ರೋಡ್ ಬದಿಯ ಗುಂಡಿಯ ಒಳಕ್ಕೆ ಇಳಿದ ಸ್ಕೂಲ್ ಬಸ್: ತಪ್ಪಿದ ಅನಾಹುತ- ರಸ್ತೆಗಳ ಸುರಕ್ಷತೆಗೆ ಎಚ್ಚರಿಕೆ ಘಂಟೆ
ಬೆಂಗಳೂರು: ಈ ಬೆಳಿಗ್ಗೆ (ಸೆಪ್ಟೆಂಬರ್ 12, 2025) ಬೆಂಗಳೂರಿನ ಬಲಗೆರೆ ಪ್ರದೇಶದಲ್ಲಿ ಶಾಲಾ ಬಸ್ ರೋಡ್‌ಬದಿ ಇರುವ ಗುಂಡಿಗೆ ಬಿದ್ದಿರುವ ಘಟನೆ ನಡೆದಿದೆ, ಸ್ಕೂಲ್ ಬಸ್‌ನ ಎಡಗಡೆಯ 2 ಚಕ್ರಗಳು ಗುಂಡಿ ಅಥವ ಚರಂಡಿಗೆ ಬಿದ್ದಿದೆ, ನೀರು ತುಂಬಿದ್ದ ಕಾರಣ ಅದು ಗುಂಡಿಯೊ ಅಥವ ಚರಂಡಿಯೊ ಕಾಣದಂತಾಗಿದೆ. ಬಲಗೇರಿ-ಪನತೂರು ಮುಖ್ಯರಸ್ತೆಯ ನಡುವೆ, ಮಕ್ಕಳನ್ನೂ ಶಿಕ್ಷಕರನ್ನೂ ಶಾಲೆಗೆ ಕರದೊಯ್ಯುತ್ತಿದ್ದ ಬಸ್‌ಗೆ ಚಿಕ್ಕ ಅಪಘಾತವಾಗಿದೆ.2020 ಈಶಾನ್ಯ ದೆಹಲಿ ಗಲಭೆ: ಸುಪ್ರೀಂ ಕೋರ್ಟ್‌ನಲ್ಲಿ ಇಂದು ಬೇಡಿಕೆಗಳ ವಿಚಾರಣೆ
ಸಮಯೋಚಿತ ಕಾರ್ಯಾಚರಣೆ ನಡೆಸಿದ ಸ್ಥಳೀಯರು ತಕ್ಷಣ ಬಸ್ ಬಳಿ ಧಾವಿಸಿ, ಎಮರ್ಜೆನ್ಸಿ ಬಾಗಿಲನ್ನು ತೆರೆದು ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದರು. ಗಂಭೀರ ಗಾಯಗಳ ವರದಿಯಾಗಿಲ್ಲದಿದ್ದರೂ, ಈ ಘಟನೆಯು ನಗರದ "ಅಭಿವೃದ್ಧಿಶೀಲ" ಪ್ರದೇಶಗಳಲ್ಲಿನ ಮೂಲಭೂತ ಸೌಕರ್ಯಗಳ ದಯನೀಯ ಸ್ಥಿತಿಯನ್ನು ಬೆಳಕಿಗೆ ತಂದಿದೆ.Levi's Men's Slim Fit Mid Rise 511 Mid-Rise Jeans
ಬೆಂಗಳೂರು ಹೇಳಿಕೇಳಿ ಮಹಾನಗರ, ಮುಖ್ಯರಸ್ತೆಗಳನ್ನೆ ಕೇಳುವವರು ಯಾರು ಇಲ್ಲದಂತಾಗಿದೆ, ಇನ್ನು ಸ್ಥಳೀಐ ಪ್ರದೇಶದ ರಸ್ತೆಗಳ ಸ್ಥಿತಿಗಳನ್ನು ಕೇಳುವವರ್ಯಾರು ಎಂಬ ಪ್ರಶ್ನೆ ಎದುರಾಗಿದೆ, ಹೀಗಾಗಿ ಬೆಂಗಳೂರು ರಸ್ತೆಗಳು ಅದ್ಯಾವಾಗ ಸುಧಾರಿಸುತ್ತದೆ ಎಂಬುದೆ ಚಿಂತೆಯಾಗಿದೆ.