Skip to main content
ವಿಡಿಯೋ
1/2
cinema

ನಟಿ ಲೀಲಾವತಿ ಹೆಸರಲ್ಲಿ ಚೆನ್ನೈನಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದ ವಿನೋದ್ ರಾಜ್ ..ಚಿಕಿತ್ಸೆಗೆ ಫೀಸ್‌ ಎಷ್ಟು ಗೊತ್ತಾ?

By Ram Chethan
ನಟಿ ಲೀಲಾವತಿ ಹೆಸರಲ್ಲಿ ಚೆನ್ನೈನಲ್ಲಿ  ಆಸ್ಪತ್ರೆ ನಿರ್ಮಾಣ ಮಾಡಿದ ವಿನೋದ್ ರಾಜ್ ..ಚಿಕಿತ್ಸೆಗೆ ಫೀಸ್‌ ಎಷ್ಟು ಗೊತ್ತಾ?

ಸ್ಯಾಂಡಲ್‌ವುಡ್ ದಿಗ್ಗಜ ನಟಿ ಲೀಲಾವತಿಯ ನೆನಪಿಗಾಗಿ, ಪುತ್ರ ವಿನೋದ್ ರಾಜ್ ಪುದುಪಾಕಂನಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಅದನ್ನು ಅಧಿಕೃತವಾಗಿ ಉದ್ಘಾಟಿಸಿದರು

ಪ್ರಸಿದ್ಧ ನಟಿ ಲೀಲಾವತಿ ಅವರ ನೆನಪಿಗಾಗಿ, ಅವರ ಪುತ್ರ ವಿನೋದ್ ರಾಜ್ ಅವರು ಚೆನ್ನೈನ ಪುದುಪಾಕಂನಲ್ಲಿ ಆಸ್ಪತ್ರೆಯೊಂದನ್ನು ನಿರ್ಮಿಸಿದ್ದಾರೆ. ಈ ಆಸ್ಪತ್ರೆಯು ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಸ್ಥಾಪಿತವಾಗಿದ್ದು, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಇದನ್ನು ಉದ್ಘಾಟಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ದಿಗ್ಗಜ ನಟಿ ಲೀಲಾವತಿ ಅವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಆಗಾಗ ಸುದ್ದಿಯಲ್ಲಿದ್ದರು. ಅವರ ಪುತ್ರ ವಿನೋದ್ ರಾಜ್ ಕೂಡ ರಸ್ತೆ ದುರಸ್ತಿ ಮತ್ತು ಇತರೆ ಸಮಾಜಮುಖಿ ಕೆಲಸಗಳ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಅವರು ತಾಯಿಯ ಹಾದಿಯಲ್ಲೇ ಸಾಗುತ್ತಿದ್ದಾರೆ.

Samsonite Polycarbonate 8 Spinner Wheels Trolley Bag for Travel | MYTON 75 Cms Hardsided Large Check-in Luggage Bag | Suitcase for Travel | Matte Graphite

ಸಿನಿಪ್ರಿಯರಿಗೆ ಕೊನೆಗೂ ಸಿಕ್ತು ಸಿಹಿ...ಸೆಪ್ಟೆಂಬರ್ 15ರಿಂದ ಟಿಕೆಟ್ ದರ 200 ರೂ. ಮಾತ್ರ!

ವಿನೋದ್ ರಾಜ್, ನೆಲಮಂಗಲದಲ್ಲಿ ಈಗಾಗಲೇ ಆಸ್ಪತ್ರೆಯೊಂದನ್ನು ನಿರ್ಮಿಸಿದ್ದು, ಇದೀಗ ಚೆನ್ನೈನಲ್ಲಿ ಎರಡನೇ ಆಸ್ಪತ್ರೆ ಸ್ಥಾಪಿಸಿದ್ದಾರೆ. ಇದು ಅವರ ತಾಯಿ ಲೀಲಾವತಿ ಅವರ ಕನಸಾಗಿತ್ತು. ಚೆನ್ನೈನ ಪುದುಪಾಕಂನಲ್ಲಿ ನಿರ್ಮಿಸಲಾಗಿರುವ ಈ ಆಸ್ಪತ್ರೆಯನ್ನು ಪುದುಪಾಕಂ ಜಿಲ್ಲಾ ಪಂಚಾಯತ್ ಅಧ್ಯಕ್ಷ ಆರ್ಮುಗಂ ಅವರು ಉದ್ಘಾಟಿಸಿದರು. ಅಮ್ಮನ ನೆನಪಿಗಾಗಿ ನಿರ್ಮಿಸಲಾದ ಈ ಧರ್ಮಾಸ್ಪತ್ರೆಯು ಬಡ ರೋಗಿಗಳಿಗೆ ಅನುಕೂಲವಾಗಲಿದೆ.