ಇಸ್ರೇಲ್ ಮೋದಿಯಿಂದ ಏನು ಕಲಿಯಬಹುದು: ರಾಷ್ಟ್ರೀಯ ಗೌರವವನ್ನು ಕಾರ್ಯತಂತ್ರದ ಸಂಪತ್ತಾಗಿ ಬಳಸುವುದು: ಇಸ್ರೇಲ್ ನೀತಿ ತಜ್ಞ ಜಕೀ ಶಲೋಮ್ ಹೇಳಿಕೆ
ಜೆರುಸಲೆಮ್ ಪೋಸ್ಟ್ನಲ್ಲಿ ಸೆಪ್ಟೆಂಬರ್ 6, 2025 ರಂದು ಪ್ರಕಟವಾದ "ವಾಟ್ ಇಸ್ರೇಲ್ ಕ್ಯಾನ್ ಲರ್ನ್ ಫ್ರಂ ಮೋದಿ: ನ್ಯಾಷನಲ್ ಹಾನರ್ ಆಸ್ ಎ ಸ್ಟ್ರಾಟೆಜಿಕ್ ಆಸ್ಸೆಟ್" ಲೇಖನವನ್ನು ಝಕಿ ಶಲೋಮ್ ಬರೆದಿದ್ದಾರೆ. ಇದು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರೀಯ ಗೌರವದ ಕಾರ್ಯತಂತ್ರದಿಂದ ಇಸ್ರೇಲ್ ಕಲಿಯಬಹುದಾದ ಪಾಠಗಳ ಬಗ್ಗೆ ಬೆಳಕು ಚೆಲ್ಲುತ್ತದೆ..
ಲೇಖನದ ಮುಖ್ಯ ಅಂಶಗಳು:
ಮೋದಿಯವರ ದೃಢವಾದ ಅಂತಾರಾಷ್ಟ್ರೀಯ ನಿಲುವಿನಿಂದ ಇಸ್ರೇಲ್ ಕಲಿಯಬಹುದು ಎಂದು ಶಲೋಮ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ, ವಿಶೇಷವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನೀತಿಗಳಿಗೆ ಸಂಬಂಧಿಸಿದಂತೆ. 50% ಸುಂಕವನ್ನು (ರಷ್ಯಾದ ತೈಲ ಆಮದಿನಿಂದ 25% ಸೇರಿದಂತೆ) ಒಪ್ಪದೆ, ಭಾರತ-ಪಾಕಿಸ್ತಾನ ಶಾಂತಿ ಒಪ್ಪಂದಕ್ಕೆ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದಾರೆ ಎಂಬ ಹೇಳಿಕೆಯನ್ನು ತಿರಸ್ಕರಿಸಿ, ಮೋದಿಯವರು ತಮ್ಮ ಗೌರವವನ್ನು ಕಾಪಾಡಿಕೊಂಡರು. ಟ್ರಂಪ್‌ರ ನಾಲ್ಕು ಕರೆಗಳನ್ನು ತಿರಸ್ಕರಿಸಿದ ಮೋದಿಯವರು ಭಾರತವನ್ನು ಕೀಳು ರಾಷ್ಟ್ರವಾಗಿ ಕಾಣುವುದಿಲ್ಲ ಎಂಬ ಸಂದೇಶ ನೀಡಿದರು. ಉಡುಪಿ: ಪರಶುರಾಮ ಪ್ರತಿಮೆ ಮರು ಸ್ಥಾಪನೆ ಕೋರಿಕೆ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್: ಏನಿದು ವಿಚಾರ?
