ನೆಟ್‌ಫ್ಲಿಕ್ಸ್, ಸೆಪ್ಟೆಂಬರ್ 10 ರಂದು ಮಹಾಭಾರತವನ್ನು ಆಧರಿಸಿದ ಹೊಸ ಪೌರಾಣಿಕ ಅನಿಮೇಟೆಡ್ ಸರಣಿ 'ಕುರುಕ್ಷೇತ್ರ'ವನ್ನು ಘೋಷಿಸಿದೆ. ಅನು ಸಿಕ್ಕಾ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಸರಣಿಯು ಅಕ್ಟೋಬರ್ 10 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಳ್ಳಲಿದೆ.
ಈ ಕುರಿತು ನೆಟ್‌ಫ್ಲಿಕ್ಸ್ ಸರಣಿಯ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಇದರಲ್ಲಿ ಶ್ರೀಕೃಷ್ಣ, ಪಾಂಡವರು ಹಾಗೂ ಇತರ ಪ್ರಮುಖ ಪಾತ್ರಗಳ ಒಂದು ಝಲಕ್ ಅನ್ನು ತೋರಿಸಲಾಗಿದೆ.
'ಕುರುಕ್ಷೇತ್ರ' ಮಹಾಭಾರತವನ್ನು ಹಿಂದೆಂದಿಗಿಂತಲೂ ಭಿನ್ನವಾಗಿ, ಒಂದು ಅನನ್ಯ ನಿರೂಪಣೆಯ ಮೂಲಕ ಪ್ರಸ್ತುತಪಡಿಸುತ್ತದೆ. ಇದು ಮಹಾಕಾವ್ಯದ ಪ್ರಮುಖ ಕ್ಷಣಗಳ ತೀವ್ರ ಭಾವನಾತ್ಮಕತೆ ಮತ್ತು ನೈತಿಕ ಸಂಕೀರ್ಣತೆಗಳನ್ನು ಸೆರೆಹಿಡಿಯುತ್ತದೆ. 18 ಪ್ರಮುಖ ಯೋಧರ ದೃಷ್ಟಿಕೋನದಿಂದ ಈ ಸರಣಿಯು ತೆರೆದುಕೊಳ್ಳಲಿದೆ. ಪ್ರತಿಯೊಬ್ಬರೂ ತಮ್ಮ ಆಂತರಿಕ ಸಂಘರ್ಷಗಳು, ವೈಯಕ್ತಿಕ ವೈಷಮ್ಯಗಳು ಮತ್ತು ಸಹೋದರರ ನಡುವಿನ ಯುದ್ಧದ ವಿನಾಶಕಾರಿ ಪರಿಣಾಮಗಳನ್ನು ಈ ಸರಣಿ ಅನಾವರಣಗೊಳಿಸುತ್ತದೆ.
TIMEX Marlin Round Dial Analog Men's Watch
ಉಜಾನ್ ಗಂಗೂಲಿ ನಿರ್ದೇಶನದ ಈ ಸರಣಿಗೆ, ಹಿರಿಯ ಕವಿ ಗುಲ್ಜಾರ್ ಸಾಹಿತ್ಯ ಒದಗಿಸಿದ್ದಾರೆ. ಅಲೋಕ್ ಜೈನ್, ಅನು ಸಿಕ್ಕಾ ಮತ್ತು ಅಜಿತ್ ಅಂಧಾರೆ ಅವರು ಟಿಪ್ಪಿಂಗ್ ಪಾಯಿಂಟ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಸರಣಿಯನ್ನು ನಿರ್ಮಿಸಿದ್ದಾರೆ. 'ಕುರುಕ್ಷೇತ್ರ' ಎರಡು ಭಾಗಗಳಲ್ಲಿ, ಒಟ್ಟು 18 ಸಂಚಿಕೆಗಳಲ್ಲಿ ಬಿಡುಗಡೆಯಾಗಲಿದೆ.
ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಮಗಳ ಬರ್ತಡೇ ಕೇಕ್ ತರಿಸಿಲ್ಲ...ಕೋಟಿ ಕೋಟಿ ಹಣ ಇದ್ರೂ ಹೀಗ್ಯಾಕೆ ಮಾಡಿದ್ರು ಗೊತ್ತಾ?
ನೆಟ್‌ಫ್ಲಿಕ್ಸ್ ಇಂಡಿಯಾದ ಸರಣಿ ಮುಖ್ಯಸ್ಥೆ ತಾನಿಯಾ ಬಾಮಿ ಅವರು ಮಾತನಾಡಿ, "ಮಹಾಭಾರತವು ಯಾವಾಗಲೂ ಮಹಾಕಾವ್ಯಕ್ಕಿಂತ ಹೆಚ್ಚಾಗಿದೆ. ಇದು ನಮ್ಮ ಆಯ್ಕೆಗಳು ಮತ್ತು ಗೊಂದಲಗಳಿಗೆ ಕನ್ನಡಿ ಹಿಡಿಯುತ್ತದೆ. ನೂರಾರು ವರ್ಷಗಳ ಹಿಂದೆಯೂ ಮಹತ್ವ ಪಡೆದಿದ್ದ ಇದು ಇಂದಿಗೂ ಪ್ರಸ್ತುತವಾಗಿದೆ. ಈ ಸರಣಿಯು ಹೊಸ ಕಥೆ ಹೇಳುವ ಶೈಲಿ, ವಿಭಿನ್ನ ಪಾತ್ರಗಳು ಮತ್ತು ಮನಮುಟ್ಟುವ ಹಿನ್ನೆಲೆ ಸಂಗೀತದೊಂದಿಗೆ, ನಾವು ಬೆಳೆದು ಬಂದ ಕಥೆಯನ್ನು ಇಂದಿನ ಪೀಳಿಗೆಗೆ ತಲುಪಿಸಲಿದೆ" ಎಂದರು.
ಸರಣಿಯ ನಿರ್ಮಾಪಕಿ ಅನು ಸಿಕ್ಕಾ, "ಕುರುಕ್ಷೇತ್ರ ಯುದ್ಧವು ಮರೆಯಲಾಗದ ಮತ್ತು ಎಂದೆಂದಿಗೂ ಪ್ರಸ್ತುತವಾದದ್ದು. ಇದು ಕರ್ತವ್ಯ, ಭವಿಷ್ಯ ಮತ್ತು ನೈತಿಕ ಆಯ್ಕೆಗಳ ಸಂಘರ್ಷವಾಗಿದೆ. ಈ ಅನಿಮೇಟೆಡ್ ಸರಣಿಯ ಮೂಲಕ, ಕುರುಕ್ಷೇತ್ರದ 18 ದಿನಗಳನ್ನು ವಿಭಿನ್ನ ದೃಷ್ಟಿಕೋನದಿಂದ ಅನ್ವೇಷಿಸಲಾಗಿದ್ದು, ಸಾರ್ವಕಾಲಿಕ ಜ್ಞಾನವನ್ನು ದೃಶ್ಯ ಕಥೆ ಹೇಳುವ ಶಕ್ತಿಯೊಂದಿಗೆ ಬೆರೆಸಲಾಗಿದೆ" ಎಂದು ಹೇಳಿದ್ದಾರೆ.