ಕನ್ನಡ ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕ ಹಾಗೂ ನಿರೂಪಕ ರಮೇಶ್ ಅರವಿಂದ್ ಅವರಿಗೆ ಇಂದು 61ನೇ ಜನ್ಮದಿನದ ಸಂಭ್ರಮ. ಅವರ ಹುಟ್ಟಿದ ಹಬ್ಬದ ಈ ಸಂದರ್ಭದಲ್ಲಿ, ಅವರ ವೃತ್ತಿಜೀವನ ಮತ್ತು ವ್ಯಕ್ತಿತ್ವದ ಕುರಿತು ಕೆಲವು ವಿಶೇಷ ವಿಚಾರಗಳು ಇಲ್ಲಿವೆ.
ರಮೇಶ್ ಅರವಿಂದ್ ಅವರು ವರ್ಷದಿಂದ ವರ್ಷಕ್ಕೆ ಕಿರಿಯರಾಗುತ್ತಿದ್ದಾರೆ ಎಂಬಂತೆ ಭಾಸವಾಗುತ್ತದೆ. ಅವರಲ್ಲೊಂದು ಹೊಸತನ ಮತ್ತು ಸಕಾರಾತ್ಮಕ ಶಕ್ತಿ ಸದಾ ಪುಟಿಯುತ್ತಿರುತ್ತದೆ. ಹೊಸಬರೊಂದಿಗೆ ಸುಲಭವಾಗಿ ಹೊಂದಿಕೊಳ್ಳುವ, ಹಿರಿಯರೊಂದಿಗೆ ಆ ದಿನಗಳ ನೆನಪುಗಳನ್ನು ಮೆಲುಕು ಹಾಕುವ ಅವರ ಗುಣಗಳು ಎಲ್ಲರಿಗೂ ಸ್ಪೂರ್ತಿದಾಯಕ. ಅವರನ್ನು 'ಬಂಡಲ್ ಆಫ್ ಪಾಸಿಟಿವಿಟಿ' ಎಂದು ಕರೆಯುವುದು ಸಮರ್ಥನೀಯ.
ರಮೇಶ್ ಅರವಿಂದ್ ಅವರ ಬಳಿ ನಕಾರಾತ್ಮಕತೆ ಸುಳಿಯುವುದೇ ಇಲ್ಲ. ಪ್ರತಿ ವಿಷಯಕ್ಕೂ ಸಿದ್ಧತೆ ಮತ್ತು ಯೋಜನೆಯೊಂದಿಗೆ ಮುನ್ನಡೆಯುವ ಅವರ ವಿಧಾನ, ಮಾತಿನಲ್ಲಿ ಸದಾ ಸಕಾರಾತ್ಮಕತೆ ಮತ್ತು ಮಾಹಿತಿಯ ಕಣಜವನ್ನು ತೆರೆದಿಡುತ್ತದೆ. ಇದು ಕೇಳುಗರಿಗೆ ಸಕಾರಾತ್ಮಕ ಭಾವನೆ ನೀಡುತ್ತದೆ.
TIMEX Marlin Round Dial Analog Men's Watch
ಸೆಪ್ಟೆಂಬರ್ 10, 1964 ರಂದು ಕುಂಭಕೋಣಂನಲ್ಲಿ ಜನಿಸಿದ ರಮೇಶ್ ಅರವಿಂದ್, 61 ವರ್ಷದವರಾದರೂ ಯುವಕರಂತೆ ಕಾಣುತ್ತಾರೆ. ವೃತ್ತಿಪರ ಶಿಕ್ಷಣ ಪಡೆದ ಇಂಜಿನಿಯರ್ ಆಗಿದ್ದರೂ, ತಮ್ಮ ಆಸಕ್ತಿಯ ಕ್ಷೇತ್ರವಾದ ನಟನೆ, ನಿರ್ದೇಶನ ಮತ್ತು ನಿರೂಪಣೆಯಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ.
ನನಗೆ ಆಗ್ತಿಲ್ಲ ಒಂದು ತೊಟ್ಟು ವಿಷ ಕೊಡಿ ಎಂದ ದರ್ಶನ್...ಇದಕ್ಕೆ ಕೋರ್ಟ್ ಏನೇಳ್ತು ಗೊತ್ತಾ?
ಕೆ. ಬಾಲಚಂದರ್ ನಿರ್ದೇಶನದ 'ಸುಂದರ ಸ್ವಪ್ನಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ರಮೇಶ್ ಅರವಿಂದ್ ಕಾಲಿಟ್ಟರು. ನಂತರ 'ಮೌನಗೀತೆ', 'ಮನೆಯೇ ಮಂತ್ರಾಲಯ' ಮುಂತಾದ ಚಿತ್ರಗಳಲ್ಲಿ ನಟಿಸಿದರು. ಅವರು ಕೇವಲ ನಟರಾಗಿ ಮಾತ್ರವಲ್ಲದೆ, 'ಹೊಂಬಾಳೆ', 'ಬಿಸಿ ಬಿಸಿ', 'ರಾಮಾ ಶಾಮಾ ಭಾಮಾ' ಸೇರಿದಂತೆ ಸುಮಾರು 15 ಚಿತ್ರಗಳಿಗೆ ನಿರ್ದೇಶಕರಾಗಿ ಹಾಗೂ ಬರಹಗಾರರಾಗಿ ಕೆಲಸ ಮಾಡಿದ್ದಾರೆ
.
ಸಿನಿಮಾ ಹೊರತಾಗಿ, 'ಪ್ರೀತಿಯಿಂದ ರಮೇಶ್', 'ವೀಕೆಂಡ್ ವಿತ್ ರಮೇಶ್' ನಂತಹ ಯಶಸ್ವಿ ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. 'ಮಹಾನಟಿ ಸೀಸನ್ 2' ರ ತೀರ್ಪುಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಿಡುವಿನ ಸಮಯದಲ್ಲಿ ಸ್ಫೂರ್ತಿದಾಯಕ ವಿಡಿಯೋಗಳನ್ನು ಮಾಡುವ ಮೂಲಕ ಜನರಿಗೆ ಪ್ರೇರಣೆ ನೀಡುತ್ತಾರೆ. ಒಟ್ಟಾರೆ, ರಮೇಶ್ ಅರವಿಂದ್ ಕೇವಲ ಕಲಾವಿದರಷ್ಟೇ ಅಲ್ಲ, ಜೀವನೋತ್ಸಾಹ ಮತ್ತು ಸಕಾರಾತ್ಮಕ ಶಕ್ತಿಯ ಪ್ರತೀಕ. ಅವರು ಸದಾ ಪ್ರೇರಣೆಯ ಚಿಲುಮೆಯಾಗಿದ್ದಾರೆ.