ಬೆಂಗಳೂರು: ರಾಜಕೀಯ ಮೊದಲೇ ಅಸ್ಥಿರತೆಗಳ ಸಾಮ್ರಾಜ್ಯ ಅಂತಹದರಲ್ಲಿ ಅದರಲ್ಲಿ ನಡೆಯುವ ದೈನಂದಿನದ ಬೆಳವಣಿಗೆಗೆ ದೈನಂದಿನ ಜಗತ್ತು ಸಾಕ್ಷಿಯಾಗಲೇ ಬೇಕಾಗಿದೆ. ಅಂತಹದರಲ್ಲಿ ರಾಜಕೀಯ ಪಕ್ಷದಲ್ಲಿ ಒಂದಾದ ಬಿಜೆಪಿ ಪಕ್ಷವು ಮುಂದಿನ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಚಿಂತನ ಮಂಥನ ಸಭೆಯನ್ನು ಆಯೋಜಿಸಲು ಮುಂದಾಗಿದೆ. ಮುಂದಿನ ಕಾರ್ಯನೀತಿ, ಪಕ್ಷ ಸಂಘಟನೆ, ಚುನಾವಣಾ ತಯಾರಿ ಸಂಬಂಧ ಸೆಪ್ಟೆಂಬರ್ ಮೂರನೇ ವಾರದಲ್ಲಿ ಕರ್ನಾಟಕ ಬಿಜೆಪಿ ಈ ಸಭೆಯನ್ನು ಆಯೋಜಿಸಿದೆ.ಇದನ್ನೂ ಓದಿ: ಮತ್ತೆ ವ್ಯಾಪಾರ ಸಂಬಂಧದ ಮಾತುಕತೆಗೆ ಟ್ರಂಪ್-ಮೋದಿ ಸಜ್ಜು...ಸುಂಕ ವಿವಾದಕ್ಕೆ ಶೀಘ್ರವೇ ಸಿಗುತ್ತಾ ಪರಿಹಾರ?
ಯಲಹಂಕದ ಖಾಸಗಿ ರೆಸಾರ್ಟ್‌ನಲ್ಲಿ ಸೆಪ್ಟೆಂಬರ್ 18, 19 ರಂದು ರಾಜ್ಯ ಬಿಜೆಪಿಯು ಚಿಂತನ ಮಂಥನ ಸಭೆಯನ್ನು ಆಯೋಜಿಸಿದೆ.ಕೇಂದ್ರ ಸಚಿವರಾದ ಧಮ್ರೇಂದ್ರ ಪ್ರಧಾನ್ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಎರೆಡು ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ಬಿಜೆಪಿಯ ಹಾಲಿ ಹಾಗೂ ಮಾಜಿ ಜನ ಪ್ರತಿನಿಧಿಗಳು ಪದಾದಿಕಾರಿಗಳು ಸೇರಿ ಒಟ್ಟು 400 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂಬ ಅಂದಾಜು ಇದೆ.ಇದನ್ನೂ ಓದಿ: ನೇಪಾಳ ಪ್ರತಿಭಟನೆ - ರಾಜಧಾನಿ ಕಠ್ಮಂಡುವಿನಲ್ಲಿ ವಿಮಾನಯಾನ ಸ್ಥಗಿತಗೊಳಿಸಿದ ಏರ್ ಇಂಡಿಯಾ, ಇಂಡಿಗೋ.!
ರಾಜ್ಯ ಬಿಜೆಪಿಯ ಮುಂದಿನ ಕಾರ್ಯನೀತಿ, ಪಕ್ಷ ಸಂಘಟನೆ, ಚುನಾವಣಾ ತಯಾರಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ, ಕಾಂಗ್ರೆಸ್ ಧೋರಣೆ, ಒಗ್ಗಟ್ಟು, ಸಮನ್ವಯತೆ ಕಾಯ್ದುಕೊಳ್ಳುವುದು ಸೇರಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.Noise Buds VS601 in-Ear Truly Wireless Earbuds with 50H of Playtime, Transparent case lid, Quad mic ENC, Dual Device Pairing, 10mm Driver, BT v5.3 (Silver Grey)