Skip to main content
ವಿಡಿಯೋ
1/2
general

₹25 ಲಕ್ಷ ಕೊಟ್ಟರೆ ಸೀಟ್‌? ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 15% NRI ಕೋಟಾ ವಿರುದ್ಧ ಎಐಡಿಎಸ್‌ಒ ಪ್ರತಿಭಟನೆ!

By Gireesh Vasishta
 ₹25 ಲಕ್ಷ ಕೊಟ್ಟರೆ ಸೀಟ್‌? ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 15% NRI ಕೋಟಾ ವಿರುದ್ಧ ಎಐಡಿಎಸ್‌ಒ ಪ್ರತಿಭಟನೆ!

“ಕರ್ನಾಟಕದಲ್ಲಿ 24 ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದು, ಸುಮಾರು 4000 ಎಂಬಿಬಿಎಸ್ ಸೀಟುಗಳಿವೆ. ಹೊಸ ಕೋಟಾದ ಮೂಲಕ ಸುಮಾರು 600 ಸೀಟುಗಳನ್ನು ಹರಾಜು ಹಾಕಲಾಗುತ್ತಿದೆ. ಈಗಾಗಲೇ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 12,447ಕ್ಕೂ ಹೆಚ್ಚು ಬೋಧನಾ ಹುದ್ದೆಗಳು ಖಾಲಿ ಇವೆ.

 ₹25 ಲಕ್ಷ ಕೊಟ್ಟರೆ ಸೀಟ್‌? ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 15% NRI ಕೋಟಾ ವಿರುದ್ಧ ಎಐಡಿಎಸ್‌ಒ ಪ್ರತಿಭಟನೆ!

ಕರ್ನಾಟಕ ಸರ್ಕಾರವು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 15% NRI  ಕೋಟಾ ಜಾರಿಗೆ ತರುವ ಕ್ರಮವನ್ನು ಖಂಡಿಸಿ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟುಡೆಂಟ್ಸ್ ಆರ್ಗನೈಸೇಶನ್ (AIDSO) ಇಂದು ಬೆಂಗಳೂರಿನ ಫ್ರೀಡಮ್ ಪಾರ್ಕ್‌ನಲ್ಲಿ ಪ್ರತಿಭಟನೆಯನ್ನು ನಡೆಸಿತು.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women

 

ಸಭೆಯನ್ನು ಉದ್ದೇಶಿಸಿ ಮಾತನಾಡಿದ AIDSO ಕರ್ನಾಟಕ ರಾಜ್ಯ ಖಜಾಂಚಿ ಸುಭಾಷ್ ಬಿ.ಜೆ. ಹೇಳಿದರು:

ವೈದ್ಯ ವೃತ್ತಿ ಒಂದು ಉನ್ನತ್ತವಾದ ವೃತ್ತಿ. ಅದು ಸಮಾಜ ಸೇವೆ ಮಾಡಲು, ನರಳುತ್ತಿರುವವರ ನೋವನ್ನು ನಿವಾರಿಸಲು ಇರುವ ವೃತ್ತಿ. ಆದರೆ ಸರ್ಕಾರ 15% NRI ಕೋಟಾವನ್ನು ಜಾರಿಗೆ ತಂದು ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಮಾರಾಟಮಾಡುತ್ತಿದೆ. ಹಳ್ಳಿ-ಬಡ ಕುಟುಂಬದಿಂದ ಬಂದ ಬಡ ವಿದ್ಯಾರ್ಥಿ ದಿನರಾತ್ರಿ ಓದಿ ವೈದ್ಯಕೀಯ ಸೀಟು ಪಡೆಯಲು ಶ್ರಮಿಸುತ್ತಾನೆ. ಆದರೆ ಅವನನ್ನು ಕಡೆಗಣಿಸಿ, ವರ್ಷಕ್ಕೆ ₹25 ಲಕ್ಷ ಕೊಡಬಲ್ಲ ಶ್ರೀಮಂತ ವಿದ್ಯಾರ್ಥಿಗೆ ಪ್ರವೇಶ ನೀಡಲಾಗುತ್ತಿದೆ. ಇಂತಹ ವ್ಯವಸ್ಥೆ ರೋಗಿಗಳನ್ನು ಪ್ರೀತಿಸುವ ವೈದ್ಯರನ್ನು ಉತ್ಪಾದಿಸುತ್ತದೆಯೇ ಅಥವಾ ಬಿಳಿ ಕೋಟ್ ಧರಿಸಿದ ವ್ಯಾಪಾರಿಗಳನ್ನು ಉತ್ಪಾದಿಸುತ್ತದೆಯೇ?  ಎಂದು ಪ್ರಶ್ನಿಸಿದರು.ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 (2025): ₹1.93 ಲಕ್ಷ: ವಿಂಟೇಜ್ ಆಕರ್ಷಣೆಯೊಂದಿಗೆ ಆಧುನಿಕ ತಂತ್ರಜ್ಞಾನ, ಮಾರುಕಟ್ಟೆಯಲ್ಲಿ ಆಧಿಪತ್ಯ: ಇಲ್ಲಿದೆ ಮಾಹಿತಿ

