Skip to main content
ವಿಡಿಯೋ
1/2
weather

ತಡರಾತ್ರಿ ಸುರಿದ ಧರಾಕಾರ ಮಳೆಗೆ ಬೆಂಗಳೂರಿನಲ್ಲಿ ಧರೆಗುರುಳಿದ ಬೃಹತ್‌ ಮರ, ಸಂಚಾರ ಅಸ್ಥವ್ಯಸ್ಥ…!!

By Pavitra Ganapathi Baradavalli
ತಡರಾತ್ರಿ ಸುರಿದ ಧರಾಕಾರ ಮಳೆಗೆ ಬೆಂಗಳೂರಿನಲ್ಲಿ ಧರೆಗುರುಳಿದ ಬೃಹತ್‌ ಮರ, ಸಂಚಾರ ಅಸ್ಥವ್ಯಸ್ಥ…!!

ಬೆಂಗಳೂರಿನ ಮಳೆ ಅಬ್ಬರ ಹೆಚ್ಚಾದ ಹಿನ್ನೆಲೆ ಸಾಕಷ್ಟು ಅನಾಹುತಗಳು ನಡೆದಿವೆ. ಅದರಲ್ಲೂ ಬೆಂಗಳೂರಿನಲ್ಲಿ ರಸ್ತೆಗೆ ಬೃಹತ್‌ ಮರವೊಂದು ಉರುಳಿದೆ. ಇದರಿಂದ ಚಾಮರಾಜಪೇಟೆ ಮುಖ್ಯರಸ್ತೆಯ ಸಂಚಾಋ ಸಂಪೂರ್ಣ ಬಂದ್‌ ಆಗಿದೆ. ಬುಡ ಸಮೇತ ರಸ್ತೆಗೆ ಬೃಹತ್‌ ಮರವೊಂದು ನೆಲಕ್ಕುರುಳಿದೆ.

ಬೆಂಗಳೂರು: ಬೆಂಗಳೂರಿನ ಮಳೆ ಅಬ್ಬರ ಹೆಚ್ಚಾದ ಹಿನ್ನೆಲೆ ಸಾಕಷ್ಟು ಅನಾಹುತಗಳು ನಡೆದಿವೆ. ಅದರಲ್ಲೂ ಬೆಂಗಳೂರಿನಲ್ಲಿ ರಸ್ತೆಗೆ ಬೃಹತ್‌ ಮರವೊಂದು ಉರುಳಿದೆ. ಇದರಿಂದ ಚಾಮರಾಜಪೇಟೆ ಮುಖ್ಯರಸ್ತೆಯ ಸಂಚಾಋ ಸಂಪೂರ್ಣ ಬಂದ್‌ ಆಗಿದೆ. ಬುಡ ಸಮೇತ ರಸ್ತೆಗೆ ಬೃಹತ್‌ ಮರವೊಂದು ನೆಲಕ್ಕುರುಳಿದೆ. ರಸ್ತೆಗೆ ಮರ ಉರುಳಿದ ಕಾರಣ ಮಕ್ಕಳಕೂಟಕ್ಕೆ ಸಾಗುವ ರಸ್ತೆ ಮಾರ್ಗವೂ ಸಹ ಸಂಪೂರ್ಣ ಬಂದ್‌ ಆಗಿದೆ.ಇದನ್ನೂ ಓದಿ: ಸೋನಿಯಾ ಗಾಂಧಿ ವಿರುದ್ಧದ ಕೃತಕ ದಸ್ತಾವೇಜು(ಕಡತ) ಆರೋಪ: ಇಂದು ಸಂಜೆ 4ಕ್ಕೆ ದೆಹಲಿ ನ್ಯಾಯಾಲಯದ ತೀರ್ಪು 


ಯಂತ್ರದ ಮೂಲಕ ರಸ್ತೆ ತೆರವು ಮಾಡೋ ಕೆಲಸಗಳು ನಡೆಯುತ್ತಿದೆ. ಆದರೆ ರಸ್ತೆಗೆ ಮರ ಉರುಳುವ ಸಂದರ್ಭದಲ್ಲಿ ಯಾವುದೆ ವಾಹನ ಸಂಚಾರ ಇರಲಿಲ್ಲವಾದ ಕಾರಣ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ತಿಳಿದುಬಂದಿದೆ.

ನಿನ್ನೆ ತಡರಾತ್ರಿಯಿಂದಲೇ ಆರಂಭವಾದ ಏಕಾಏಕಿ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, ಬೆಂಗಳೂರಿನ ರಸ್ತೆಯ ಎಲ್ಲೆಂದರಲ್ಲಿ ಮರಗಳು ಧರೆಗೆ ಉರುಳಿದೆ. ಹಾಗೇ ರಾತ್ರಿ ಸುರಿದ ಧಾರಾಕಾರ ಮಳೆಗೆ ಹೆದ್ದಾರಿ ಜಲಾವೃತವಾಗಿದೆ.ಇದನ್ನೂ ಓದಿ: ಕೆ.ಸಿ. ವೀರೇಂದ್ರ ಪಪ್ಪಿಯ ಅಕ್ರಮ ಹಣ ವರ್ಗಾವಣೆ ಪ್ರಕರಣ: ಅನಿಲ್ ಗೌಡರಿಗೆ ಈಡಿ ಸಮನ್ಸ್ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ..!


ಎಲೆಕ್ಟ್ರಾನಿಕ್‌ ಸಿಟಿಯ ವೀರಸಂದ್ರ ಸಿಗ್ನಲ್‌ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.

ಹೆದ್ದಾರಿಯಲ್ಲಿ ನಾಲ್ಕೈದು ಅಡಿ ನೀರು ನಿಂತಿರವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರಸ್ತೆಯಲಲಿ ಸಿಲುಕಿದ ವಾಹನಗಳು ಹಾಗೇ ನೀರು ತುಂಬಿದ ರಸ್ತೆಯಲ್ಲಿ ಆಂಬ್ಯುಲೆನ್ಸ್‌ ಸಿಕ್ಕಿ ಹಾಕಿಕೊಂಡು ಪರದಾಡುವ ಪರಿಸ್ಥಿತಿ ಎದುರಾಗಿದೆ.Noise Aura Buds in Ear Truly Wireless Earbuds with 60H of Playtime, Quad Mic with ENC, Dual Device Pairing, Instacharge(10 Min=150 Min),12Mm Polymer Composite Driver,BT V5.3(Aura Black)