ಹರಿಯಾಣ (ಸೆ.08): ಭಾರತದ ಹಲವು ಮನೆಗಳಲ್ಲಿ ಎಸಿ ಇಂದು ಸಾಮಾನ್ಯವಾಗಿದೆ. ಉರಿಯುವ ಬಿಸಿಲು ಮತ್ತು ತೀವ್ರ ಶಾಖದಿಂದಾಗಿ ವಾತಾವರಣದಲ್ಲಿ ಆಗಿರುವ ಬದಲಾವಣೆಯಿಂದ ಜನವರಿಯಿಂದಲೇ ಎಸಿಯ ಅನಿವಾರ್ಯವಾಗಿದೆ. ವಿಶೇಷವಾಗಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಎಸಿ ಅತ್ಯಗತ್ಯವಾಗಿದೆ. ಆದರೆ, ಫರೀದಾಬಾದ್‌ನಲ್ಲಿ ಕುಟುಂಬವೊಂದು ಎಸಿ ಸ್ಫೋಟಗೊಂಡು ದಾರುಣ ದುರಂತಕ್ಕೆ ಸಿಲುಕಿದ್ದಾರೆ. ಈ ಘಟನೆಯಲ್ಲಿ ತಂದೆ, ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಮಗ ಗಂಭೀರವಾಗಿ ಗಾಯಗೊಂಡು ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗ್ರೀನ್‌ಫೀಲ್ಡ್ ಕಾಲೋನಿಯಲ್ಲಿ ಈ ಗಟನೆ ಸಂಭವಿಸಿದೆ, ಸಚಿನ್ ಕಪೂರ್ ಮತ್ತು ರಿಂಕೂ ಕಪೂರ್ ಕುಟುಂಬವು ಫರೀದಾಬಾದ್‌ನ ಗ್ರೀನ್‌ಫೀಲ್ಡ್ ಕಾಲೋನಿಯಲ್ಲಿ ವಾಸವಾಗಿದ್ದರು. ಭಾನುವಾರ (ಸೆ.07) ರಾತ್ರಿ ಎಸಿ ಆನ್ ಮಾಡಿ ಕುಟುಂಬವು ಮಲಗಿತ್ತು. ಸಚಿನ್, ರಿಂಕೂ ಮತ್ತು ಇಬ್ಬರು ಮಕ್ಕಳಾದ ಸುಜನ್ ಹಾಗೂ ಆರ್ಯನ್ ಮಲಗಿದ್ದರು. ರಾತ್ರಿ 1:30ರ ಸುಮಾರಿಗೆ ಎಸಿಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಈ ಶಬ್ದಕ್ಕೆ ಅಕ್ಕಪಕ್ಕದ ಮನೆಯವರು ಭಯಭೀತರಾದರು. ಸ್ಫೋಟದಿಂದಾಗಿ ಸಚಿನ್ ಕಪೂರ್ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗ ಉರಿಯಲಾರಂಭಿಸಿದೆ.
ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿತು. ರಕ್ಷಣಾ ಕಾರ್ಯದ ವೇಳೆ ಸಚಿನ್ ಕಪೂರ್, ರಿಂಕೂ ಕಪೂರ್ ಮತ್ತು ಅವರ ಪುತ್ರಿ ಸುಜನ್ ಕಪೂರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರು. ಆದರೆ, ಪುತ್ರ ಆರ್ಯನ್ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿದ್ದ. ಆರ್ಯನ್ ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗಂಭೀರ ಸುಟ್ಟ ಗಾಯಗಳಿಂದ ಆರ್ಯನ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದನು. ರಕ್ಷಣಾ ತಂಡವು ತಕ್ಷಣವೇ ಅವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿತು. ಆರ್ಯನ್‌ನ ದೇಹದ ಬಹುತೇಕ ಭಾಗ ಸುಟ್ಟು ಹೋಗಿದ್ದು, ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Van Heusen Women's Regular Fit Solid 3/4 Sleeve Cotton Rich Formal Shirt
ಎರಡು ಅಗ್ನಿಶಾಮಕ ದಳಗಳು ಸ್ಥಳದಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು. ಕಟ್ಟಡದ ಇತರ ಕುಟುಂಬಗಳು ಸಚಿನ್ ಕಪೂರ್ ಕುಟುಂಬವನ್ನು ರಕ್ಷಿಸಲು ಪ್ರಯತ್ನಿಸಿದರೂ, ಬೆಂಕಿಯ ಕೆನ್ನಾಲಿಗೆಯಿಂದಾಗಿ ಸಾಧ್ಯವಾಗಲಿಲ್ಲ. ತಾಂತ್ರಿಕ ದೋಷದಿಂದ ಸ್ಫೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಎಸಿಯ ತಾಂತ್ರಿಕ ದೋಷವೇ ಸ್ಫೋಟಕ್ಕೆ ಕಾರಣ ಎಂದು ತಿಳಿದುಬಂದಿದೆ. ಎಸಿಯ ತಂತಿ ವ್ಯವಸ್ಥೆ ಮತ್ತು ಇತರ ತಾಂತ್ರಿಕ ಅಂಶಗಳ ಕುರಿತು ತನಿಖೆ ಮುಂದುವರಿದಿದೆ. ಘಟನೆಯಿಂದ ಮನೆಯ ಎಲ್ಲ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.