ಇದಕ್ಕೆ ವಿರುದ್ಧವಾಗಿ, ಖಾನ್ ಯೂನಿಸ್ನಲ್ಲಿ ಇಸ್ರೇಲ್ ಸಿಡಿಸಿದ ಶೆಲ್ ನಾಸರ್ ಆಸ್ಪತ್ರೆಗೆ ತಗುಲಿ 20 ಜನ ಸಾವನ್ನಪ್ಪಿದ ಘಟನೆಗೆ ಇಸ್ರೇಲ್‌ನ ನಾಯಕರು ತಕ್ಷಣ ಕ್ಷಮೆಯಾಚಿಸಿದರು. ಇದು ತಾತ್ಕಾಲಿಕ ಹಾನಿಯನ್ನು ಕಡಿಮೆ ಮಾಡಲು ಉದ್ದೇಶಿಸಿತ್ತಾದರೂ, ದೀರ್ಘಕಾಲೀನ ಕಾರ್ಯತಂತ್ರಕ್ಕೆ ಹಾನಿಯಾಗಬಹುದು ಎಂದು ಶಲೋಮ್ ಸೂಚಿಸುತ್ತಾರೆ. ಇಂತಹ ತಂತ್ರಗಳು ರಾಜನೀತಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಗೌರವವು ಕಾರ್ಯತಂತ್ರದ ಸಂಪತ್ತು: ಶಲೋಮ್ ಅವರು, ಮೋದಿಯವರ ವಿಧಾನವು ರಾಷ್ಟ್ರೀಯ ಗೌರವವು ಐಷಾರಾಮವಲ್ಲ, ಬದಲಿಗೆ ನಿರ್ಣಾಯಕ ಕಾರ್ಯತಂತ್ರದ ಸಾಧನವಾಗಿದೆ. ಅಮೆರಿಕದ ಮೌಖಿಕ ದಾಳಿಗಳಿಗೆ ದೃಢವಾಗಿ ಪ್ರತಿಕ್ರಿಯಿಸುವ ಮೂಲಕ ಮತ್ತು ಭಾರತದ ಸಾರ್ವಭೌಮತ್ವವನ್ನು ಕಾಪಾಡಿಕೊಂಡು, ಮೋದಿಯವರು ಸ್ಥಿರತೆ ಮತ್ತು ಶಕ್ತಿಯನ್ನು ತೋರಿಸಿದರು. ಇಸ್ರೇಲ್ ಕೂಡ ತೀವ್ರವಾದ ಅಂತರರಾಷ್ಟ್ರೀಯ ಒತ್ತಡದಡಿಯಲ್ಲಿಯೂ ಕ್ಷಮಾಪಣೆಯನ್ನು ತಡವಾಗಿ ವ್ಯಕ್ತಪಡಿಸುವ ಮೂಲಕ ಇಂತಹ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಶಲೋಮ್ ಸಲಹೆ ನೀಡಿದ್ದಾರೆ. ದೃಢವಾದ ಸ್ಥಿರತೆಯನ್ನು ತೋರಿಸುವುದು ಇಸ್ರೇಲ್‌ನ ಜಾಗತಿಕ ಸ್ಥಾನಮಾನ ಮತ್ತು ಭದ್ರತೆಯನ್ನು ದೃಡವಾಗಿರಿಸುವುದು ಅತ್ಯಗತ್ಯ ಎಂದು ಅವರು ಹೇಳಿಕೆ ನೀಡಿದ್ದಾರೆ.Handcuffs Backpacks Vegan Leather Casual Backpack Multipurpose Travelling Bags Daypacks For Men And Women
ಒಟ್ಟಾರೆ ಮೋದಿ ಅವರ ರಾಜನೀತಿ, ರಾಜ ತಂತ್ರಗಳು ಬೇರೆ ಬೇರೆ ದೇಶಗಳ ಮುಖಂಡರಿಂದ ಶ್ಲಾಘನೆಗೆ ವ್ಯಕ್ತವಾಗುತ್ತಿದೆ. ಇದಕ್ಕೆ ಸಾಟಿ ಎಂಬಂತೆ ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸಿದರು ಎಂಬ ಬೆನ್ನಲ್ಲೇ ಹಲವಾರು ರಾಜತಾಂತ್ರಿಕ ತೀರ್ಮಾನಗಳ ನಂತರ ಅದನ್ನು ಮುಂದುವರಿಸಿದ್ದು, ನಂತರ ಅಮೆರಿಕಾದ ಬೆಲೆ ಏರಿಕೆಯ ತಂತ್ರಗಳಿಗೆ ಬಗ್ಗದೆ ದೃಢವಾಗಿ ನಿಂತಿತ್ತು, ಮೋದಿಯವರ ಎಲ್ಲ ನಿರ್ಧಾರಗಳು ಬೇರೆ ದೇಶಗಳಿಗೂ ಮಾದರಿಯಾಗಿದೆ. ಎಂದು ಇಸ್ರೇಲ್ ನೀತಿ ತಜ್ಞ ಜಕೀ ಶಲೋಮ್ ಹೇಳಿಕೆ ನೀಡಿದ್ದಾರೆ