Skip to main content
ವಿಡಿಯೋ
1/2
politics

ಸರ್ಕಾರಿ ಸಮಾರಂಭಗಳಲ್ಲಿ ಅತಿಥಿಗಳ ಸಂಖ್ಯೆಗೆ ಕಡಿವಾಣ: ವೇದಿಕೆಯ ಮೇಲೆ ಕೇವಲ 9 ಜನರಿಗಷ್ಟೇ ಅವಕಾಶ..!

By Vinutha U
ಸರ್ಕಾರಿ ಸಮಾರಂಭಗಳಲ್ಲಿ ಅತಿಥಿಗಳ ಸಂಖ್ಯೆಗೆ ಕಡಿವಾಣ: ವೇದಿಕೆಯ ಮೇಲೆ ಕೇವಲ 9 ಜನರಿಗಷ್ಟೇ ಅವಕಾಶ..!

ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಸ್ತು ಸ್ಥಾಪಿಸುವ ಸುಸ್ಥಿರ ಉಪಕ್ರಮದ ಭಾಗ ಮಾತ್ರ ಎಂದಿದ್ದಾರೆ. ಸದ್ಯದ ಪತ್ರಿಕೆಗಳಲ್ಲಿ ಅನೇಕ ಹೆಸರುಗಳನ್ನು ಮುದ್ರಿಸಲಾಗುತ್ತದೆಯಾದರೂ, ಅವರಲ್ಲಿ ಬಹುತೇಕರು ಆಗಮಿಸುವುದಿಲ್ಲ. ಹೀಗಾಗಿ, ಈ ಹೊಸ ನಿಯಮಗಳು ಅಗತ್ಯ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಮತ್ತು ಜಿಲ್ಲಾ ಮಟ್ಟದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಸ್ತನ್ನು ಕಾಪಾಡುವ ಉದ್ದೇಶದಿಂದ, ವೇದಿಕೆಯಲ್ಲಿ ಆಸೀನರಾಗುವ ಅತಿಥಿಗಳ ಸಂಖ್ಯೆಗೆ ಕರ್ನಾಟಕ ಸರ್ಕಾರವು ಕಡಿವಾಣ ಹೇರಿದ್ದು, ಆಹ್ವಾನ ಪತ್ರಿಕೆಗಳಲ್ಲಿ ಅತಿಥಿಗಳ ಹೆಸರನ್ನು ಕೇವಲ 9 ಜನರಿಗಷ್ಟೇ ಸೀಮಿತಗೊಳಿಸುವಂತೆ ಹೊಸ ನಿಯಮಗಳನ್ನು ರೂಪಿಸಿದೆ. ತೀವ್ರ ಅಗತ್ಯತೆ ಇದ್ದರೆ ಮಾತ್ರ 13 ಜನಗಳವರೆಗೆ ಅನುಮತಿಸಬಹುದು. ಈ ನಿಯಮಗಳ ಪಾಲನೆ ಮತ್ತು ಅತಿಥಿಗಳ ಸಂಖ್ಯೆಯ ನಿರ್ಧಾರದ ಅಧಿಕಾರವನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸಲಾಗಿದೆ, ಇದಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಎಚ್.ಕೆ. ಪಾಟೀಲ್, ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಶಿಷ್ಟಾಚಾರ ಪಟ್ಟಿಯನ್ನು ಅಂತಿಮಗೊಳಿಸುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಿದರು. ವಾಸ್ತವಿಕ ಪರಿಸ್ಥಿತಿಯನ್ನು ಗಮನಿಸಿ, ಈ ನಿಟ್ಟಿನಲ್ಲಿ ತೀರ್ಮಾನಗಳನ್ನು ಕೈಗೊಳ್ಳುವ ಜವಾಬ್ದಾರಿ ಅವರದ್ದಾಗುತ್ತದೆ. ಈ ನಿರ್ಧಾರವು ಆರ್‌ಸಿಬಿ ತಂಡದ ಸನ್ಮಾನ ಕಾರ್ಯಕ್ರಮಕ್ಕೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

VAIRAGEE Women Soft Rimzim Silk Striped Pattern Ready To Wear Embroidery Saree (2055)

ಆಹ್ವಾನ ಪತ್ರಿಕೆಯಲ್ಲಿ ಹೆಸರು ಇಲ್ಲದವರು ಕೂಡ ವೇದಿಕೆಯಲ್ಲಿ ಬಂದು ಕುಳಿತುಕೊಳ್ಳುತ್ತಾರೆ ಅಲ್ಲವೇ ಎಂಬ ಪ್ರಶ್ನೆಗೆ, ‘ಅದು ಶಿಷ್ಟಾಚಾರದ ವ್ಯಾಪ್ತಿಯಿಂದ ಹೊರಗಿರುತ್ತದೆ; ಅದು ಅಶಿಸ್ತು ಮಾತ್ರ ಎಂದೇ ಹೇಳಬಹುದು’ ಎಂದು ಪ್ರತಿಕ್ರಿಯಿಸಿದರು. ಈ ಶಿಷ್ಟಾಚಾರ ನಿಯಮಗಳು ಯಾರನ್ನೂ ಕಡೆಗಣಿಸುವ ಉದ್ದೇಶವನ್ನು ಹೊಂದಿಲ್ಲ, ಆದರೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಸ್ತು ಸ್ಥಾಪಿಸುವ ಸುಸ್ಥಿರ ಉಪಕ್ರಮದ ಭಾಗ ಮಾತ್ರ ಎಂದಿದ್ದಾರೆ. ಸದ್ಯದ ಪತ್ರಿಕೆಗಳಲ್ಲಿ ಅನೇಕ ಹೆಸರುಗಳನ್ನು ಮುದ್ರಿಸಲಾಗುತ್ತದೆಯಾದರೂ, ಅವರಲ್ಲಿ ಬಹುತೇಕರು ಆಗಮಿಸುವುದಿಲ್ಲ. ಹೀಗಾಗಿ, ಈ ಹೊಸ ನಿಯಮಗಳು ಅಗತ್ಯ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.