆಯಲ್ಲಿ ಪಾಲ್ಗೊಂಡು ವಿವಿಧ ಮ್ಯಾರಥಾನ್‌ಗಳಲ್ಲಿ, ರಾಜ್ಯವಲ್ಲದೇ ಹೊರ ರಾಜ್ಯಗಳಲ್ಲೂ ಪ್ರಶಸ್ತಿ ಗಿಟ್ಟಿಸಿಕೊಂಡಿರುವ ದಿಟ್ಟ ಮಹಿಳೆಯೊಬ್ಬರು ರೊಟ್ಟಿ ಮಾಡುವ ಬಿಸಿನೆಸ್ ಮೂಲಕ ತಮ್ಮ ಸ್ವಂತ ಜೀವನವನ್ನೂ ನಡೆಸಿದ್ದಾರೆ.
ಉನ್ನತ ವಿದ್ಯಾಭ್ಯಾಸವನ್ನು ಮಾಡಿಕೊಂಡಿರುವ ಇವರು, ಸುಮಧುರವಾಗಿ ಹಾಡುವ ಕಲೆಯನ್ನು, ಕ್ರೀಡೆಯನ್ನು ಪ್ರೀತಿಸುತ್ತಾರೆ. ಸಾಮಾಜಿಕವಾಗಿ ಹಿಂದುಳಿಯದೇ, ಭಾವನಾತ್ಮಕ ಸಂಬಂಧಗಳಲ್ಲಿನ ಏಳು ಬೀಳನ್ನು ದಾಟುತ್ತಾ, ಅಕಸ್ಮಾತ್ ಆಗಿ ಕಾಲುಗಳಲ್ಲಿನ ಶಕ್ತಿ ಕಳೆದುಕೊಂಡರು. ತಮ್ಮ ನ್ಯೂನ್ಯತೆಯನ್ನು ಪರಿಗಣಿಸದೇ, ಮಾನಸಿಕವಾಗಿ ಕುಗ್ಗದೇ ಜೀವನ ಹೋರಾಟ ನಡೆಸುತ್ತಿರುವ ಇವರು ದಿಟ್ಟತನದಿಂದ ಪುಸ್ತಕಗಳನ್ನು ಓದಿಕೊಂಡು, ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸಿದ್ದಾರೆ.
Spigen Airpods Max Ear Cups Cover, [Light & Compact], Urban Fit - Black
ಒಬ್ಬರೇ ಧೃತಿಗೆಡದೇ, ಸಹಾಯಕರ ಜೊತೆಗೂಡಿ ತಮ್ಮ ಕನಸನ್ನು ಬೆನ್ನಟ್ಟುತ್ತಾ, ಅಂಗವಿಕಲತೆಯಲ್ಲೂ ವೀಲ್‌ಚೇರ್ ರನ್ನಿಂಗ್ ಮ್ಯಾರಥಾನ್, ಆರ್ಚರಿ ಸ್ಪರ್ಧೆಯಲ್ಲಿ ಭಾಗವಹಿಸಿ, ಪರಿಶ್ರಮದಿಂದ ದೇಹ ದಣಿಸಿ, ಪ್ರಾಕ್ಟಿಸ್ ಮಾಡಿ, ಮೆಡಲ್‌ಗಳನ್ನು ಗಳಿಸಿದ್ದಾರೆ. ಆದಾಯಕ್ಕಾಗಿ, ಉತ್ತರಕರ್ನಾಟಕ ಭಾಗದಲ್ಲಿ ಸಂಘದ ಮುಖಾಂತರ ಲೋನ್ ತೆಗೆದುಕೊಂಡು, ರೊಟ್ಟಿ ಮಾಡುವ ಬುಸಿನೆಸ್ ನಡೆಸುತ್ತಿದ್ದಾರೆ. ನಿರೀಕ್ಷಿಸುವಷ್ಟು ಉಳಿತಾಯ ಅಥವಾ ಸಂಭಾವನೆಗಿಂತಲೂ ಅವರ ಶ್ರಮದಾಯಕ ಪ್ರಯತ್ನಕ್ಕೆ ಪ್ರತಿಫಲ ಸಿಗಲಿ ಎಂದು ಹಾರೈಸೋಣ.
ಇದನ್ನೂ ಓದಿ: ಪೂರ್ಣಚಂದ್ರ ತೇಜಸ್ವಿ ಅವರ 87ನೇ ಜನ್ಮದಿನ...ಸಿನಿಮಾ ರೂಪದಲ್ಲಿ 'ಜುಗಾರಿ ಕ್ರಾಸ್' ಕಥೆ!