 

ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ AIDSO ಜಿಲ್ಲಾ ಅಧ್ಯಕ್ಷೆ ಅಪೂರ್ವಾ ಸಿ.ಎಂ. ಹೇಳಿದರು:

ಕರ್ನಾಟಕದಲ್ಲಿ 24 ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದು, ಸುಮಾರು 4000 ಎಂಬಿಬಿಎಸ್ ಸೀಟುಗಳಿವೆ. ಹೊಸ ಕೋಟಾದ ಮೂಲಕ ಸುಮಾರು 600 ಸೀಟುಗಳನ್ನು ಹರಾಜು ಹಾಕಲಾಗುತ್ತಿದೆ. ಈಗಾಗಲೇ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 12,447ಕ್ಕೂ ಹೆಚ್ಚು ಬೋಧನಾ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುವ ಬದಲು ಹಾಗೂ ಅಗತ್ಯಕ್ಕೆ ಅನುಗುಣವಾಗಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಬದಲು, ಸರ್ಕಾರ ಈಗಿನ ಸೀಟುಗಳನ್ನು ನಾಚಿಕೆ ಇಲ್ಲದೆ ಮಾರಾಟ ಮಾಡುತ್ತಿದೆ. ಪ್ರತಿವರ್ಷ NEET ಕೌನ್ಸೆಲಿಂಗ್‌ ನಂತರ ಅನೇಕ ವೈದ್ಯಕೀಯ ಆಕಾಂಕ್ಷಿಗಳು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದು ಕೇವಲ ಸಾರ್ವಜನಿಕ ಶಿಕ್ಷಣದ ಮೇಲೆ ದಾಳಿ ಅಲ್ಲ, ಬಡವರ, ಮಧ್ಯಮ ವರ್ಗದವರ, ಪರಿಶ್ರಮ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ವಿರುದ್ಧದ ವರ್ಗ ನೀತಿಯಾಗಿದೆ. ಸರ್ಕಾರದ ಈ ವಿದ್ಯಾರ್ಥಿ ವಿರೋಧಿ, ಸಮಾಜ ವಿರೋಧಿ NRI ಕೋಟಾ ತಕ್ಷಣವೇ ಹಿಂಪಡೆಯಬೇಕು.” ಎಂದು ಹೇಳಿದರು.‘ಸೈಬರ್ ಕಮಾಂಡ್‌ ಸೆಂಟರ್‌ʼಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿದರೆ, ಹೊಸ ಯುಗದ ಅಪರಾಧ ಹತ್ತಿಕ್ಕಲು ಸಾಧ್ಯ: ಹೈಕೋರ್ಟ್‌

 

AIDSO ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್ ಕುಮಾರ್. ವಿ ಹಾಗೂ ಇತರ ಕಾರ್ಯಕಾರಿ ಸದಸ್ಯರು, ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಮೊಹಮ್ಮದ್ ಮೊಹ್ಸಿನ್ ಅವರಿಗೆ ವಿಕಾಸಸೌಧದಲ್ಲಿ ಮನವಿ ಪತ್ರವನ್ನೂ ಸಲ್ಲಿಸಲಾಯಿತು.