ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಗೆ ರಿಯಾಯಿತಿ - ಇಂದೇ ಕಡೆ ದಿನ
ಬೆಂಗಳೂರು - ಬೆಂಗಳೂರಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ಹಿನ್ನಲೆ ಸರ್ಕಾರ ನೀಡಿದ್ದ ರಿಯಾಯತಿ ಪ್ಲಾನ್ ಇಂದಿಗೆ ಕೊನೆಯಾಗಲಿದೆ. ಟ್ರಾಫಿಕ್ ಫೈನ್ ಪಾವತಿಗೆ 50% ಡಿಸ್ಕೌಂಟ್ ಇಂದು ಕೊನೆ ದಿನವಾಗಿದೆ.
ಶೇ.50% ರಷ್ಟು ರಿಯಾಯತಿಗೆ ಇಂದು ಕೊನೆ ದಿನ ಆಗಿದೆ. ಹಳೇ ಪ್ರಕರಣಗಳ ಇತ್ಯರ್ಥಗೊಳಿಸಲು ದಂಡ ಪಾವತಿಗೆ ಅವಕಾಶವನ್ನ ಸರ್ಕಾರ ನೀಡಿತು. ಆ. 23 ರಿಂದ ಸೆ.12 ವರೆಗೆ ಶೇ 50 ರಷ್ಟು ರಿಯಾಯತಿ ರಾಜ್ಯ ಸರ್ಕಾರ ನೀಡಿತ್ತು.
ಈ ಮೀಸಲಾತಿ ಯೋಜನೆ ಆಗಸ್ಟ್ 23, 2025 ರಂದು ಆರಂಭವಾಗಿದ್ದು, ಸೆಪ್ಟೆಂಬರ್ 12, 2025 ರವರೆಗೆ ಕಡಿಮೆ ದರದಲ್ಲಿ ಪಾವತಿಗಳನ್ನು ಅನುಮತಿಸುತ್ತದೆ. ಬಾಕಿ ಚಲನ್‌ಗಳು ಇರುವ ವಾಹನ ಮಾಲೀಕರು ಈ ಯೋಜನೆಯಿಂದ ಪ್ರಯೋಜನ ಪಡೆಯಬಹುದು, ಅಧಿಕೃತ ಪೋರ್ಟಲ್‌ಗಳು ಅಥವಾ ಅನುಮೋದಿತ ಕೇಂದ್ರಗಳ ಮೂಲಕ ಪಾವತಿ ಮಾಡುವ ಮೂಲಕ. ಬಿಎಂಟಿಆರ್‌ಸಿಎಲ್ ದರ ಏರಿಕೆ ವಿಚಾರ: ನ್ಯಾಯಯುತ bmrcl ದರಕ್ಕಾಗಿ ಏಳು ತಿಂಗಳ ಕಾಯುವಿಕೆ : MP ತೇಜಸ್ವಿ ಸೂರ್ಯ ಪೋಸ್ಟ್ ಹೀಗಿದೆ
ಇಲ್ಲಿಯವರೆಗೆ 28.84 ಲಕ್ಷ ಪ್ರಕರಣಗಳು ಇತ್ಯರ್ಥಗೊಳಿಸಿ ಬೆಂಗಳೂರಲ್ಲಿ ಸುಮಾರು 80.78 ಕೋಟಿ ರೂ ದಂಡ ಸಂಗ್ರಹವಾಗಿದೆ ಎಂಬ ಮಾಹಿತಿ ಇದೆ.