Skip to main content
ವಿಡಿಯೋ
1/2
crime

ಗ್ಯಾಂಗ್‌ ರೇ*ಪ್: ಕಿವಿಯೂ ಕೇಳದ, ಮಾತು ಬಾರದ ಗರ್ಭಿಣಿಯ ಸಾವು..!

By Vinutha U
ಗ್ಯಾಂಗ್‌ ರೇ*ಪ್: ಕಿವಿಯೂ ಕೇಳದ, ಮಾತು ಬಾರದ ಗರ್ಭಿಣಿಯ ಸಾವು..!

ಆದರೆ ನಂತರ ಗರ್ಭಿಣಿಯಾಗಿದ್ದರು ಕೂಡ ಬಿಡದೇ ಆಕೆಯನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಆರೋಪಿಗಳು ಆಕೆಗೆ ಗರ್ಭಪಾತದ ಮಾತ್ರೆಯನ್ನು ನೀಡಿ ಅವಳನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದೆ.

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಹಮೀರ್‌ಪುರದಲ್ಲಿ 26 ವರ್ಷದ ಮಾತು ಬಾರದ, ಕಿವಿಯೂ ಕೇಳದ ಗರ್ಭಿಣಿ ಮಹಿಳೆಯೊಬ್ಬಳು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ನಂತರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ಈ ಹಿಂದೆ ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿ ಆಕೆ ಗರ್ಭಧರಿಸಿದ್ದಳು, ಆದರೆ ನಂತರ ಗರ್ಭಿಣಿಯಾಗಿದ್ದರು ಕೂಡ ಬಿಡದೇ ಆಕೆಯನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಆರೋಪಿಗಳು ಆಕೆಗೆ ಗರ್ಭಪಾತದ ಮಾತ್ರೆಯನ್ನು ನೀಡಿ ಅವಳನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದೆ.

ಇದರಿಂದ ನೋವು ತಾಳಲಾಗದೆ ಆಕೆಯ ಆರೋಗ್ಯ ಹದಗೆಟ್ಟು, ಕಾನ್ಪುರದ ಲಾಲಾ ಲಜಪತ್‌ ರಾಯ್‌ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ವಿವಾಹಿತೆಯಾದ ಈ ಮಹಿಳೆಯು ಅತ್ತೆ-ಮಾವರೊಂದಿಗೆ ಹೊಂದಾಣಿಕೆಯಾಗದ ಕಾರಣದಿಂದಾಗಿ ತನ್ನ ತವರಿನಲ್ಲಿ ವಾಸಿಸುತ್ತಾ ಹೇಗೋ ತನ್ನ ಜೀವನವನ್ನು ಸಾಗಿಸುತ್ತಿದ್ದಳು. ಆಕೆಗೆ ಆ ಗ್ರಾಮದ ಕೆಲವರ ಜೊತೆ ಪರಿಚಯವಿತ್ತು. ಅವರು ಆಕೆಯ ಮೇಲೆ ಈ ಹಿಂದೆ ಕೆಲವು ಬಾರೀ ಅತ್ಯಾಚಾರವನ್ನು ಎಸಗಿದ್ದರು. ಇದರಿಂದಲೇ ಆಕೆ ಗರ್ಭಿಣಿಯಾಗಿದ್ದಳು ಎಂದು ತಿಳಿದುಬಂದಿದೆ.

Shining Diva Fashion Jewellery Girls/Women's Black Fabric Lace Chokers Stylish Necklace Combo Set of 7 Pieces (cmb271)

ಭಾನುವಾರ ಸಂಜೆ, ಮನೆಯಲ್ಲಿ ಒಂಟಿಯಾಗಿದ್ದ ಆಕೆಯನ್ನು ಆರೋಪಿಗಳು ಹೇಗೋ ಅವಳ ಮನವೊಲಿಸಿ ಹೊಲಕ್ಕೆ ಕರೆದುಕೊಂಡು ಹೋಗಿದ್ದಾರೆ ನಂತರ ಅವಳಿಗೆ ಗರ್ಭಪಾತದ ಮಾತ್ರೆಯನ್ನು ನೀಡಿ ಒಬ್ಬೊಬ್ಬರಾಗಿ, ಒಬ್ಬರಾದ ನಂತರ ಒಬ್ಬರು ಆಕೆಯ ಮೇಲೆ ಅತ್ಯಾಚಾರವನ್ನು ನಡೆಸಿದ್ದಾರೆ. ನಂತರ ಈ ವಿಷಯ ತಿಳಿದ ಆಕೆಯ ಕುಟುಂಬಸ್ಥರು ಆರೋಪಿಗಳನ್ನು ಎದುರಿಸಿ ಪೋಲಿಸರಿಗೆ ತಿಳಿಸುತ್ತೇವೆ ಎಂದಾಗ ಆರೋಪಿಗಳು ಕುಟುಂಬಕ್ಕೆ ಬೆದರಿಕೆಯನ್ನು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಅಷ್ಟರಲ್ಲಿ ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿ ಕ್ಷೀಣಿಸಿದ್ದರಿಂದ ಕುಟುಂಬದವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಸಂತ್ರಸ್ತೆಯ ತಂದೆ ದೂರು ನೀಡಿದ್ದು, ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸರ್ಕಲ್‌ ಇನ್ಸ್‌ ಪೆಕ್ಟರ್‌ ರಾಜೇಶ್‌ ಕಮಲ್‌ ರವರ ಪ್ರಕಾರ, ಆರೋಪಿಗಳ ವಿಚಾರಣೆಯನ್ನು ನಡೆಡಸುತ್ತಿದ್ದಾರೆ, ಮತ್ತು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.